More

    ಚಿಕ್ಕಮ್ಮ ಎಂದು ಹೇಳಿ ಮಗುವನ್ನು ಕದ್ದಳು; ತಂಗಿಯ ಡಿಸ್​ಚಾರ್ಜ್​ಗೆ ಬಂದು ಸಿಕ್ಕಿಬಿದ್ದಳು…

    ಬೆಂಗಳೂರು: ವಾಣಿವಿಲಾಸ ಆಸ್ಪತ್ರೆಯ ನವಜಾತ ಶಿಶು ನಿಗಾ ಘಟಕದಿಂದ ಎರಡು ದಿನದ ಮಗುವನ್ನು ಅಪಹರಿಸಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ವಿಶ್ವೇಶ್ವರಪುರ ಪೊಲೀಸರು ಬಂಧಿಸಿದ್ದು, ಮಗುವನ್ನು ರಕ್ಷಿಸಿದ್ದಾರೆ. ಆರೋಪಿಗಳಾದ ಯಲಚೇನಹಳ್ಳಿ ನಿವಾಸಿಗಳಾದ ಆಯಿಷಾ (23), ಆಕೆಯ ಮೈದುನ ವಸೀಂ ಪಾಷಾ (30) ಹಾಗೂ ಮಗು ಖರೀದಿಸಿದ್ದ ಕುಮಾರಸ್ವಾಮಿ ಲೇಔಟ್ ನಿವಾಸಿ ಅಬ್ದುಲ್ ರೆಹಮಾನ್ (32) ಮತ್ತು ಸಾನಿಯಾ ಫಾತಿಮಾ (22) ಬಂಧಿತರು. ಆರೋಪಿ ಆಯಿಷಾ ಮಗುವನ್ನು 80 ಸಾವಿರ ರೂ.ಗೆ ಮಾರಾಟ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ವಿಜಿನಾಪುರದ ನಿವಾಸಿ ಆರ್ಷಿಯಾ ಎಂಬುವರಿಗೆ ನ. 9ರಂದು ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಮಗುವಿಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಆಸ್ಪತ್ರೆಯ ನವಜಾತ ಶಿಶು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆ ಮಗುವನ್ನು ಸಂಬಂಧಿಕರ ಸೋಗಿನಲ್ಲಿ ಅಪಹರಣ ಮಾಡಲಾಗಿತ್ತು. ಈ ಕುರಿತು ಮಗುವಿನ ತಂದೆ ದೂರು ನೀಡಿದ್ದರು. ವಿಶ್ವೇಶ್ವರಪುರ ಉಪವಿಭಾಗದ ಎಸಿಪಿ ಶ್ರೀನಿವಾಸ್ ಮೂರ್ತಿ ನೇತೃತ್ವದ ತಂಡ ಶೋಧ ಕಾರ್ಯ ನಡೆಸಿತ್ತು. ಸಿಸಿ ಕ್ಯಾಮರಾ ದೃಶ್ಯಗಳ ಪರಿಶೀಲನೆ ವೇಳೆ ಮಹಿಳೆಯೊಬ್ಬಳು ಮಗುವನ್ನು ಅಪಹರಿಸಿ ತೆರಳಿರುವುದು ಕಂಡು ಬಂದಿತ್ತು. ಆಕೆಯ ಮುಖಚಹರೆ ಆಧರಿಸಿ ತನಿಖೆ ಮುಂದುವರಿಸಲಾಗಿತ್ತು. ಆಕೆಯ ಚಲನವಲನಗಳ ಮೇಲೆ ನಿಗಾವಹಿಸಲಾಗಿತ್ತು.

    ಚಿಕ್ಕಮ್ಮ ಎಂದು ಹೇಳಿ ಮಗುವನ್ನು ಕದ್ದಳು; ತಂಗಿಯ ಡಿಸ್​ಚಾರ್ಜ್​ಗೆ ಬಂದು ಸಿಕ್ಕಿಬಿದ್ದಳು...

    ಚಿಕ್ಕಮ್ಮನೆಂದು ಮಗು ಪಡೆದಳು

    ಆರೋಪಿ ಆಯಿಷಾ ಸಹೋದರಿ ಹೆರಿಗೆಗೆಂದು ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆಯನ್ನು ನೋಡಲು ಆಯಿಷಾ ನ.11ರಂದು ಆಸ್ಪತ್ರೆಗೆ ತೆರಳಿದ್ದಳು. ಆಸ್ಪತ್ರೆಯಿಂದ ವಾಪಸಾಗುವಾಗ ನವಜಾತ ಶಿಶು ನಿಗಾ ಘಟಕದೊಳಗೆ ಹೋಗಿ ಮಗುವಿನ ಪಾಲಕರ ಬಗ್ಗೆ ತಿಳಿದುಕೊಂಡಿದ್ದಳು. ಬಳಿಕ, ನಾನು ಮಗುವಿನ ಚಿಕ್ಕಮ್ಮ. ಮಗುವಿಗೆ ಹಾಲು ಕುಡಿಸಲು ವಾರ್ಡ್​ನಲ್ಲಿರುವ ತಾಯಿ ಬಳಿಗೆ ಕರೆದೊಯ್ಯುವುದಾಗಿ ಅಲ್ಲಿನ ಸಿಬ್ಬಂದಿಗೆ ಹೇಳಿದ್ದಳು. ಆಕೆಯ ಮಾತನ್ನು ನಂಬಿದ ಸಿಬ್ಬಂದಿ ಮಗುವನ್ನು ಆಕೆಗೆ ಕೊಟ್ಟಿದ್ದರು. ಕೆಲ ಸಮಯದ ನಂತರವೇ ಮಗು ಅಪಹರಣವಾದ ಸಂಗತಿ ಪಾಲಕರಿಗೆ ಗೊತ್ತಾಗಿತ್ತು.

    ತಂಗಿಯ ಡಿಸ್ಚಾರ್ಜ್​ಗೆ ಬಂದು ಸಿಕ್ಕಿಬಿದ್ದಳು

    ಗುರುವಾರ ಮಧ್ಯಾಹ್ನ ತಂಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಲು ಆಯಿಷಾ ಬಂದಿದ್ದಳು. ಆಗ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ಗುರುತಿಸಿದ್ದು, ವಶಕ್ಕೆ ಪಡೆದಿದ್ದರು. ವಿಚಾರಣೆಗೊಳಪಡಿಸಿದಾಗ ಮಗುವನ್ನು ಕದ್ದು 80 ಸಾವಿರ ರೂ. ಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆಕೆ ನೀಡಿದ ಮಾಹಿತಿ ಆಧರಿಸಿ ಮಗು ಮಾರಾಟಕ್ಕೆ ಸಹಕರಿಸಿದ್ದ ಮೈದುನ ವಸೀಂ ಪಾಷ ಹಾಗೂ ಮಗು ಖರೀದಿಸಿದ್ದ ಆತನ ಸ್ನೇಹಿತ ಅಬ್ದುಲ್ ರೆಹಮಾನ್ ಮತ್ತು ಸಾನಿಯಾ ಫಾತಿಮಾ ದಂಪತಿಯನ್ನು ಬಂಧಿಸಲಾಗಿದೆ. ರೆಹಮಾನ್ ದಂಪತಿಗೆ ಮಕ್ಕಳಾಗಿರಲಿಲ್ಲ. ಮಗು ಖರೀದಿಗೆ ಮುಂದಾಗಿದ್ದರು. ಮಗು ಕದ್ದು ಹಣ ಗಳಿಸಲು ಆಯಿಷಾ ಮುಂದಾಗಿದ್ದಳು.

    ರಾಜ್ಯದಲ್ಲಿ ಇನ್ಮುಂದೆ ಆನ್‌ಲೈನ್ ಗೇಮ್ ಆಡಂಗಿಲ್ಲ! ಗೃಹ ಸಚಿವರು ಕೊಟ್ಟ ಸುಳಿವು ಇಲ್ಲಿದೆ

    ಅಪಘಾತ ಬಗ್ಗೆ ಇದುವರೆಗೂ ನಟ ಶಶಿಕುಮಾರ್ ಹೇಳಿದ್ದು ಸುಳ್ಳಾ? ಅಸಲಿ ಕಾರಣ ತಿಳಿದ್ರೆ ಶಾಕ್​ ಆಗ್ತೀರಾ!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts