More

    ಸದಾಶಿವಗಡ-ಕದ್ರಾ ಮಾರ್ಗದಲ್ಲಿ ಬಿಡಾಡಿ ದನಗಳ ಹಾವಳಿ

    ಕಾರವಾರ: ಸದಾಶಿವಗಡ-ಕದ್ರಾ ಮಾರ್ಗದಲ್ಲಿ ಬಿಡಾಡಿ ದನಗಳ ಹಾವಳಿ ತಪ್ಪಿಸುವಂತೆ ಕೆಜಿಎಸ್ ಎಸ್ ಸಿ ಮತ್ತು ಎಸ್ ಟಿ ಎಂಪ್ಲಾಯೀಸ್ ಅಸೋಸಿಯೇಶನ್ ಸದಸ್ಯರು ಶಾಸಕರು ಹಾಗೂ ಜಿಪಂ ಸಿಇಒಗೆ ಪತ್ರ ಬರೆದಿದ್ದಾರೆ.

    ಕಾರವಾರ ತಾಲೂಕಿನ ಕದ್ರಾ, ಗೋಟೆಗಾಳಿ, ಘಾಡಸಾಯಿ, ಹಣಕೋಣ, ಹಳಹಾ, ಅಸ್ನೋಟಿ, ಚಿತ್ತಾಕುಲಾ, ದೇವಳಮಕ್ಕಿ, ಕೆರವಡಿ, ವೈಲವಾಡ ಗ್ರಾಪಂಗಳ ವ್ಯಾಪ್ತಿಯ ರಸ್ತೆಗಳಲ್ಲಿ‌ ಬಿಡಾಡಿ ದನಗಳ ಹಾವಳಿ ಹೆಚ್ಚಿದೆ.

    ಈ ಭಾಗದ ರಸ್ತೆಗಳು ಸಾರ್ವಜನಿಕ ಸಂಚಾರಕ್ಕೆ ಸುರಕ್ಷಿತವಾಗಿಲ್ಲ.‌ ಬಿಡಾಡಿ ದನಗಳು ರಸ್ತೆ ಮಧ್ಯದಲ್ಲಿ ಗುಂಪು, ಗುಂಪಾಗಿ ರಸ್ತೆ ಮಧ್ಯದಲ್ಲಿ ನಿಂತುಕೊಂಡಿರುತ್ತವೆ.‌ ಮಲಗಿರುತ್ತವೆ.

    ಇದನ್ನೂ ಓದಿ: ಟುಪೊಲೆವ್‌ ಬಂತು ಚಪಲ್‌ ಹಾಳಾಯ್ತು

    ಅದನ್ನು ತಪ್ಪಿಸಲು ಹೋದ ಪ್ರಯಾಣಿಕರ‌ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ.

    ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆಗಳು ಬಿಡಾಡಿ ದನಗಳ ಹಾವಳಿ ತಪ್ಪಿಸಿ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಘಟನೆಯ ಅಧ್ಯಕ್ಷ ಶಿವಾನಂದ ಬಿ.ರಾಠೋಡ, ಕಿರಣ ಎಂ.‌ಚೋರಕರ್ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts