More

    ವಿಜ್ಞಾನ ಲೋಕದ ದಂತಕಥೆ ಸ್ಟೀಫ‌ನ್‌ ಹಾಕಿಂಗ್‌ ವೆಂಟಿಲೇಟರ್‌ ದಾನ

    ಕೇಂಬ್ರಿಡ್ಜ್ : ವಿಜ್ಞಾನ ಲೋಕದ ದಂತಕಥೆ ಎಂದೇ ಬಿಂಬಿತವಾಗಿರುವ ಖ್ಯಾತ ಭೌತ ಶಾಸ್ತ್ರಜ್ಞ ಸ್ಟೀಫ‌ನ್‌ ಹಾಕಿಂಗ್‌ ಬಳಸುತ್ತಿದ್ದ ವೆಂಟಿಲೇಟರನ್ನು, ಅವರ ಕುಟುಂಬ ಸದಸ್ಯರು ಕೇಂಬ್ರಿಡ್ಜ್‌ ಆಸ್ಪತ್ರೆಗೆ ದಾನ ಮಾಡಿದ್ದಾರೆ.

    ಕರೊನಾ ವೈರಸ್‌ನ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಕೊರತೆ ಇರುವುದನ್ನು ಮನಗಂಡ ಅವರ ಕುಟುಂಬ ಸದಸ್ಯರು ನ್ಯಾಷನಲ್‌ ಹೆಲ್ತ್‌ ಸರ್ವೀಸ್‌ ಹಾಸ್ಪಿಟಲ್‌ಗೆ ದಾನ ಮಾಡಿದ್ದಾರೆ. ಈ ಕುರಿತು ಹಾಕಿಂಗ್‌ ಅವರ ಮಗಳ ಲೂಸಿ ಹಾಕಿಂಗ್‌ ತಿಳಿಸಿದ್ದಾರೆ.

    ಅಪರೂಪದ ನರ ದೌರ್ಬಲ್ಯ ‘ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್‌’ಗೆ ಇವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ತುತ್ತಾಗಿದ್ದರೂ, ಗಾಲಿಕುರ್ಚಿಯಲ್ಲಿ ಕುಳಿತುಕೊಂಡೇ ಇಡಿಯ ಬ್ರಹ್ಮಾಂಡದ ಮಾಹಿತಿಯನ್ನೇ ಶೇಖರಿಸಿಟ್ಟುಕೊಂಡಿದ್ದ ಅಪರೂಪದ ಭೌತ ವಿಜ್ಞಾನಿ. ‘ಬೆನ್ನುಹುರಿಯ ಸ್ನಾಯು ಕ್ಷೀಣತೆಯ 4ನೇ ವಿಧ’ ಎಂದು ಅವರ ನರ ದೌರ್ಬಲ್ಯವನ್ನು ಗುರುತಿಸಲಾಗಿತ್ತು. ದಶಕಗಳ ಕಾಲ ಈ ಕಾಯಿಲೆಯಿಂದ ನರಳಿದ ಅವರು ಕ್ರಮೇಣ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. 21ನೇ ವಯಸ್ಸಿನಿಂದಲೇ ಹಲವಾರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಅನೇಕ ವರ್ಷಗಳ ವರೆಗೆ ವೆಂಟಿಲೇಟರೇ ಆಧಾರವಾಗಿತ್ತು.

    ಇಷ್ಟೊಂದು ಅಪಾರ ದೈಹಿಕ ನ್ಯೂನತೆಯ ನಡುವೆಯೇ, ಅಪರಿಮಿತ ಸಂಶೋಧನಾ ಸಾಮರ್ಥ್ಯದಿಂದ ಅಂತರಿಕ್ಷದ ಕಪ್ಪು ರಂಧ್ರಗಳ ಬಗ್ಗೆ ಸಂಶೋಧಿಸಿ, ಇಡೀ ಜಗತ್ತೇ ಕೊಂಡಾಡುವ ಹಾಗೆ ಮಾಡಿದ್ದರು.2018ರ ಮಾರ್ಚ್‌ 14ರಂದು ಸ್ಟೀಫನ್‌ ನಿಧನ ಹೊಂದಿದ ದಿನದಿಂದ ಅವರು ಬಳಸುತ್ತಿದ್ದ ವೆಂಟಿಲೇಟರ್‌ ಮನೆಯಲ್ಲಿ ಹಾಗೆಯೇ ಇತ್ತು.

    ಕರೊನಾ ವೈರಸ್‌ನ ಈ ಸಮಯದಲ್ಲಿ ಅದರ ಬಳಕೆಯ ಅಗತ್ಯತೆಯನ್ನು ಕಂಡುಕೊಂಡಿರುವ ಕುಟುಂಬ ವರ್ಗ ಅದನ್ನೀಗ ನೀಡಿ ಔದಾರ್ಯ ಮೆರೆದಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts