ಸೊರಬ: ತಾಲೂಕಿನ ಐತಿಹಾಸಿಕ ಜಡೆ ಸಂಸ್ಥಾನ ಮಠದಲ್ಲಿ ಫೆ.10ರಿಂದ 25ರವರೆಗೆ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರ ಜಾತ್ರಾ ಮಹೋತ್ಸವ ನೆರವೇರಲಿದೆ ಎಂದು ಶ್ರೀ ಡಾ. ಮಹಾಂತ ಸ್ವಾಮೀಜಿ ತಿಳಿಸಿದರು.
ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರ ಕರ್ತೃ ಗದ್ದುಗೆಗೆ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಚಿಕ್ಕಾವಲಿ ನಾಗರಾಜ ಗೌಡ ಕೊಡುಗೆಯಾಗಿ ನೀಡಿದ 103 ಕೆಜಿಯ ಘಂಟೆಯನ್ನು ಗುರುವಾರ ಸ್ವೀಕರಿಸಿ ಮಾತನಾಡಿ, ಕರ್ತೃ ಗದ್ದುಗೆ ಶಿಲಾಮಂಟಪದ ಲೋಕಾರ್ಪಣೆ, ಪಟ್ಟಾಽಕಾರ ಮಹೋತ್ಸವ ಹಾಗೂ ಶ್ರೀ ಮಹಾಂತ ಸ್ವಾಮೀಜಿ ಅವರ ಬೆಳ್ಳಿ ಮಹೋತ್ಸವ ಜರುಗಲಿದೆ ಎಂದರು.
ಜಡೆ ಮಠವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು ಭಕ್ತರು ತಮ್ಮ ಇಚ್ಛಾನುಸಾರವಾಗಿ ಮಠಕ್ಕೆ ದಾನವಾಗಿ ಕೊಡುಗೆ ನೀಡುತ್ತಿದ್ದಾರೆ. ಅವರಲ್ಲಿ ಚಿಕ್ಕಾವಲಿ ನಾಗರಾಜಗೌಡರು ಘಂಟೆ ನೀಡುವುದರ ಮೂಲಕ ಭಕ್ತಿ ಸಮರ್ಪಿಸಿದ್ದಾರೆ. ಮಠವು ಅಪಾರ ಭಕ್ತರನ್ನು ಹೊಂದಿದ್ದು ಮಠವು ಯಾವಾಗಲೂ ಭಕ್ತರ ಆಶಯದಂತೆ ನಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.
ದಾನಿ ಚಿಕ್ಕಾವಲಿ ನಾಗರಾಜ ಗೌಡ, ಕೃಷ್ಣಪ್ಪ ಕೊಡಕಣಿ, ರಾಜು ಮಳಲಗದ್ದೆ, ಲಿಂಗಾರಾಜ ಗೌಡ್ರು, ಅಜಿತ್ ಹೂರ್ಣಕರ್, ರವಿಕುಮಾರ ಇತರರಿದ್ದರು.
ಫೆ.10ರಿಂದ ಜಡೆ ಮಠದಲ್ಲಿ ಜಾತ್ರೋತ್ಸವ: ಡಾ. ಮಹಾಂತ ಸ್ವಾಮೀಜಿ
You Might Also Like
ನವರಾತ್ರಿಯಲ್ಲಿ 9 ದಿನ ಉಪವಾಸ ಮಾಡುತ್ತಿದ್ದರೆ ಈ ಸಲಹೆಗಳು ನಿಮಗಾಗಿ…Navratri Fasting
ಬೆಂಗಳೂರು: ನವರಾತ್ರಿ ( Navratri ) ಆಚರಣೆಗಳು ಪ್ರಾರಂಭವಾಗಿವೆ. ಈ ಹಬ್ಬದ 9 ದಿನಗಳ ಕಾಲ…
ನೀವು 1 ತಿಂಗಳ ಕಾಲ ಬೆಳಗಿನ ತಿಂಡಿ ತಿನ್ನುವುದನ್ನ ಬಿಟ್ಟರೆ ಏನಾಗುತ್ತದೆ? ಪ್ರತಿಯೊಬ್ಬರೂ ಇದನ್ನ ತಿಳಿದಿರಲೇಬೇಕು..Health Tips
ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ಸಮಯದ ಅಭಾವ ಹಾಗೂ ಇನ್ನಿತರ ಕಾರಣಗಳಿಂದಾಗಿ ಅನೇಕರು ಬೆಳಗಿನ ಉಪಾಹಾರವನ್ನು…
ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…