More

    VIDEO| ಹಸಿವು ನೀಗಿಸಿದ ಮಹಿಳೆಗೆ ಬೀದಿ ನಾಯಿಯ ಕಣ್ಣೀರಿನ ಕೃತಜ್ಞತೆ: ಕಣ್ಣಂಚಲಿ ನೀರು ತರಿಸುವ ವೈರಲ್​ ವಿಡಿಯೋ!

    ಬೀಜಿಂಗ್​: ನಿಯತ್ತಿಗೆ ಉದಾಹರಣೆ ನೀಡುವುದಾದರೆ ಮೊದಲು ಬರುವುದೇ ನಾಯಿಯ ಹೆಸರು. ಕೆಲವರಿಗೆ ಉಪಕಾರ ಮಾಡಿದರೆ ಕನಿಷ್ಠ ಪಕ್ಷ ಧನ್ಯವಾದ ಹೇಳುವ ಸೌಜನ್ಯವನ್ನು ತೋರುವುದಿಲ್ಲ. ಆದರೆ, ಇಲ್ಲೊಂದು ನಾಯಿ ತನ್ನ ಹಸಿವು ನೀಗಿಸಿದವರಿಗೆ ಆನಂದಭಾಷ್ಪದ ಮೂಲಕ ಕೃತಜ್ಞತೆ ಸಲ್ಲಿಸಿದ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಜಿಂಗ್​ ಹಾಂಕ್​ ನಗರದಲ್ಲಿ ಮನಮಿಡಿಯುವ ಘಟನೆ ನಡೆದಿದೆ. ಕಾರನ್ನು ಪಾರ್ಕಿಂಗ್ ಮಾಡಲು ತೆರಳಿದಾಗ ಮಹಿಳೆಯೊಬ್ಬಳ ಕಣ್ಣಿಗೆ ಬೀದಿ ನಾಯಿಯೊಂದು ಕಂಡಿದೆ. ನಾಲಿಗೆಯನ್ನು ಹೊರಚಾಚುತ್ತಾ ಆಹಾರಕ್ಕಾಗಿ ಹುಡುಕುತ್ತಾ ಹಸಿವಿನಿಂದ ಬಳಲುತ್ತಿದ್ದ ನಾಯಿ ಕಾರು ಪಾರ್ಕ್​ ಮಾಡಿದ ಮಹಿಳೆಯನ್ನು ನೋಡಿ ಆಕೆಯ ಬಳಿ ಓಡಿಬಂದಿದೆ.

    ಇದನ್ನೂ ಓದಿ: ಕುರುಗೋಡಿನಲ್ಲಿ ಸರಣಿ ಅಪಘಾತ: ಬ್ಯಾಂಕ್ ಉದ್ಯೋಗಿಗಳಾಗಿದ್ದ ದಂಪತಿ ಸಾವು, ಬೈಕ್ ಸವಾರನಿಗೆ ತೀವ್ರ ಗಾಯ

    ತನ್ನೆರಡು ಕಾಲಗಳನ್ನು ಮೇಲಕ್ಕೆ ಚಾಚಿ ಬಾಲ ಅಲ್ಲಾಡಿಸುವುದನ್ನು ನೋಡಿದ ಮಹಿಳೆ ತನ್ನ ಕಾರಿನಲ್ಲಿದ್ದ ಬಿಸ್ಕೆಟ್​ಗಳನ್ನು ತೆಗೆದು ನಾಯಿಯ ಮುಂದೆ ಇಡುತ್ತಾಳೆ. ಶ್ವಾನ ಎಷ್ಟು ಹಸಿದಿತ್ತು ಎಂದರೆ ತಕ್ಷಣ ಇಡೀ ಬಿಸ್ಕೆಟ್ ಅನ್ನು ತನ್ನ ಹೊಟ್ಟೆಗೆ ಇಳಿಸಿಕೊಂಡಿದೆ. ಅದು ತಿನ್ನುವುದನ್ನು ನೋಡಿದಾಗಲೇ ಶ್ವಾನಕ್ಕೆ ಬಹಳ ಹಸಿವಾಗಿದೆ ಎಂಬುದು ಮಹಿಳೆಯ ಅರಿವಿಗೆ ಬಂದಿದೆ. ​

    ಇತ್ತ ಬಿಸ್ಕೆಟ್​ ತಿಂದ ಶ್ವಾನ ಕಣ್ಣೀರು ಸುರಿಸುತ್ತಾ ಹೊಟ್ಟೆ ತುಂಬಿದ ಆನಂದದಿಂದ ಮಹಿಳೆಗೆ ಧನ್ಯವಾದ ಹೇಳಿದೆ. ಇದಾದ ಮರುದಿನವು ಮಹಿಳೆ ತನ್ನ ಕಾರನ್ನು ಅದೇ ಸ್ಥಳದಲ್ಲಿ ಪಾರ್ಕ್​ ಮಾಡುವಾಗ ಶ್ವಾನ ನಿನ್ನೆಯದ್ದನ್ನು ನೆನಪಿಸಿಕೊಂಡು ಆಕೆಯ ಬಳಿ ಓಡಿಬಂದಿದೆ. ಈ ಬಾರಿಯೂ ಶ್ವಾನ ತನ್ನೆರಡು ಕಣ್ಣುಗಳಲ್ಲಿ ನೀರು ತುಂಬಿಕೊಂಡೆ ಬಿಸ್ಕೆಟ್​ ತಿನ್ನುತ್ತಾ ಮಹಿಳೆಯನ್ನು ನೋಡುತ್ತಾ ಧನ್ಯವಾದ ಹೇಳಿದೆ.

    ಇದನ್ನೂ ಓದಿ: ಕೇರಳದ ಲತಿಕಾ ಮನೆಗೆ ಸುದೀಪ್ ಭೇಟಿ; 15 ವರ್ಷದ ಹಿಂದಿನ ‘ಆಟೋಗ್ರಾಫ್​’ ದಿನಗಳನ್ನು ನೆನೆದ ಕಿಚ್ಚ

    ಇದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ವಿಡಿಯೋ ನೋಡಿದವರು ಹಸಿವಿನಿಂದ ಬಳಲುವ ನಾಯಿ ನೋಡಿದರೆ ದಯವಿಟ್ಟು ಏನಾದರೂ ಆಹಾರ ನೀಡಿ ಎಂದು ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಟೀ ಕೊಟ್ಟು ಸ್ನಾನಕ್ಕೆ ತೆರಳಿದ ಚಿಕ್ಕಮ್ಮ: ಬಾಗಿಲು ಬಡಿದವನನ್ನು ಪ್ರಶ್ನಿಸಿದವಳಿಗೆ ಕಾದಿತ್ತು ಶಾಕ್​!

    ಕ್ರಿಸ್​ಮಸ್​ ಉಡುಗೊರೆಯಾಗಿ ಪ್ರೇಯಸಿಯ ಡಿಎನ್​ಎ ಪರೀಕ್ಷೆ ಮಾಡಿಸಿದ ಬಾಯ್​ಫ್ರೆಂಡ್​ಗೆ ಕಾದಿತ್ತು ಶಾಕ್​!

    ಬರೀ ಐದು ಸಾವಿರ ರೂಪಾಯಿಗೇ ಮರ್ಡರ್​!; ಮತ್ತಲ್ಲಿ ಮತ್ತೇನೋ ಆಯ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts