More

    ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹ

    ಗುಂಡ್ಲುಪೇಟೆ: ರೈತರಿಗೆ ಕಳೆದ ವರ್ಷದ ಕಬ್ಬು ಪ್ರತಿ ಟನ್‌ಗೆ ಬಾಕಿಯಿರುವ 150 ರೂ.ಗಳನ್ನು ತಕ್ಷಣ ಕೊಡಿಸಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರವೇ ನೇರವಾಗಿ ರೈತರಿಗೆ ಪಾವತಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಪದಾಧಿಕಾರಿಗಳು ಸಚಿವರನ್ನು ಆಗ್ರಹಿಸಿದರು.

    ಪ್ರವಾಸಿ ಮಂದಿರಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಕಬ್ಬು ಕಟಾವು ಹಾಗೂ ಸಾಗಣೆ ವೆಚ್ಚವನ್ನು ಸಂಪೂರ್ಣ ಕಾರ್ಖಾನೆಯೇ ವಹಿಸಿಕೊಳ್ಳಬೇಕು. ಪ್ರತಿಯೊಂದು ಸಕ್ಕರೆ ಕಾರ್ಖಾನೆ ಮುಖ್ಯ ದ್ವಾರದಲ್ಲಿ ತೂಕದ ಯಂತ್ರ ಅಳವಡಿಸಬೇಕು. ರಾಜ್ಯ ಕಬ್ಬು ಖರೀದಿ ನಿಯಂತ್ರಣ ಮಂಡಳಿ ಸಭೆ ಮಾಡಿ ಸದರಿ ವರ್ಷದ ಸಾಲಿನ ಕಬ್ಬಿಗೆ ಹೆಚ್ಚುವರಿ ಲಾಭವನ್ನು ರೈತರಿಗೆ ಕೊಡಿಸಬೇಕು. ಹೊಸ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಲು ಕ್ರಮವಹಿಸಬೇಕು. ಎಥೆನಾಲ್ ಉತ್ಪಾದನೆ ಹೆಚ್ಚಿಸಬೇಕು. ಇದಕ್ಕೆ ಸೂಕ್ತ ಸಬ್ಸಿಡಿಯನ್ನು ಸಹ ಸರ್ಕಾರ ಘೋಷಿಸಬೇಕು. ಕಾಡಂಚಿನ ಭಾಗದಲ್ಲಿ ಕಾಡುಪ್ರಾಣಿಗಳಿಂದ ಉಂಟಾಗುವ ಬೆಳೆ ಹಾನಿಗೆ ಸೂಕ್ತ ಪರಿಹಾರ ಕೊಡಬೇಕು. ಕಬ್ಬಿನ ಕಟಾವನ್ನು 12 ತಿಂಗಳಿಗೆ ನಿಗದಿ ಮಾಡಬೇಕು. ಕಟಾವು ವಿಳಂಬವಾದರೆ ನಷ್ಟ ಪರಿಹಾರವನ್ನು ಕಾರ್ಖಾನೆಯಿಂದಲೇ ಭರಿಸಬೇಕು. ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷೀಯ ಒಪ್ಪಂದ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

    ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವನೂರು ನಾಗೇಂದ್ರ ಮಹೇಂದ್ರ ಸಿದ್ದರಾಜು ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಮೈಸೂರು ಜಿಲ್ಲಾಧ್ಯಕ್ಷ ಹಾಡ್ಯ ರವಿ, ಕಸುವಿನಹಳ್ಳಿ ಮಂಜೇಶ್, ಅರಳಿಕಟ್ಟೆ ಕುಮಾರ್, ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts