More

    ಹತ್ತಿ ಖರೀದಿ ಕೇಂದ್ರಗಳು ಹೆಚ್ಚಿಸಿ

    ಯಾದಗಿರಿ: ಜಿಲ್ಲೆಯಲ್ಲಿ ಹತ್ತಿ ಖರೀದಿ ಕೇಂದ್ರಗಳು ಹೆಚ್ಚಿನ ಪ್ರಮಾಣದಲ್ಲಿ ತೆರೆಯುವಂತೆ ಆಗ್ರಹಿಸಿ ಕನರ್ಾಟಕ ರಾಜ್ಯ ರೈತ ಸಂಘದಿಂದ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

    ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್ ಮಾತನಾಡಿ, ಕರೊನಾ ವೈರಸ್ನಿಂದ ಸಕರ್ಾರ ಲಾಕ್ಡೌನ್ ಆದೇಶ ಹೊರಡಿಸಿದ ಬಳಿಕ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯಲ್ಲಿ ರೈತರು ಬೆಳೆದ ಹತ್ತಿಯನ್ನು ಮಾರಾಟ ಮಾಡಬೇಕಾದರೆ ಸಮಸ್ಯೆಯಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.

    ಸರ್ಕಾರ ರೈತರ ನೆರವಿಗೆ ಬಂದು ಹತ್ತಿ ಖರೀದಿ ಕೇಂದ್ರಗಳನ್ನು ತೆರೆದಿದ್ದರೂ ಸಹ ಅದು ಸಮರ್ಪಕವಾಗಿಲ್ಲ. ಈಗಾಗಲೇ 4500 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಈ ರೈತರಿಂದ ಕರೊನಾ ಕಾರಣ ದಿನವೊಂದಕ್ಕೆ 30 ರೈತರಿಂದ ಮಾತ್ರ ಹತ್ತಿ ಖರೀದಿಸಲಾಗುತ್ತಿದೆ. ಇದನ್ನು ಲೆಕ್ಕಿಸಿದರೆ ಇನ್ನು ಐದು ತಿಂಗಳ ವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ಇನ್ನು ನೋಂದಣಿಯಾಗದ ಬಹಳಷ್ಟು ರೈತರು ಹೊರಗುಳಿದಿದ್ದು ಎಲ್ಲರಿಗೂ ಖರೀದಿ ಕೇಂದ್ರದ ಸೌಲತ್ತು ಸಿಗುವಂತಾಬೇಕಿದೆ ಎಂದರು.

    ಕೂಡಲೇ ಜಿಲ್ಲೆಯಲ್ಲಿ ಇನ್ನೂ ಎರಡರಿಂದ ಮೂರು ಖರೀದಿ ಕೇಂದ್ರಗಳು ಆರಂಭಿಸಬೇಕು. ಈ ಸಮಸ್ಯೆಯನ್ನು ತುತರ್ು ಎಂದು ಪರಿಗಣಿಸಿ ತಕ್ಷಣ ಮುಂದಿನ ಮೂರು ದಿನಗಳಲ್ಲಿ ಖರೀದಿ ಕೇಂದ್ರಗಳು ಆರಂಭಿಸಬೇಕು ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಸೋಪಣ್ಣ ಎಂ. ಹಳಿಸಗರ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts