More

    ಗ್ರಾಮಾಂತರ ಜಿಲ್ಲೆಗೆ ‘ಕೈ’ಕೊಟ್ಟ ಸಿದ್ದರಾಮಯ್ಯ

    ಸಚಿವರಿದ್ದರೂ ದೊರಕದ ಸೌಲಭ್ಯ

    ಜನರ ನಿರೀಕ್ಷೆ ಹುಸಿಗೊಳಿಸಿದ ಸರ್ಕಾರ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಗದ್ದುಗೆ ಕೊಟ್ಟು, ದೇವನಹಳ್ಳಿಯಿಂದ ಸಚಿವರ ಕೊಡುಗೆಯನ್ನೂ ನೀಡಿದ ಜಿಲ್ಲೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ‘ಕೈ’ಕೊಟ್ಟಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
    ಈ ಹಿಂದಿನ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ನಿರಾಶದಾಯಕ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೂ, ಕೆಲವೊಂದು ಯೋಜನೆಗಳನ್ನು ೋಷಿಸುವ ಮೂಲಕ ಗಾಯಕ್ಕೆ ಮುಲಾಮು ಹಚ್ಚುವ ಕೆಲಸ ಮಾಡಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಚೊಚ್ಚಲ ಆಯವ್ಯಯ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬ ಬೇಸರ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

    ಪ್ರಗತಿ ಕಡೆಗಣಿಸಿದ್ದಕ್ಕೆ ಟೀಕೆ: ಈ ಹಿಂದೆ ಎರಡು ತಾಲೂಕುಗಳಲ್ಲಿ ಜೆಡಿಎಸ್ ಹಾಗೂ ಮತ್ತೆರಡು ತಾಲೂಕುಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಯಾವುದೇ ಯೋಜನೆ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ನಾಲ್ವರೂ ಶಾಸಕರು ಬೆರಳು ಮಾಡುತ್ತಿದ್ದರು. ಬಿಜೆಪಿ ಸರ್ಕಾರ ಅನುದಾನ ನೀಡುತ್ತಿಲ್ಲ. ತಾಲೂಕಿನ ಅಭಿವೃದ್ಧಿಗೆ ಹಣದ ಕೊರತೆ ಎದುರಾಗಿದೆ ಎಂದು ಬಹಿರಂಗವಾಗಿಯೇ ಅಳಲು ತೋಡಿಕೊಳ್ಳುತ್ತಿದ್ದರು. ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ವಿರುದ್ಧ ಆರೋಪದ ಮಳೆ ಸುರಿಸುತ್ತಿದ್ದರು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕೈ ಶಾಸಕರೇ ಇದ್ದಾರೆ. ಉಸ್ತುವಾರಿ ಸಚಿವರಿದ್ದಾರೆ. ಆದರೂ ಜಿಲ್ಲೆಯ ಪ್ರಗತಿ ಕಡೆಗಣಿಸಿರುವುದು ಎಷ್ಟು ಸರಿ ಎಂಬ ಟೀಕೆ ವ್ಯಕ್ತವಾಗಿದೆ.

    ಜನರ ಆಶೋತ್ತರಗಳಿಗೆ ದನಿಯಾಗಿಲ್ಲ! ದೇವನಹಳ್ಳಿ-ವಿಜಯಪುರ-ಎಚ್.ಕ್ರಾಸ್-ವೇಮಗಲ್-ತಮಿಳುನಾಡು ಗಡಿವರೆಗೆ ಸಂಪರ್ಕ ಕಲ್ಪಿಸಲು 4 ಮತ್ತು 6 ಪಥದ 123 ಕಿ.ಮೀ ರಸ್ತೆ ನಿರ್ಮಾಣ, ದೇವನಹಳ್ಳಿಯ ಏರೋಸ್ಪೇಸ್ ಹಾಗೂ ಡಿೆಕ್ಸ್ ಪಾರ್ಕ್‌ನಲ್ಲಿ ಕರ್ನಾಟಕ ಏರೋಸ್ಪೇಸ್ ತಂತ್ರಜ್ಞಾನ ಕೇಂದ್ರ ಸ್ಥಾಪನೆ, ದೇವನಹಳ್ಳಿ ಏರೋಸ್ಪೇಸ್ ಕೈಗಾರಿಕಾ ಪ್ರದೇಶದಲ್ಲಿ 3 ಅಗ್ನಿಶಾಮಕ ಕಟ್ಟಡಗಳ ನಿರ್ಮಾಣ ಅಗ್ನಿಶಾಮಕ ವಾಹನಗಳ ವ್ಯವಸ್ಥೆಯಂಥ ೋಷಣೆ ಹೊರತುಪಡಿಸಿ ಜನಸಾಮಾನ್ಯರಿಗೆ, ಕೃಷಿಕರಿಗೆ, ಕಾರ್ಮಿಕರಿಗೆ ಸೇರಿ ಇನ್ನಿತರ ವಲಯದ ವರ್ಗದವರಿಗೆ ಅನುಕೂಲವಾಗುವ ಯಾವುದೇ ಯೋಜನೆ ೋಷಣೆಯಾಗದಿರುವುದು ಜಿಲ್ಲೆಯ ಜನರಿಗೆ ಆಘಾತ ನೀಡಿದೆ. ನೆಲಮಂಗಲ, ಹೊಸಕೋಟೆ ಹಾಗೂ ದೇವನಹಳ್ಳಿಯಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಮುಖ್ಯವಾಗಿ ದೇವನಹಳ್ಳಿಯಿಂದ ಆಯ್ಕೆಯಾದ ಕೆ.ಎಚ್.ಮುನಿಯಪ್ಪ ಸಂಪುಟದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರೂ ಜಿಲ್ಲೆಯ ಜನರ ಆಶೋತ್ತರಗಳಿಗೆ ದನಿಯಾಗಿಲ್ಲ ಎಂಬ ನೋವು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ.

    ಪ್ರಮುಖ ನಿರೀಕ್ಷೆಗಳಿಗೆ ಎಳ್ಳುನೀರು: ಹೊಸಕೋಟೆ ಹಾಗೂ ನೆಲಮಂಗಲದವರೆಗೆ ಮೆಟ್ರೋ ವಿಸ್ತರಣೆ ವಿಚಾರ ಪ್ರಸ್ತಾಪವಿಲ್ಲ. ನಗರ ಪ್ರದೇಶಗಳಿಗೆ ಕಾವೇರಿ ನೀರಿನ ಸಂಪರ್ಕ ಕನಸಾಗಿದೆ, ಐತಿಹಾಸಿಕ ತಾಣವಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಪ್ರವಾಸೋದ್ಯಮಗಳ ಅಭಿವೃದ್ಧಿಗೆ ಕೊಡುಗೆ ನೀಡಿಲ್ಲ. ಈ ಹಿಂದೆ ಆದಿನಾರಾಯಣ ಹೊಸಹಳ್ಳಿಯಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಜಾಗ ಗುರುತು ಮಾಡಲಾಗಿತ್ತು. ಜಿಲ್ಲೆಯ ಕ್ರೀಡಾಪಟುಗಳು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದರು. ಆದರೆ ಬಜೆಟ್‌ನಲ್ಲಿ ಇದ್ಯಾವುದರ ಪ್ರಸ್ತಾವನೆ ಇಲ್ಲದೆ ಕ್ರೀಡಾಪಟುಗಳ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಸಿದ್ದನಾಯಕನಹಳ್ಳಿ ಸಮೀಪ ಸರ್ಕಾರಿ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕಾಗಿ 9 ಎಕರೆ ಜಾಗ ಗುರುತಿಸಲಾಗಿದೆ, 2020ರ ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನ ೋಷಣೆಯಾಗಿತ್ತು. ಆದರೆ ಕಾರ್ಯರೂಪಕ್ಕೆ ಬರಲಿಲ್ಲ. ಈ ಬಾರಿಯೂ ಅದೇ ಪುನಾರವರ್ತನೆಯಾಗಿದ್ದು, ಜಿಲ್ಲೆಯ ಜನರ ವೈದ್ಯಕೀಯ ಸೇವೆಗೆ ಬಜೆಟ್ ಬರೆ ಎಳೆದಿದೆ. ಜಿಲ್ಲೆಯಲ್ಲಿನ ಪ್ರಸಿದ್ಧ ಪ್ರವಾಸಿತಾಣಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಭರಪೂರ ಅನುದಾನ ೋಷಣೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ದೇವನಹಳ್ಳಿಯ ಏರ್‌ಪೋರ್ಟ್ ಪ್ರದೇಶ ಹೊರತುಪಡಿಸಿ ಜಿಲ್ಲೆಯ ಯಾವುದೇ ಭಾಗವೂ ರಾಜ್ಯ ಸರ್ಕಾರದ ಗಮನ ಸೆಳೆದಿಲ್ಲ. ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಹೊಸಕೋಟೆಯನ್ನು ಸ್ಮಾರ್ಟ್ ಸಿಟಿ ಮಾಡುವುದಾಗಿ ೋಷಿಸಿದ್ದರು. ಆದರೆ ಈ ಬಾರಿಯ ಸರ್ಕಾರದಲ್ಲಿ ಜಿಲ್ಲೆಯ ಯಾವೊಂದು ತಾಲೂಕುಗಳ ಬಗ್ಗೆಯೂ ಇದರ ಪ್ರಸ್ತಾಪವಿಲ್ಲದಂತಾಗಿದೆ.

    ದೇವನಹಳ್ಳಿಗೆ ವಿಶೇಷ ಅನುದಾನ ಸಿಗಲಿಲ್ಲ: ಜಿಲ್ಲಾಡಳಿತಭವನ ದೇವನಹಳ್ಳಿಯಲ್ಲಿ ಸ್ಥಾಪಿತಗೊಂಡಿರುವುದರಿಂದ ಜತೆಗೆ ಇಲ್ಲಿನ ಶಾಸಕರೇ ಸಚಿವರಾಗಿರುವುದರಿಂದ ದೇವನಹಳ್ಳಿಗೆ ಆದ್ಯತೆ ಸಿಗಬಹುದೆಂಬ ನಿರೀಕ್ಷೆ ದಟ್ಟವಾಗಿತ್ತು. ದೇವನಹಳ್ಳಿ ಪಟ್ಟಣಕ್ಕೂ ಕಾವೇರಿ ನೀರು ಪೂರೈಕೆಯಾಗಲಿದೆ, ಕೋಟೆ ಅಭಿವೃದ್ಧಿ, ಕೆಂಪೇಗೌಡರ ಪೂರ್ವಿಕರು ನೆಲೆಸಿದ್ದ ಆವತಿ ಅಭಿವೃದ್ಧಿಗೆ ವಿಶೇಷ ಯೋಜನೆಗಳು ಜಾರಿಯಾಗಬಹುದೆಂಬ ನಿರೀಕ್ಷೆಗಳೆಲ್ಲವೂ ತಲೆಕೆಳಗಾಗಿವೆ.


    ಮೆಟ್ರೋ ಸದ್ದು ಮಾಡಲಿಲ್ಲ: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಹೊಸಕೋಟೆವರೆಗೆ ಮೆಟ್ರೋ ವಿಸ್ತರಣೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದರು. ಇದಕ್ಕೆ ಕೇಂದ್ರದ ಮಂತ್ರಿಗಳು ಹಾಗೂ ರಾಜ್ಯದ ಸಿಎಂ ಸ್ಪಂದಿಸಿದ್ದರು. ಹೊಸಕೋಟೆವರೆಗೆ ಮೆಟ್ರೋ ವಿಸ್ತರಣೆ ಸಂಬಂಧ ರೂಪುರೇಷೆ ಸಿದ್ಧಪಡಿಸುವ ಪ್ರಕ್ರಿಯೆಗೆ ಚಾಲನೆಯೂ ದೊರೆತಿತ್ತು. ಆದರೆ ಕೆ.ಆರ್.ಪುರ ಮಾರ್ಗದ ಮೆಟ್ರೋ ವಿಷಯ ಹೊರತುಪಡಿಸಿ ಹೊಸಕೋಟೆಯ ಪ್ರಸ್ತಾಪ ಕೈಬಿಟ್ಟಿರುವುದು ಹೊಸಕೋಟೆ ಜನರ ಬಹುನಿರೀಕ್ಷೆಯ ಕನಸಿಗೆ ತಣ್ಣೀರೆರಚಿದಂತಾಗಿದೆ. ಅದೇ ರೀತಿ ಮಾದಾವರದವರೆಗೆ ಮೆಟ್ರೋ ವಿಸ್ತರಣೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದು, ಅಲ್ಲಿಂದ ನೆಲಮಂಗಲದವರೆಗೆ ವಿಸ್ತರಣೆ ಕೂಗಿಗೆ ಮನ್ನಣೆ ದೊರೆತಿಲ್ಲ.

    ಕೈಗಾರಿಕಾ ವಲಯ ಕಡೆಗಣನೆ: ಗ್ರಾಮಾಂತರ ಜಿಲ್ಲೆಯಲ್ಲಿಯೇ ಪ್ರಮುಖ ಕೈಗಾರಿಕಾ ಪ್ರದೇಶವೆಂದು ಗುರುತಿಸಿಕೊಂಡಿರುವ ಸೋಂಪುರ ಹೋಬಳಿ ಹಾಗೂ ದೊಡ್ಡಬಳ್ಳಾಪುರದ ಬಾಶೆಟ್ಟಿ ಪ್ರದೇಶ ಹಿಂದಿನಿಂದಲೂ ಕಡೆಗಣಿಸಲ್ಪಟ್ಟಿದೆ. ನೂತನ ಸರ್ಕಾರ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಯಾವುದಾದರೂ ಶಾಶ್ವತ ಯೋಜನೆ ೋಷಿಸುವ ನಿರೀಕ್ಷೆ ದಟ್ಟವಾಗಿತ್ತು. ಆದರೆ ಈ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾವನೆ ಇಲ್ಲದಿರುವುದು ಜಿಲ್ಲೆಗೆ ದೊಡ್ಡ ಪೆಟ್ಟು ನೀಡಿದಂತಾಗಿದೆ.

    ಕಸದ ಸಮಸ್ಯೆಗೆ ಸಿಗಲಿಲ್ಲ ಪರಿಹಾರ: ದಶಕಗಳಿಂದಲೂ ಕಾಡುತ್ತಿರುವ ದೊಡ್ಡಬಳ್ಳಾಪುರ ತಾಲೂಕಿನ ಕಸ ಸಂಸ್ಕರಣಾ ಘಟಕಗಳ ಸಮಸ್ಯೆಗೆ ಈ ಬಾರಿಯೂ ಸರ್ಕಾರ ದನಿಯಾಗಿಲ್ಲ. ದೊಡ್ಡಬೆಳವಂಗಲ ಹೋಬಳಿಯಲ್ಲಿನ ಕಸ ಘಟಕದ ವಿರುದ್ಧ ಅನೇಕ ಹೋರಾಟಗಳು ನಡೆದಿವೆ. ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವಧಿಯಲ್ಲಿಯೂ ಪ್ರತಿಭಟನೆ ಹೋರಾಟಗಳು ತಾರಕಕ್ಕೇರಿದ್ದವು. ಖುದ್ದು ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು. ಈಗ ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಮಂಡಿಸಿರುವ ಬಜೆಟ್‌ನಲ್ಲಿ ದೊಡ್ಡಬಳ್ಳಾಪುರದ ಕಸದ ಸೊಲ್ಲೆತ್ತಿಲ್ಲ. ಇಲ್ಲಿನ ಜನರಿಗೆ ಕಸ ಘಟಕದಿಂದ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಯಾವೊಂದು ವಿಷಯವೂ ಬಜೆಟ್‌ನಲ್ಲಿ ಅಡಕವಾಗದಿರುವುದು ಜನರನ್ನು ತೀವ್ರ ನಿರಾಸೆಗೊಳಿಸಿದೆ.

    ಜಿಲ್ಲಾ ಕೇಂದ್ರ ಕಗ್ಗಂಟು: ದಶಕಗಳಿಂದಲೂ ಕೇಳಿಬರುತ್ತಿರುವ ಜಿಲ್ಲಾ ಕೇಂದ್ರ ೋಷಣೆ ಈ ಬಾರಿಯ ಬಜೆಟ್‌ನಲ್ಲೂ ನನೆಗುದಿಗೆ ಬಿದ್ದಿದೆ. ಜಿಲ್ಲಾ ಮಟ್ಟದ ಸೌಕರ್ಯಗಳ ಬಗ್ಗೆ ಎಲ್ಲಿಯೂ ಪ್ರಸ್ತಾವನೆಯಾಗಿಲ್ಲ, ಕಳೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ೋಷಿಸುವ ಬಗ್ಗೆ ವೇದಿಕೆಯಲ್ಲಿ ತಿಳಿಸಿದ್ದರು. ಬಳಿಕ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಮುಖಂಡರು ಈ ಸಂಬಂಧ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಷಯ ಸಂಬಂಧ ಅಂದಿನ ಸಿಎಂ ಕೆಲವೇ ದಿನಗಳಲ್ಲಿ ಜಿಲ್ಲಾ ಕೇಂದ್ರ ೋಷಣೆಗೆ ತಾರ್ಕಿಕ ಅಂತ್ಯ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೂ ಕಾರ್ಯಗತವಾಗಲಿಲ್ಲ. ಈ ಬಾರಿ ದೇವನಹಳ್ಳಿಯಿಂದ ಗೆಲುವು ಕಂಡು ಸಂಪುಟ ಸೇರಿದ ಸಚಿವ ಕೆ.ಎಚ್.ಮುನಿಯಪ್ಪ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಆದ್ದರಿಂದ ಈ ಬಜೆಟ್‌ನಲ್ಲಿ ಜಿಲ್ಲಾ ಕೇಂದ್ರ ಪ್ರಸ್ತಾವನೆ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ ಜಿಲ್ಲಾ ಕೇಂದ್ರದ ಕಗ್ಗಂಟನ್ನು ಸರ್ಕಾರ ಜೀವಂತವಾಗಿಯೇ ಇರಿಸಿದೆ.

    ನೀರಿನ ಸೆಲೆ ಸಿಕ್ಕಂತಾಗಿದೆ: ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಚಾಲನೆಗೊಳಿಸಿದ್ದ 12,912 ಕೋಟಿ ರೂ. ಮೊತ್ತದ ಎತ್ತಿನ ಹೊಳೆ ಯೋಜನೆಯನ್ನು ಬಿಜೆಪಿ ಸರ್ಕಾರ ಸಕಾಲದಲ್ಲಿ ಪೂರ್ಣಗೊಳಿಸದ ಕಾರಣ ದರ ಹೆಚ್ಚಳಗೊಂಡಿತ್ತು. ಈ ಯೋಜನೆಯು 23,252 ಕೋಟಿ ರೂ. ಮೊತ್ತಕ್ಕೆ ಪರಿಷ್ಕೃತಗೊಂಡಿದ್ದು, ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಆದ್ಯತೆಯ ಮೇಲೆ ಕ್ರಮ ತೆಗೆದುಕೊಳ್ಳುವ ಸಂಬಂಧ ಬಜೆಟ್ ಮಂಡನೆಯಾಗಿರುವುದು ಜಿಲ್ಲೆಯ ಜನರಿಗೆ ಮರುಭೂಮಿಯಲ್ಲಿ ನೀರಿನ ಸೆಲೆ ಸಿಕ್ಕಂತಾಗಿದೆ.

    ನೇಕಾರರೆಡೆಗೆ ಕಾಳಜಿ: ನೇಕಾರಿಕೆಯಲ್ಲಿ ದೊಡ್ಡ ಹೆಸರು ಮಾಡಿರುವ ದೊಡ್ಡಬಳ್ಳಾಪುರಕ್ಕೆ ಈ ಬಾರಿಯ ಬಜೆಟ್‌ನ್ಲಲಿ ಕಾಳಜಿ ತೋರಿಸಲಾಗಿದೆ, ನೇಕಾರರಿಗೆ 10 ಎಚ್‌ಪಿ ಬಳಕೆಯ ಮಗ್ಗಗಳಿಗೆ 250 ಯೂನಿಟ್ ಉಚಿತ ವಿದ್ಯುತ್, ನೇಕಾರರ ಮಕ್ಕಳಿಗೆ ಶೈಕ್ಷಣಿಕ ನೆರವು ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ೋಷಿಸಿರುವುದು ತುಸು ಚೇತರಿಕೆ ತರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts