More

    ಹೂಡಿಕೆದಾರರಿಗೆ 7323% ಲಾಭ ನೀಡಿದ ಷೇರು: ಬೋನಸ್​ ಷೇರು, ಸ್ಟಾಕ್​ ವಿಭಜನೆ ಘೋಷಿಸುತ್ತಿದ್ದಂತೆಯೇ ಅಪ್ಪರ್​ ಸರ್ಕ್ಯೂಟ್ ಹಿಟ್​

    ಮುಂಬೈ: ಗಾರ್ಮೆಂಟ್ಸ್ ಮತ್ತು ಅಪ್ಯಾರಲ್ಸ್ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾಲ್ ಕ್ಯಾಪ್ ಕಂಪನಿಯಾದ ಲೊರೆಂಜಿನಿ ಅಪರಲ್ಸ್ ಲಿಮಿಟೆಡ್ (Lorenzini Apparels Ltd.) ಷೇರುಗಳ ಬೆಲೆ 5% ಅಪ್ಪರ್ ಸರ್ಕ್ಯೂಟ್ ಹಿಟ್​ ಆದವು. ಅಂದರೆ, ಒಂದು ದಿನದ ಗರಿಷ್ಠ ಬೆಲೆ ಏರಿಕೆಯಾದ ಶೇ. 5ರಷ್ಟು ಹೆಚ್ಚಳ ಕಂಡವು.

    ಈ ಕಂಪನಿಯು 6:11 ಅನುಪಾತದಲ್ಲಿ ಬೋನಸ್ ಷೇರುಗಳನ್ನು ಮತ್ತು 1:10 ರ ಅನುಪಾತದಲ್ಲಿ ಸ್ಟಾಕ್ ವಿಭಜನೆಯನ್ನು ಅನುಮೋದಿಸಿರುವುದೇ ಇದಕ್ಕೆ ಕಾರಣ.

    Lorenzini Apparels ಷೇರುಗಳು ಕಳೆದ 6-ತಿಂಗಳಲ್ಲಿ 122% ರಷ್ಟು ಆಕರ್ಷಕ ಆದಾಯವನ್ನು ನೀಡಿವೆ. ಕಳೆದ 1-ವರ್ಷದಲ್ಲಿ 423% ಲಾಭವನ್ನು ಹೂಡಿಕೆದಾರರಿಗೆ ನೀಡಿವೆ. ಕಂಪನಿಯು 413.97 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

    ಬ್ರವರಿ 12 ರ ಕಂಪನಿಯ ಪ್ರಕಟಣೆಯ ಪ್ರಕಾರ, “ಕಂಪನಿಯ ಈಕ್ವಿಟಿ ಷೇರುಗಳ ಮುಖಬೆಲೆಯನ್ನು ರೂ. 10/- ರಿಂದ (ಹತ್ತು ರೂಪಾಯಿಗಳು ಮಾತ್ರ) ಪ್ರತಿ ರೂ. 1/- ( ಒಂದು ರೂಪಾಯಿ)ಗೆ ವಿಭಜಿಸಲಾಗುತ್ತದೆ.

    ಕಂಪನಿಯ ಷೇರು ಹೊಂದಿರುವವರಿಗೆ 6:11 ರ ಅನುಪಾತದಲ್ಲಿ ಬೋನಸ್​ ಷೇರುಗಳನ್ನು ವಿತರಿಸಲಿದೆ. 11 ಷೇರುಗಳಿಗೆ ಬೋನಸ್​ ಆಗಿ 6 ಷೇರುಗಳನ್ನು ನೀಡಲಾಗುತ್ತದೆ.

    ಈ ಕಂಪನಿಯ ಷೇರುಗಳ ಬೆಲೆ ಈಗ ರೂ 408.30 ಆಗಿದೆ. ಈ ಷೇರುಗಳ 52-ವಾರದ ಗರಿಷ್ಠ ಬೆಲೆ ರೂ.475.20 ಮತ್ತು ಕನಿಷ್ಠ ಬೆಲೆ ರೂ.73.00 ಆಗಿದೆ. ಈ ಷೇರುಗಳು ಕಳೆದ 1-ತಿಂಗಳಲ್ಲಿ ಷೇರುದಾರರಿಗೆ 53% ನಷ್ಟು ಲಾಭವನ್ನು ನೀಡಿವೆ. ಕಳೆದ 2-ವರ್ಷಗಳಲ್ಲಿ 3578% ಏರಿಕೆ ಕಂಡಿವೆ. ಕಳೆದ 3 ವರ್ಷಗಳಲ್ಲಿ 5336% ನಷ್ಟು ಲಾಭವನ್ನು ಹೂಡಿಕೆದಾರರಿಗೆ ನೀಡಿವೆ. ಕಳೆದ 5 ವರ್ಷಗಳಲ್ಲಿ, ಈ ಷೇರು 7323% ರಷ್ಟು ಹೆಚ್ಚಳವಾಗಿದೆ.

    ಅಯೋಧ್ಯೆಯಲ್ಲಿ 5 ಸ್ಟಾರ್​ ಹೋಟೆಲ್​ ನಿರ್ಮಾಣ ಘೋಷಣೆ: ಈ ಕಂಪನಿಯ ಷೇರು ಬೆಲೆ ದುಪ್ಪಟ್ಟಾಗಬಹುದು ಎಂಬುದು ಲೆಕ್ಕಾಚಾರ

    2 ಕೋಟಿಗೂ ಹೆಚ್ಚು ಷೇರು ಮಾರಾಟಕ್ಕೆ: 3 ತಿಂಗಳಲ್ಲಿ 3 ಪಟ್ಟು ಲಾಭ ನೀಡಿದ ಕಂಪನಿಯ ಷೇರು ಖರೀದಿಸುವವರೇ ಇಲ್ಲದಂತಾಗಿರುವುದು ಏಕೆ?

    ಪರಾದೀಪ್ ಫಾಸ್ಫೇಟ್ಸ್​ನಲ್ಲಿ ವಿಲೀನವಾಗಲಿದೆ ಮಂಗಳೂರು ಕೆಮಿಕಲ್: ರಸಗೊಬ್ಬರ ಕಂಪನಿ ಷೇರು ಖರೀದಿಸಿದರೆ ಲಾಭ ಎನ್ನುತ್ತಿದೆ ಬ್ರೋಕರೇಜ್​ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts