More

    ದೂದಸಾಗರ ರೈಲ್ವೆ ಮಾರ್ಗದಲ್ಲಿ ಕುಸಿದ ಕಲ್ಲು

    ಕಾರವಾರ: ಜಿಲ್ಲೆಯ ಗಡಿಯಲ್ಲಿರುವ ದೂದಸಾಗರ ಜಲಪಾತದ ರೈಲ್ವೆ ಮಾರ್ಗದಲ್ಲಿ ಭಾನುವಾರ ಕಲ್ಲು ಕುಸಿತವಾಗಿ, ಪ್ಯಾಸೆಂಜರ್ ರೈಲು ವಿಳಂಬವಾಗಿ ಸಂಚರಿಸಿದೆ.
    ಗೋವಾ ರಾಜ್ಯದ ಮಡಗಾಂವನಿಂದ ಸುಮಾರು 39 ಕಿಮೀ ದೂರದಲ್ಲಿ ದೂದಸಾಗರ-ಸೋನಾಲಿಂ ನಡುವೆ ಬ್ರಗಾಂಜಾ ಘಾಟ್‌ನಲ್ಲಿ ಸುರಂಗದ ದ್ವಾರದಲ್ಲಿ ಭಾನುವಾರ ಸಾಯಂಕಾಲ ಕಲ್ಲುಗಳು ಬಿದಿದ್ದವು.

    ಈ ಮಾರ್ಗದಲ್ಲಿ ತೆರಳಬೇಕಿದ್ದ ವಾಸ್ಕೋ-ಹಜರತ್ ನಿಜಾಮುದ್ದೀನ್ ಗೋವಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಸೋನಾಲಿಂ ನಿಲ್ದಾಣದಲ್ಲೇ ತಡೆ ಹಿಡಿಯಲಾಯಿತು. ರಾತ್ರಿ 8.30 ರ ಹೊತ್ತಿಗೆ ಜೆಸಿಬಿ ಮೂಲಕ ಕಲ್ಲುಗಳನ್ನು ತೆರವು ಮಾಡಿ, ರೈಲ್ವೆ ಓಡಾಟವನ್ನು ಮರು ಆರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

    ಅಪಾಯಕಾರಿ ರೈಲ್ವೆ ಮಾರ್ಗ :

    ಮಡಗಾಂವ-ದೂದಸಾಗರ-ಕ್ಯಾಸಲ್‌ರಾಕ್-ಹುಬ್ಬಳ್ಳಿ 175 ಕಿಮೀ ದೂರದ ಮಾರ್ಗವಾಗಿದ್ದು, ಪಶ್ವಿಮ ಘಟ್ಟದ ಕಡಿದಾದ ಮಾರ್ಗದಲ್ಲಿ ರೈಲು ಸಂಚರಿಸುತ್ತದೆ.

    10ಕ್ಕೂ ಹೆಚ್ಚು ಸುರಂಗ ಮಾರ್ಗಗಳಿವೆ. ಬ್ರಿಟಿಷ್, ಪೋರ್ಚುಗೀಸ್ ಕಾಲದ ರೈಲ್ವೆ ಮಾರ್ಗ ಇದಾಗಿದ್ದು, ದಿನಕ್ಕೆ ಒಂದು ಅಥವಾ ಎರಡು ಪ್ಯಾಸೆಂಜರ್ ರೈಲುಗಳು ಮಾತ್ರ ಇಲ್ಲಿ ಸಂಚರಿಸುತ್ತವೆ. ಗೂಡ್ಸ್ ರೈಲುಗಳ ಸಂಚಾರ ಹೆಚ್ಚಿದೆ. ಎರಡು ಅಥವಾ ಮೂರು ಇಂಜಿನ್‌ಗಳನ್ನು ಹಾಕಿ ಗಂಟೆಗೆ ಗರಿಷ್ಠ 35 ಕಿಮೀ ವೇಗದಲ್ಲಿ ರೈಲನ್ನು ಓಡಿಸಲಾಗುತ್ತದೆ.

    ಇದನ್ನೂ ಓದಿ: ದೂದಸಾಗರಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿದ ಜನಸಾಗರ

    ಜನಸಾಗರ: ಈ ರೈಲ್ವೆ ಮಾರ್ಗದ ಮಧ್ಯೆ ಇರುವ ದೂದಸಾಗರ ಜಲಪಾತ ನೋಡಲು ಭಾನುವಾರ ರಾಜ್ಯದ ಸಾವಿರಾರು ಜನ ಆಗಮಿಸಿ ಸಂಕಷ್ಟಕ್ಕೆ ಸಿಲುಕಿದ್ದರು. ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಹಾಗೂ ಗೋವಾ ಪೊಲೀಸರು ಅವರನ್ನು ಜಲಪಾತಕ್ಕೆ ತೆರಳಲು ತಡೆದಿದ್ದರು. ಮಾತ್ರವಲ್ಲ ಕೆಲವರಿಗೆ ಬಸ್ಕಿ ಹೊಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts