More

    ಕರ್ನಾಟಕದಲ್ಲಿ ಮತ್ತೊಂದು ಆತಂಕ!; ರಾಜ್ಯದ ಮೊದಲ ಜಿಕಾ ವೈರಸ್​ ಪ್ರಕರಣ ರಾಯಚೂರಿನಲ್ಲಿ ಪತ್ತೆ

    ರಾಯಚೂರು: ರಾಜ್ಯದ ಬಹುಭಾಗ ಚಂಡಮಾರುತದ ಪ್ರಭಾವದಿಂದ ಉಂಟಾದ ಮಳೆ ಹಾಗೂ ಚಳಿಯಿಂದ ನಡುಗುತ್ತಿದ್ದರೆ ಇದೀಗ ಇನ್ನೊಂದು ನಡುಕ ಹುಟ್ಟಿಸುವ ಸಂಗತಿ ಹೊರಬಿದ್ದಿದೆ. ಅದರಲ್ಲೂ ರಾಜ್ಯದ ಮೊದಲ ಜಿಕಾ ವೈರಸ್ ಪ್ರಕರಣ ರಾಯಚೂರಿನಲ್ಲಿ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.

    ರಾಜ್ಯದಲ್ಲಿ ಎಡೆಬಿಡದೆ ಸುರಿಯತ್ತಿರುವ ಮಳೆ, ಚಳಿ ವಾತಾವರಣದಿಂದ ನಾನಾ ಕಾಯಿಲೆಗಳಿಂದ ಜನರು ಬಳಬೇಕಾದ ಸಾಧ್ಯತೆ ಇರುವ ಆತಂಕ ಇರುವಾಗ ಇದೀಗ ಜಿಕಾ ವೈರಸ್ ಪ್ರಕರಣ ಕೂಡ ಪತ್ತೆಯಾಗಿರುವುದು ರೋಗದ ಆತಂಕವನ್ನು ಹೆಚ್ಚಾಗಿಸಿದೆ.

    ರಾಜ್ಯದ ರಾಯಚೂರಿನ ಐದು ವರ್ಷದ ಹುಡುಗಿಯಲ್ಲಿ ಜಿಕಾ ವೈರಸ್ ಇರುವುದು ಪುಣೆಯ ಪ್ರಯೋಗಾಲಯದಿಂದ ಬಂದಿರುವ ವರದಿಯಲ್ಲಿ ದೃಢಪಟ್ಟಿದೆ. ಡಿ. 5ರಂದು ಮಾದರಿಯನ್ನು ಸಂಗ್ರಹಿಸಿದ ಪುಣೆಗೆ ಕಳುಹಿಸಲಾಗಿದ್ದು, ಆ ಹತ್ತು ಮಾದರಿಗಳಲ್ಲಿ ಒಂದರಲ್ಲಿ ಜಿಕಾ ವೈರಸ್ ಇರುವುದು ಖಚಿತವಾಗಿದೆ.

    ಹೀಗಾಗಿ ರಾಯಚೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ವಹಿಸಲಾಗಿದ್ದು ಹೆಚ್ಚಿನ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ. ಸೊಳ್ಳೆಯಿಂದ ಈ ರೋಗ ಬರುತ್ತಿದ್ದು, ಇಂದು ಜಿಕಾ ಕುರಿತು ಸರ್ಕಾರ ಮಾರ್ಗಸೂಚಿ ಹೊರಡಿಸಲಿದೆ ಎನ್ನಲಾಗಿದೆ.

    ‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

    ‘ನನ್ನನ್ನು ಪೊಲೀಸರೇ ಸಾಯಿಸ್ತಾರೆ, ನ್ಯಾಯ ಕೊಡಿಸಿ’ ಎಂದು ಅಲವತ್ತುಕೊಂಡ ಯುವಕ!

    ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts