More

    ಕಾಂಪ್ಲೆಕ್ಸ್​ ನಿರ್ಮಾಣ: ಬಾಳೆಹಣ್ಣು ವ್ಯಾಪಾರಿ ಹರಾಜಿನಲ್ಲಿ ಕೂಗಿದ ಮೊತ್ತ ಕೇಳಿದ್ರೆ ಶಾಕ್​ ಆಗೋದು ಖಚಿತ!

    ವಿಜಯವಾಡ: ಈತ ಯಾವುದೇ ಉದ್ಯಮಿಯು ಅಲ್ಲ, ರಿಯಲ್​ ಎಸ್ಟೇಟ್​ ಏಜೆಂಟ್​ ಅಂತೂ ಅಲ್ಲವೇ ಅಲ್ಲ, ತಳ್ಳೋ ಗಾಡಿಯಲ್ಲಿ ಬಾಳೆಹಣ್ಣು ತುಂಬಿಕೊಂಡು ಮಾರಾಟ ಮಾಡುವ ಈತ ಮಾಡಿರುವ ಕೆಲಸವೊಂದು ನೋಡಿದರೆ ಎಲ್ಲರ ಹುಬ್ಬೇರುವುದಂತೂ ಖಂಡಿತ.

    ವಿವಿರಣೆಗೆ ಬರುವುದಾದರೆ, ಇದುವರೆಗೂ ನಾನು ಹೇಳಿದ್ದು ಆಂಧ್ರಪ್ರದೇಶದ ನೆಲ್ಲೋರ್​ ಜಿಲ್ಲೆಯ ಬುಚಿರೆಡ್ಡಿಪಾಳ್ಯಂ ನಿವಾಸಿ ಎಸ್​​.ಕೆ. ಜೈಲಾನಿ ಕುರಿತು. ಹೌದು, ಸಾಮಾನ್ಯ ಬಾಳೆಹಣ್ಣು ವ್ಯಾಪಾರಿ ಈ ಕೆಲಸ ಮಾಡಬಹುದಾ ಎಂಬ ಪ್ರಶ್ನೆ ಈ ವರದಿ ಓದಿದ ಬಳಿಕ ಮೂಡುವುದರಲ್ಲಿ ಸಂದೇಹವಿಲ್ಲ.

    ಇದನ್ನೂ ಓದಿರಿ: ಕರೊನಾ ಬಂದಿದ್ದಕ್ಕೆ ಇಡೀ ಗ್ರಾಮಸ್ಥರು ಈ ಹುಡುಗಿ ಜತೆ ನಡೆದುಕೊಂಡ ರೀತಿ ನಾಚಿಕೆ ಹುಟ್ಟಿಸುವಂತಿದೆ..!

    ನೆಲ್ಲೊರ್​ನ ಮುಂಬೈ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಹಾಗೂ ಬಸ್​ ನಿಲ್ದಾಣದ ಹತ್ತಿರವಿರುವ ಶಾಪಿಂಗ್​ ಕಾಂಪ್ಲೆಕ್ಸ್​ ಒಂದರಲ್ಲಿ ಸುಮಾರು 40 ವರ್ಷಗಳಿಂದ ಜೈಲಾನಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದಾರೆ. ಹೀಗಿರುವಾಗ ಇತ್ತೀಚೆಗೆ ಅದರ ಮಾಲೀಕ ಹಳೆಯ ಕಟ್ಟಡವನ್ನೆಲ್ಲ ಒಡೆದು ಹೊಸ ವಾಣಿಜ್ಯ ಮಳಿಗೆ ಸ್ಥಾಪಿಸಲು ಮುಂದಾದರು. ಈ ವಿಚಾರ ಜೈಲಾನಿಗೆ ತಿಳಿಯುತ್ತದೆ.

    ಕಾಂಪ್ಲೆಕ್ಸ್​ ಧ್ವಂಸ ಮಾಡಿದರೆ ನನ್ನ ಗತಿ ಏನು ಎಂದು ಜೈಲಾನಿ ಚಿಂತಿಸುತ್ತಾರೆ. ಒಂದು ವೇಳೆ ಅಲ್ಲಿಂದ ಓಡಿಸಿದರೆ ವ್ಯಾಪಾರದ ಮೇಲೆ ಪರಿಣಾಮ ಬೀರುವುದಲ್ಲದೆ ನನ್ನ ಜೀವನವು ಹಾಳಾಗುತ್ತದೆ ಎಂದು ಕೊರಗುವ ಜೈಲಾನಿ, ಅದೇ ಕಾಂಪ್ಲೆಕ್ಸ್​ ಒಂದಿಷ್ಟು ಜಾಗವನ್ನು ಸ್ವಂತಕ್ಕೆ ಖರೀದಿಸುವ ನಿರ್ಧಾರಕ್ಕೆ ಬರುತ್ತಾರೆ.

    ಇದನ್ನೂ ಓದಿರಿ: ಮಂಗಳೂರು ಕೊರಗಜ್ಜ ಕ್ಷೇತ್ರ ಮಾಲಿನ್ಯ ಮಾಡಿದ ಓರ್ವನ ಸಾವು ಇಬ್ಬರಿಂದ ತಪ್ಪು ಕಾಣಿಕೆ

    ಅದರಂತೆ ಬುಧವಾರ (ಮಾರ್ಚ್​ 31) ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬರೋಬ್ಬರಿ 1.20 ಕೋಟಿ ರೂಪಾಯಿಗೆ 108 ಚದರ ಅಡಿ ಜಾಗವನ್ನು ಖರೀದಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಜೈಲಾನಿ ಇಷ್ಟೊಂದು ಹಣವನ್ನು ಹೇಗೆ ಸಂಪಾದಿಸಿದರು ಎಂಬುದೇ ಇದೀಗ ಎಲ್ಲರ ತಲೆಯಲ್ಲಿ ಓಡುತ್ತಿರುವ ಪ್ರಶ್ನೆಯಾಗಿದ್ದು, ಈ ಬಗ್ಗೆ ಸ್ವತಃ ಅವರೇ ಉತ್ತರ ನೀಡಬೇಕಿದೆ. ಆದರೆ, ಅವರ ಕೆಲಸ ಮಾತ್ರ ಇದೀಗ ನೆಲ್ಲೋರ್​ ಜಿಲ್ಲೆಯ ಜನರ ಬಾಯಲ್ಲಿ ಹರಿದಾಡುತ್ತಿದೆ. (ಏಜೆನ್ಸೀಸ್​)

    ಬೆಂಗಳೂರಿನಲ್ಲಿ 6ರಿಂದ 9ನೇ ತರಗತಿ ಭೌತಿಕ ತರಗತಿ ಸ್ಥಗಿತ! ಆದೇಶ ಹೊರಡಿಸಿದ ಶಿಕ್ಷಣ ಸಚಿವ

    ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸರ ಆಹಾರ ಭತ್ಯೆ ಏರಿಕೆ

    ವಿಜಯವಾಣಿ ದಶಕದ ಯಶೋಗಾಥೆಗೆ ಶ್ಲಾಘನೆ ಅಭಿನಂದನೆ: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts