More

    ಟುಪೊಲೆವ್‌ ಬಂತು ಚಪಲ್‌ ಹಾಳಾಯ್ತು

    ಕಾರವಾರ: ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಹೊಸ ಯುದ್ಧ ವಿಮಾನದ ಮ್ಯೂಸಿಯಂ ಸಿದ್ಧವಾಗುತ್ತಿದೆ. ಆದರೆ, ಹಿಂದಿನಿಂದ ಇದ್ದ ಚಪಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯ ನಿರ್ವಹಣೆ ಇಲ್ಲದೇ ಸೊರಗಿದೆ.
    2019 ರಲ್ಲಿ ಭಾರತೀಯ ನೌಕಾಸೇನೆ ಮ್ಯೂಸಿಯಂನ್ನು ಸುಮಾರು 20 ಲಕ್ಷ ರೂ.ಗಳಲ್ಲಿ ರಿಪೇರಿ ಮಾಡಿತ್ತು. ನಂತರ ಇದಕ್ಕೆ ಒಂದು ಹನಿ ಪೇಂಟ್ ಹೊಡೆದಿಲ್ಲ. ಹಾಳಾದ ವಸ್ತುಗಳನ್ನು ರಿಪೇರಿ ಮಾಡಿಲ್ಲ. ಇದರಿಂದ ಯುದ್ಧ ಹಡಗಿನ ಡೆಕ್ ತುಕ್ಕು ಹಿಡಿದು ಕಿತ್ತು ಬೀಳುವ ಹಂತದಲ್ಲಿದೆ.
    ಮೆಟ್ಟಿಲು ಇಳಿಯುವಲ್ಲಿ ಅಳವಡಿಸಿರುವ ಆಧಾರದ ಸರಳುಗಳು ಕಿತ್ತು ಬರುತ್ತಿವೆ. ನೀರು ಒಳಗಡೆ ಸೋರಿಕೆಯಾಗುತ್ತಿದ್ದು, ವಸ್ತು ಸಂಗ್ರಹಾಲಯದ ಒಳಗಿನ ನೌಕಾ ಅಧಿಕಾರಿಗಳ ಪುತ್ಥಳಿಗಳು ರಂಗು ಕಳೆದುಕೊಂಡಿವೆ. ಫ್ಲೈವುಡ್‌ನಿಂದ ಮಾಡಿದ ಮೇಲ್ಛಾವಣಿ ನೀರಿನಲ್ಲಿ ಒದ್ದೆಯಾಗಿ ಕಳಚಿ ಬೀಳುತ್ತಿದೆ.
    ಡೆಕ್ ಮೇಲೆ ಕಾಲಿಟ್ಟಲ್ಲಿ ಎಲ್ಲಿ ಒಳಗಡೆ ಕುಸಿದು ಬೀಳುತ್ತೇವೋ ಎಂಬ ಪರಿಸ್ಥಿತಿ ಇದೆ. ಲೈಟಿಂಗ್ ವ್ಯವಸ್ಥೆ ಹಾಳಾಗಿದೆ. ಎಸಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇಲ್ಲ. ನೌಕಾಸೇನೆಯ ಯುದ್ಧ ಸಾಹಸದ ಈ ಹಿಂದೆ ತೋರಿಸುತ್ತಿದ್ದ ಸಿನಿಮಾ ಬಂದಾಗಿದೆ. ಎದುರಿನ ಗಾರ್ಡನ್ ಮುದ ನೀಡುವ ಪರಿಸ್ಥಿತಿಯಲ್ಲಿಲ್ಲ. ಎದುರಿಗೆ ಅಳವಡಿಸಿದ್ದ ಕ್ಷಿಪಣಿ, ಟಾರ್ಪೆಡೊಗಳು ಬಣ್ಣ ಮಾಸಿವೆ.
    ಪ್ರತಿ ಪ್ರವಾಸಿಗರಿಂದ ಪ್ರವೇಶ ಶುಲ್ಕ ಪಡೆಯಲಾಗುತ್ತದೆ. ಪ್ರತಿ ದಿನ ಕನಿಷ್ಠ 500 ರೂ. ಶುಲ್ಕ ಸಂಗ್ರಹವಾಗುತ್ತದೆ. ಆದರೆ, ಅದರಿಂದ ಸಿಬ್ಬಂದಿಗೆ ವೇತನ ಪಾವತಿ ಬಿಟ್ಟರೆ ಬರ‍್ಯಾವುದೇ ನಿರ್ವಹಣೆ ಕೆಲಸವನ್ನು ಪ್ರವಾಸೋದ್ಯಮ ಇಲಾಖೆ ಮಾಡುತ್ತಿಲ್ಲ. ಸಂಗ್ರಹವಾದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆಯೇ ಎಂಬುದು ಪ್ರವಾಸಿಗರ ಪ್ರಶ್ನೆಯಾಗಿದೆ.
    ಟುಪೆಲಿವ್ ಶೀಘ್ರ ಸಿದ್ಧ
    ಚಪಲ್ ಯುದ್ಧ ಹಡಗಿನ ಪಕ್ಕದಲ್ಲೇ ಟುಪೆಲಿವ್ ಎಂಬ ನೌಕಾಸೇನೆಯಿಂದ ನಿವೃತ್ತವಾದ ವಿಮಾನವನ್ನು ವಸ್ತು ಸಂಗ್ರಹಾಲಯವಾಗಿಸುವ ಕಾರ್ಯ ಪ್ರಗತಿಯಲ್ಲಿದೆ. ಭಾರತೀಯ ನೌಕಾಸೇನೆಯಿಂದ ಗುತ್ತಿಗೆ ಪಡೆದ ಖಾಸಗಿ ಕಂಪನಿ ವಿಮಾನದ ಬಿಡಿ ಭಾಗಗಳನ್ನು ತಂದು ಇಳಿಸಿದೆ. ಶೇ. 80 ರಷ್ಟು ಜೋಡಣಾ ಕಾರ್ಯ ಮುಕ್ತಾಯವಾಗಿದೆ. ಈ ತಿಂಗಳಾಂತ್ಯಕ್ಕೆ ಅಥವಾ ನವೆಂಬರ್‌ನಲ್ಲಿ ಮ್ಯೂಸಿಯಂ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗುವ ಸಾಧ್ಯತೆ ಇದೆ.
    ನೌಕಾ ಸೇನೆಯ ಹೆಮ್ಮೆ
    1971 ರ ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ ಹಡಗು ಐಎನ್‌ಎಸ್ ಚಪಲ್. 2005 ರಲ್ಲಿ ಸೇನೆಯಿಂದ ನಿವೃತ್ತಿಯಾದ ನಂತರ ಅದನ್ನು ಕಾರವಾರದಲ್ಲಿ ತಂದು ಇರಿಸಲಾಗಿದೆ. ವಸ್ತು ಸಂಗ್ರಹಾಲಯದ ಒಳಹೊಕ್ಕರೆ ನೌಕಾಸೇನೆ ಕಾರ್ಯನಿರ್ವಗಹಣೆಯ ಒಂದು ಸಮಗ್ರ ಪರಿಕಲ್ಪನೆ ಮೂಡುವಂತಿದೆ. ಇದನ್ನು ನೋಡಲೆಂದೇ ಹೊರ ಊರುಗಳ ಪ್ರವಾಸಿಗರು ಬರುತ್ತಾರೆ.
    ರಾಕ್ ಗಾರ್ಡನ್ ಇದೇ ಪರಿಸ್ಥಿತಿ
    ರಾಕ್ ಗಾರ್ಡನ್ ಸಹ ಇದೇ ಪರಿಸ್ಥಿತಿಯಲ್ಲಿದೆ. ಗಾರ್ಡನ್‌ನ ಒಳಗಿನ ವಿವಿಧ ಬುಡಕಟ್ಟುಗಳ ಸಂಸ್ಕೃತಿ ಬಿಂಬಿಸುವ ನೀಡುವ ಮೂರ್ತಿಗಳು ಬಣ್ಣವಿಲ್ಲದೇ ಮಾಸಿವೆ. ಫಿಶ್ ಅಕ್ವೇರಿಯಂ ಹಾಳಾಗಿ ಬಂದಾಗಿ ನಾಲ್ಕು ವರ್ಷ ಕಳೆಯುತ್ತಿದೆ. ಅದನ್ನು ರಿಪೇರಿ ಮಾಡುವ ಅಥವಾ ಹೊಸ ಕಟ್ಟಡ ನಿರ್ಮಾಣ ಮಾಡುವ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಒಟ್ಟಿನಲ್ಲಿ ಸಾಕಷ್ಟು ಪ್ರವಾಸಿಗರು ಕಾರವಾರಕ್ಕೆ ಬಂದರೂ ಅವರಿಗೆ ಇಲ್ಲಿ ಒಂದು ದಿನ ತಂಗಿ ನೋಡಬಹುದಾದ ಆಕರ್ಷಣೀಯ ತಾಣಗಳು ಹಾಳು ಸುರಿಯುತ್ತಿವೆ.



    ಚಪಲ್ ವಸ್ತು ಸಂಗ್ರಹಾಲಯ ನಿರ್ವಹಣೆಗೆ ಪ್ರವಾಸೋದ್ಯಮ ಇಲಾಖೆ ಬಳಿ ಅನುದಾನವಿಲ್ಲ. ಇದರಿಂದ ನಗರಸಭೆಗೆ ಚಪೆಲ್ ಮ್ಯೂಸಿಯಂ ದುರಸ್ತಿಗೆ ಇತ್ತೀಚೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸೂಚನೆ ನೀಡಿದ್ದಾರೆ. ಇನ್ನು ಟುಪೆಲಿವ್ ಯುದ್ಧ ವಿಮಾನ ಮ್ಯೂಸಿಯಂ ಶೀಘ್ರ ನಿರ್ಮಾಣವಾಗಲಿದ್ದು, ನಿರ್ಮಿತಿ ಕೇಂದ್ರ ಎದುರಿನ ಗಾರ್ಡನ್ ರಿಪೇರಿ ಮಾಡಲಿದೆ.
    ಬೇಬಿ ಮೊಘೇರ
    ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ
    ……..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts