More

    ಕಾಂಗ್ರೆಸ್ ನ ಗೂಂಡಾಗಿರಿ ವಿರುದ್ಧ ರಾಜ್ಯವ್ಯಾಪಿ ಚಳವಳಿ; ಬಿಜೆಪಿ ತೀರ್ಮಾನ

    ಬೆಂಗಳೂರು: ದಲಿತರ ಕಣ್ಣಿಗೆ ಮಣ್ಣೆರಚಿದ ಸತ್ಯ ಗೊತ್ತಾಗಬಾರದು ಎಂದು ಗೂಂಡಾಗಿರಿ ಮೂಲಕ ಭಯಬೀಳಿಸಿ ಬಾಯ್ಮುಚ್ಚಿಸಲು ಕಾಂಗ್ರೆಸ್ ಸರ್ಕಾರ ಹವಣಿಸಿದ್ದು, ಈ ಧೋರಣೆ ವಿರುದ್ಧ ರಾಜ್ಯವ್ಯಾಪಿ ಚಳವಳಿ ಹಮ್ಮಿಕೊಳ್ಳಲು ರಾಜ್ಯ ಬಿಜೆಪಿ ಎಸ್ ಸಿ ಮೋರ್ಚಾ ತೀರ್ಮಾನಿಸಿದೆ.

    ಪಕ್ಷದ ರಾಜ್ಯ ಕಚೇರಿಯಲ್ಲಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ , ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಪಿ.ರಾಜೀವ್ ಕುಡಚಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಮೇಲೆ ಚಿತ್ರದುರ್ಗದಲ್ಲಿ ಹಲ್ಲೆಗೆ ಪ್ರಯತ್ನಿಸಿರುವುದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.

    ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ದಲಿತರಿಗೆ ಯಾವ ರೀತಿ ಮೋಸ ಮಾಡುತ್ತಿದೆ. ಎಸ್ ಸಿಎಸ್ ಪಿ, ಟಿಎಸ್ ಪಿಯ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಬಳಸಿ ದ್ರೋಹ ಮಾಡಿರುವುದನ್ನು ತಿಳಿಸಲು ಕಾರಜೋಳ ಮುಂದಾಗಿದ್ದರು. ಅವರು ಕರೆದಿದ್ದ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ್ದಲ್ಲದೆ, ಹಲ್ಲೆಗೆ ಪ್ರಯತ್ನಿಸಲಾಗಿದೆ. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ದುಷ್ಪ್ರೇರಣೆಯಿಂದಾಗಿದೆ ಎಂದು ಪಿ.ರಾಜೀವ್ ಆರೋಪಿಸಿದರು‌.

    ಅನುದಾನ ಮೀಸಲು ಔಚಿತ್ಯವೇನು ?

    ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಈ ಅನುದಾನ ಬಳಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಸಿ.ಮಹದೇವಪ್ಪ ಹಾರಿಕೆ ಉತ್ತರ ನೀಡಿದರು. ಗೃಹಜ್ಯೋತಿ ಯೋಜನೆಗೆ 2,400 ಕೋಟಿ ರೂ ಕಾದಿರಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಯೋಜನೆಯಡಿ 2,800 ಕೋಟಿ ರೂ ನೀಡಿ ಶೇಕಡ 90ರಷ್ಟು ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿದ್ದು, ಮತ್ತೆ 2,400 ಕೋಟಿ ರೂ ಮೀಸಲಿಡುವ ಔಚಿತ್ಯವೇನು ಎಂದು ಕೇಳಿದರು.

    ಕಾಂಗ್ರೆಸ್ ಪಕ್ಷವನ್ನು ರಕ್ಷಿಸಿ, ನಿರಂತರವಾಗಿ ಅಧಿಕಾರಕ್ಕೆ ತಂದವರೇ ದಲಿತರು. ಈಗಲೂ ದಲಿತರಿಗೆ ವಂಚಿಸಿ ಅಧಿಕಾರಕ್ಕೆ ಬಂದಿದ್ದು, ಮತ್ತದೇ ಮೋಸದ ಪ್ರವೃತ್ತಿ ಮುಂದುವರಿಸಿದೆ. ಈ ಕುರಿತು ಪ್ರತಿ ದಲಿತರ ಮನೆ, ಮುಖಂಡರು, ಶಾಸಕರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತೇವೆ. ಕಾಂಗ್ರೆಸ್ ನ ಗುಂಡಾಗಿರಿ ಮುಂದುವರಿದರೆ ಅದಕ್ಕೆ ತಕ್ಕ ಉತ್ತರ ನೀಡಲು ಬಿಜೆಪಿ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts