More

    ಹೈದರಾಬಾದ್​ ಪೊಲೀಸರಿಗೆ ಹೊಸ ಪ್ರಾಣರಕ್ಷಕ ತರಬೇತಿ; ಏನಿದು ಸಿಪಿಆರ್​?

    ಹೈದರಾಬಾದ್: ನಗರದಲ್ಲಿ ಪದೇ ಪದೇ ಹೃದಯಾಘಾತಗಳ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಹೈದರಾಬಾದ್‌ನ ಆರೋಗ್ಯ ಅಧಿಕಾರಿಗಳು ಮಂಗಳವಾರ ಗೋಶಾಮಹಲ್‌ನಲ್ಲಿ ನಗರ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ ಅಥವಾ ಸಿಪಿಆರ್ ತರಬೇತಿಯನ್ನು ನೀಡಿದರು.

    ಇದನ್ನೂ ಓದಿ:ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ: CPR ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌!

    ವ್ಯಕ್ತಿಯ ಜೀವವನ್ನು ಉಳಿಸಲು ತುರ್ತು ಸಂದರ್ಭಗಳಲ್ಲಿ ಈ ತಂತ್ರವನ್ನು ಬಳಸಲಾಗುತ್ತದೆ. ಈ ವಿಶೇಷ ತಂತ್ರವನ್ನು ಪೊಲೀಸರಿಗೆ ಕಲಿಸಲಾಗುತ್ತಿದ್ದು ಅದನ್ನು ಪೊಲೀಸರು ಡಮ್ಮಿಗಳ ಸಿಪಿಆರ್​ ಮೇಲೆ ಬಳಸುತ್ತಿರುವುದನ್ನು ಟ್ವಿಟರ್ ​ವೀಡಿಯೊ ತೋರಿಸುತ್ತಿದೆ.

    ಆರಾಮ್‌ಘರ್ ಚೌರಸ್ತಾದಲ್ಲಿ ಹೃದಯಾಘಾತದಿಂದ ರಸ್ತೆಯ ಮೇಲೆ ಕುಸಿದು ಬಿದ್ದಾಗ ಟ್ರಾಫಿಕ್ ಪೋಲೀಸ್ ಒಬ್ಬರು ವ್ಯಕ್ತಿಯ ಜೀವವನ್ನು ಇದೇ ತಂತ್ರ ಬಳಸಿ ಉಳಿಸಿದ ಕೇವಲ ನಾಲ್ಕು ದಿನಗಳ ನಂತರ ತರಬೇತಿ ನೀಡಲಾಗಿದೆ.

    ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಟಾಲಿವುಡ್​ ನಟ ಮಹೇಶ್ ಬಾಬು ತಂದೆ; ಸೂಪರ್ ಸ್ಟಾರ್ ಕೃಷ್ಣ ಸ್ಥಿತಿ ಗಂಭೀರ

    ಸಿಪಿಆರ್​ ಎನ್ನುವುದು ಜೀವರಕ್ಷಕ ತಂತ್ರವಾಗಿದ್ದು, ಹೃದಯಾಘಾತ ಅಥವಾ ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಹೊರತೆಗೆದು ಕಾಪಾಡಲು, ಹೀಗೆ ವ್ಯಕ್ತಿಯ ಹೃದಯಬಡಿತ ನಿಂತ ಅನೇಕ ತುರ್ತು ಸಂದರ್ಭಗಳಲ್ಲಿ ಉಪಯುಕ್ತವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts