More

    ನಾಳೆಯಿಂದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ

    ಶ್ರೀರಂಗಪಟ್ಟಣ: ಮೇ 24 ರಿಂದ ತಾಲೂಕಿನ ಸಬ್ಬನಕುಪ್ಪೆ ಗ್ರಾಮದಲ್ಲಿ 3 ದಿನಗಳ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.

    ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹಾಗೂ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಸಹಯೋಗದೊಂದಿಗೆ ಭೈರವೇಶ್ವರ ಗೋಪಾಲಕರ ಸಂಘ ಮತ್ತು ಸಬ್ಬನಕುಪ್ಪೆ ಹಾಲು ಉತ್ಪಾದಕರ ಸಂಘ ಗ್ರಾಮದ ರಾಣಿ ಐಶ್ವರ್ಯಾ ಬಿಲ್ಡರ್ಸ್ ಮೈದಾನದಲ್ಲಿ ಮೇ 24ರಿಂದ 26 ರವರೆಗೆ ಸ್ಪರ್ಧೆ ಏರ್ಪಡಿಸಿದ್ದು, ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತಿಯ ಬಹುಮಾನ 40 ಸಾವಿರ ರೂ., ತೃತೀಯ ಬಹುಮಾನವಾಗಿ 30 ಸಾವಿರ ರೂ. ಹಾಗೂ ನಾಲ್ಕನೇ ಬಹುಮಾನವಾಗಿ 20 ಸಾವಿರ ರೂ. ನಗದು ಬಹುಮಾನದ ಜತೆಗೆ ಸಮಾಧಾನಕರ ಬಹುಮಾನಗಳನ್ನು ವಿತರಣೆ ಮಾಡಲಾಗುತ್ತಿದೆ.

    ಸ್ಪರ್ಧೆಯಲ್ಲಿ ಭಾಗಿಯಾಗಲು ಇಚ್ಛಿಸುವವರು ಆಯೋಜಕರ ಕೆಲ ನಿಬಂಧನೆಗಳೊಂದಿಗೆ 1001 ರೂ.ಗಳನ್ನು ಪ್ರವೇಶ ಶುಲ್ಕವಾಗಿ ಪಾವತಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಬೋರೇಗೌಡ ಮೊ: 98457 02106, ರೇವಣ್ಣ ಮೊ: 96324 39456 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts