More

    ರಾಹುಲ್​ ಗಾಂಧಿಯನ್ನು ತಡೆದರೆ ಕಾಂಗ್ರೆಸ್​ ಅವನತಿ; ಇದನ್ನು ಹೇಳಿದ್ದು ಕಾಂಗ್ರೆಸ್​ನವರಲ್ಲ…!

    ಮುಂಬೈ: ಕಾಂಗ್ರೆಸ್​ನಲ್ಲಿ ಚುನಾವಣೆ ಮೂಲಕ ಹೊಸ ನಾಯಕನ ಆಯ್ಕೆಯಾಗದಿದ್ದರೆ, ಇನ್ನೂ 50 ವರ್ಷ ಪಕ್ಷ ಅಧಿಕಾರದಿಂದ ದೂರವೇ ಉಳಿಯಬೇಕಾಗುತ್ತದೆ ಎಂದು ಹಿರಿಯ ನಾಯಕ ಗುಲಾಮ್​ ನಬಿ ಆಜಾದ್ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಮತ್ತೊಬ್ಬ ಹಿರಿಯ ಕಾಂಗ್ರೆಸ್ಸಿಗ ಸಲ್ಮಾನ್​ ಖುರ್ಷಿದ್​, ಪಕ್ಷದ ಸಾಂಸ್ಥಿಕ ಚುನಾವಣೆ ನಡೆಯದಿದ್ದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ನಬಿ ಹೇಳಿಕೆಯನ್ನು ಟೀಕಿಸಿದ್ದರು.

    ಅಲ್ಲಿಗೆ ಕಾಂಗ್ರೆಸ್​ನಲ್ಲಿ ಸದ್ಯಕ್ಕೆ ಬದಲಾವಣೆಗಳಿಲ್ಲ ಎಂಬುದು ಖಚಿತವಾದಂತಾಗಿತ್ತು. ಇನ್ನೊಂದೆಡೆ, ಕಾಂಗ್ರೆಸ್​ನ ನಾಯಕತ್ವ ವಿಚಾರವಾಗಿ ಶಿವಸೇನೆ ಮುಖಂಡ ಸಂಜಯ್​ ರಾವತ್​ ಮತ್ತೊಂದು ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ; ಪ್​ ವಿರುದ್ಧ ಸಾಮೂಹಿಕ ಹೋರಾಟ; ಅಣ್ಣಾ ಹಜಾರೆಗೆ ಪತ್ರ ಬರೆದು ಪೇಚಿಗೆ ಸಿಲುಕಿದ್ದೇಕೆ ಬಿಜೆಪಿ? 

    ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಏರುವುದರಿಂದ ರಾಹುಲ್​ ಗಾಂಧಿಯನ್ನು ತಡೆದರೆ ಪಕ್ಷ ಸಂಪೂರ್ಣ ಅವನತಿಯಾಗಲಿದೆ ಎಂದು ಸಂಜಯ್​ ರಾವತ್​ ಭವಿಷ್ಯ ನುಡಿದಿದ್ದಾರೆ.
    ಶಿವಸೇನೆಯ ಮುಖವಾಣಿ ಸಾಮ್ನಾದ ಅಂಕಣದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ, ಪ್ರಧಾನಿ ನರೇಂದ್ರ ಮೋದಿಗೆ ಸಮರ್ಥ ಎದುರಾಳಿಯಾಗುವ ನಾಯಕರ ಕೊರತೆ ಕಾಂಗ್ರೆಸ್​ನಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಪಕ್ಷದ 23 ನಾಯಕರು ಬಂಡಾಯವೆದ್ದು, ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾವತ್​, ಪಕ್ಷದಲ್ಲಿ ಸಕ್ರಿಯವಾಗುವುದರಿಂದ ಅವರನ್ನು ಯಾರೂ ತಡೆದಿದ್ದಾರೆ. ಆದರೆ, ರಾಹುಲ್​ ಗಾಂಧಿಯನ್ನು ತಡೆಯುವಲ್ಲಿ ಸಕ್ರಿಯವಾಗುವುದು ಪಕ್ಷವನ್ನು ಧ್ವಂಸಗೊಳಿಸುವ ಹಾಗೂ ಅವನತಿಯತ್ತ ಕೊಂಡೊಯ್ಯುವಲ್ಲಿ ಕಾರಣವಾಗಬಲ್ಲುದು ಎಂದು ರಾವತ್​ ಹೇಳಿದ್ದಾರೆ.

    9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts