More

    ಕರಾವಳಿಯಲ್ಲಿ ಚಂಡ ಮಾರುತದ ಮುನ್ಸೂಚನೆ

    ಕಾರವಾರ: ಕರಾವಳಿಯಲ್ಲಿ ಚಂಡ ಮಾರುತ ಬರುವ ಮುನ್ಸೂಚನೆ ಇರುವ ಕಾರಣ ಎಚ್ಚರ ವಹಿಸಬೇಕು ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗದ ಕಾರ್ಯದರ್ಶಿ ವಿ. ರಶ್ಮಿ ಮಹೇಶ ಸೂಚನೆ ನೀಡಿದರು.

    ಜೂ. 6 ರಿಂದ 11ರ ನಡುವೆ ಚಂಡ ಮಾರುತ ಬರುವ ಮುನ್ಸೂಚನೆ ಇರುವುದರಿಂದ ಕರಾವಳಿಯ ಜಿಲ್ಲಾಧಿಕಾರಿಗಳು ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜತೆಗೆ ಅವರು ವಿಡಿಯೋ ಸಂವಾದ ಸಭೆ ನಡೆಸಿದರು. ಮೀನುಗಾರರು ಸಮುದ್ರಕ್ಕಿಳಿಯದಂತೆ ನೋಡಿಕೊಳ್ಳಿ, ಪ್ರವಾಸಿಗರು ಸಮುದ್ರ ತಟಗಳಿಗೆ ಬರದಂತೆ ಕೂಡ ನೋಡಿಕೊಳ್ಳಿ ಎಂದರು.

    ಈಗಾಗಲೇ ದಕ್ಷಿಣ ಕನ್ನಡ ಮತ್ತು ಕೊಡುಗು ಜಿಲ್ಲೆಗೆ ಎನ್‌ಡಿಆರ್‌ಎ್ ತಂಡವನ್ನು ಕಳುಹಿಸಿಕೊಡಲಾಗಿದೆ. ಅಂತಹ ತಂಡಗಳಿಗೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.

    ಹವಾಮಾನ ವೈಪರೀತ್ಯದ ಬಗ್ಗೆ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಿ. ಇದು ಪ್ರತಿಯೊಬ್ಬ ಸಾರ್ವಜನಿಕರಿಗೂ ತಲುಪಲಿ ಎಂದರು. ತಾಲೂಕು ಹಾಗೂ ಗ್ರಾಪಂ ಹಂತದಲ್ಲಿ ನಿರ್ವಹಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಎಂದರು.

    ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ ನೀಡಿ, ಮುಂಗಾರು ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಗ್ರಾಪಂ ಹಂತದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 6 ಸೈಕ್ಲೋನ್ ಸೆಂಟರ್ ಸ್ಥಾಪಿಸಲಾಗಿದೆ. ಭೂ ಕುಸಿತ ಪ್ರದೇಶಗಳಲ್ಲಿ ಜೆಸಿಬಿ ಮುಂತಾದ ಯಂತ್ರಗಳನ್ನು ಇರಿಸಲಾಗಿದೆ. ವಿಪತ್ತು ಎದುರಿಸಲು ಅನದಾನದ ಕೊರತೆ ಇಲ್ಲ ಎಂದರು.

    ಜಿಪಂ ಸಿಇಒ ಈಶ್ವರ್ ಕುಮಾರ ಕಾಂದೂ, ಎಸ್‌ಪಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts