More

    ಸ್ಟಾಪ್​ ಟೊಬ್ಯಾಕೋ ಆ್ಯಪ್​ಗೆ ಚಾಲನೆ; ಹೊಗೆ ಬಿಡುವ ಮುನ್ನ ಯೋಚಿಸಿ…

    ಸ್ಟಾಪ್​ ಟೊಬ್ಯಾಕೋ ಅಪ್ ಬಿಡುಗಡೆ
    ‘ಮಾಯಾ ಮಾದಕ’ ಯಕ್ಷಗಾನ ಪ್ರದರ್ಶನದ ಮೂಲಕ ಜಾಗೃತಿ

    ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಹಾಗೂ ರಾಜ್ಯ ತಂಬಾಕು ಘಟಕವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ತಂಬಾಕು ಮುಕ್ತ ತಲೆಮಾರು-ಮಾಧ್ಯಮ ಕಾರ್ಯಗಾರ’ ದಲ್ಲಿ ಸ್ಟಾಪ್​ ಟೊಬ್ಯಾಕೋ ಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಇದನ್ನೂ ಓದಿ: ಪಬ್ಲಿಕ್​ನಲ್ಲಿ ಹೊಗೆ ಬಿಡೋ ಮುನ್ನ ಎಚ್ಚರ! ಸ್ಥಳಕ್ಕೇ ಬಂದು ದಂಡ ವಿಧಿಸ್ತಾರೆ… ಜನರೇ ಫೋಟೋ ತೆಗೆದು ಆಪ್​ಗೆ ಅಪ್​ಲೋಡ್ ಮಾಡಬಹುದು

    ರಾಜ್ಯದಲ್ಲಿ ತಂಬಾಕು ಉತ್ಪನ್ನ ಸೇವನೆ ಹಾಗೂ ಮಾರಾಟಕ್ಕೆ ಇರುವ ನಿಯಮಗಳ ಸೂಕ್ತ ಜಾರಿಗೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿ ಕೆಲವು ಗ್ರಾಮಗಳು ತಂಬಾಕು ಮುಕ್ತವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಆರೋಗ್ಯ ಸಚಿವರ ನಿರ್ದೇಶನದ ಮೇರೆಗೆ ‘ಸ್ಟಾಪ್ ಟೊಬ್ಯಾಕೋ ಆ್ಯಪ್’ ರೂಪಿಸಲಾಗಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಈ ಆ್ಯಪ್ ಮೂಲಕ ಸಾರ್ವಜನಿಕ ಸ್ಥಳದಲ್ಲಿ ದೂಮಪಾನ ಮಾಡುವವರ ವಿರುದ್ಧ ಸಾರ್ವಜನರಿಕರು ದೂರು ನೀಡಬಹುದಾಗಿದ್ದು, ದೂರುದಾರ ಮಾಹಿತಿ ಗೌಪ್ಯವಾಗಿರಲಿದೆ ಎಂದರು.

    ರಾಜ್ಯದಲ್ಲಿ 3 ಕೋಟಿ ತಂಬಾಕು ಬಳಕೆದಾರರು:
    ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ 7 ಕೋಟಿ ಜನಸಂಖ್ಯೆಯ ಪೈಕಿ 3 ಕೋಟಿ ಮಂದಿ ತಂಬಾಕು ಉತ್ಪನ್ನ ಬಳಸುತ್ತಾರೆ. ಶೇ.22.8 ವಯಸ್ಕರ ಪೈಕಿ ಶೇ.8.8 ದೂಮಪಾನಿಗಳು, ಶೇ.16.3 ಇತರ ತಂಬಾಕು ಉತ್ಪನ್ನ ಬಳಕೆದಾರರಿದ್ದಾರೆ. ತಂಬಾಕು ಬಳಕೆಯು ಕ್ಯಾನ್ಸರ್, ಶ್ವಾಸಕೋಶ, ಪಿತ್ತಕೋಶ ಸೇರಿಂದಂತೆ ಹಲವು ಸಮಸ್ಯೆಗಳಿಗೆ ಕಾರಣಾವಾಗಿದೆ ಎಂದು ಮಾಹಿತಿ ನೀಡಿದರು.

    ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣ್ ಕುಮಾರ್, ಇಲಾಖೆಯ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಡಾ.ಸೆಲ್ವರಾಜನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಕರ್ನಾಟಕ ಮಹಿಳಾ ಯಕ್ಷಗಾನ ತಂಡದವರು ‘ಮಾಯಾ ಮಾದಕ’ ಯಕ್ಷಗಾನ ಪ್ರದರ್ಶನ ಮೂಲಕ ತಂಬಾಕು ವಿರುದ್ಧ ಜಾಗೃತಿ ಮೂಡಿಸಿದರು.

    ಇದನ್ನೂ ಓದಿ: ಧೂಮಪಾನಿಗಳಿಗೆ ದಂಡ

    ಏನಿದು ‘ಸ್ಟಾಪ್ ಟೊಬ್ಯಾಕೋ’ ಆ್ಯಪ್ ?
    ಆ್ಯಂಡ್ರಾಯ್ಡಾ ಮೊಬೈಲ್ ಹೊಂದಿರುವವರು ಪ್ಲೇಸ್ಟೋರ್‌ನಲ್ಲಿ ‘ಸ್ಟಾಪ್ ಟೊಬ್ಯಾಕೋ’ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಾರ್ವಜನಿಕರ ಪ್ರದೇಶಗಳಲ್ಲಿ ದೂಮಪಾನ ಮಾಡಿದರೆ, ತಂಬಾಕು ಉತ್ಪನ್ನಗಳ ಜಾಹಿರಾತು ನೀಡಿದರೆ, ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಕೊಟ್ಟರೆ, ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡಿದರೆ, ಶಾಲಾ ಆವರಣದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಬಳಕೆ ಮಾಡುವವರ ೆಟೋ ತೆಗೆದು ಈ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದರೆ ಸಾಕು. ಆಯಾ ಜಿಲ್ಲೆಗಳ ಸಂಬಂಧಿಪಟ್ಟ ತನಿಖಾ ತಂಡವು ನಿರ್ಧಿಷ್ಠ ಪ್ರದೇಶಕ್ಕೆ ಭೇಟಿ ನೀಡಿ ಅಂತಹವರ ವಿರುದ್ಧ ಕೋಟ್ಪಾ ನಿಯಮಾನುಸಾರ ದಂಡ ವಿಧಿಸಿ ಮನವರಿಕೆ ಮಾಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts