More

    ಶಿಕ್ಷಣಕ್ಕೆ ವಿಶೇಷ ಆದ್ಯತೆ ಉತ್ತಮ ಬೆಳವಣಿಗೆ: ತಜ್ಞ ಅಭಿಪ್ರಾಯ

    ಶಿಕ್ಷಣಕ್ಕೆ ವಿಶೇಷ ಆದ್ಯತೆ ಉತ್ತಮ ಬೆಳವಣಿಗೆ: ತಜ್ಞ ಅಭಿಪ್ರಾಯರಾಜ್ಯ ಸರ್ಕಾರದ ಬಜೆಟ್​ನಲ್ಲಿ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆ ಆಗಿದೆ. ಒಟ್ಟಾರೆ 39 ಸಾವಿರ ಕೋಟಿ ರೂ. ಶಿಕ್ಷಣಕ್ಕಾಗಿಯೇ ಮೀಸಲಿಟ್ಟಿರುವುದು ಸ್ವಾಗತಾರ್ಹ. ಇದುವೇ ಅತಿ ಹೆಚ್ಚಿನ ಅನುದಾನವಾಗಿದೆ. ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ಉನ್ನತ ಶಿಕ್ಷಣಕ್ಕೆ ಎಷ್ಟು ಅನುದಾನವನ್ನು ವಿಂಗಡಿಸಲಾಗಿದೆ ಎಂಬ ಮಾಹಿತಿ ಪ್ರಕಟಿಸಿಲ್ಲ.

    ಬಜೆಟ್​ನಲ್ಲಿ ಶಿಕ್ಷಣ ಸುಧಾರಣೆಗೂ ಹೆಚ್ಚಿನ ಒತ್ತು ಕೊಡಲಾಗಿದೆ. ಇದರಿಂದಾಗಿ ಭವಿಷ್ಯದಲ್ಲಿ ಕಲಿಕಾಗುಣಮಟ್ಟ ಇನ್ನಷ್ಟು ಹೆಚ್ಚಾಗಲಿದೆ. ಯುವ ಜನರ ಸಬಲೀಕರಣ, ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಮೂಡಿಸಿದೆ. ರಾಜ್ಯದಲ್ಲಿ ಸ್ಥಾಪನೆಯಾಗುತ್ತಿರುವ ಹೊಸ ವಿದ್ಯಾಲಯಗಳಿಗೂ ಅನುದಾನ ಮೀಸಲಿಟ್ಟಿರುವುದು ಉತ್ತಮ ಸಂಗತಿಯಾಗಿದೆ. ಇವುಗಳನ್ನು ಕಟ್ಟಿ ಬೆಳೆಸಲು ನೆರವಾಗಲಿದೆ. ಪಿಂಚಣಿ ಹಣವನ್ನೂ ಅರ್ಧದಷ್ಟು ಮಾತ್ರ ರಾಜ್ಯ ಸರ್ಕಾರ ನೀಡುತ್ತಿರುವುದರಿಂದ ವಿಶ್ವವಿದ್ಯಾಲಯಗಳನ್ನು ನಡೆಸುವುದು ಕಷ್ಟಕರವಾಗಿದೆ. ಜತೆಗೆ, ಸಂಬಳದಲ್ಲೂ ಕಡಿತ ಮಾಡುತ್ತಿದೆ. ಇದು ಹೆಚ್ಚುವರಿ ಆರ್ಥಿಕ ಹೊರೆಯಾಗಿದೆ. ಆಂತರಿಕ ಸಂಪನ್ಮೂಲದಲ್ಲಿ ಬಾಕಿ ಹಣ ನೀಡಬೇಕಾಗಿದೆ. ಇದು ಸಮರ್ಥನೀಯ ಕ್ರಮವಲ್ಲ. ಆದ್ದರಿಂದ ಈ ಹಿಂದಿನಂತೆ ನಿವೃತ್ತರಿಗೆ ಪಿಂಚಣಿ ಹಣವನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರವೇ ಭರಿಸಬೇಕು. ಬೋಧಕ, ಬೋಧಕೇತರರ ವೇತನವನ್ನೂ ಸರ್ಕಾರವೇ ಪೂರ್ಣವಾಗಿ ನೀಡಬೇಕು. ಇಲ್ಲವಾದರೆ ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿವೆ. ಶಾಲೆ, ಪಿಯುಸಿ, ಪ್ರಥಮ ದರ್ಜೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಶಿಕ್ಷಕರ ಕೊರತೆಯಿಂದ ನಲುಗುತ್ತಿವೆ. ಸರ್ಕಾರಿ ಕಾಲೇಜು, ವಿಶ್ವವಿದ್ಯಾಲಯದಲ್ಲಿ ಶೇ.30ರಿಂದ 40ರಷ್ಟು ಬೋಧಕರ ಹುದ್ದೆಗಳು ಖಾಲಿ ಬಿದ್ದಿವೆ. ಹೀಗಾದರೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್​ಇಇ) ಸಕಾರಗೊಳಿಸಲು ಆಗಲ್ಲ. ಆದ್ದರಿಂದ ಪ್ರತಿ ವರ್ಷ 3 ಸಾವಿರ ಬೋಧಕರನ್ನು ಮುಂದಿನ ವರ್ಷ 5 ವರ್ಷ ನಿಯಮಿತವಾಗಿ ನೇಮಕ ಮಾಡಿಕೊಳ್ಳಬೇಕು. ಆಗ ಮಾತ್ರ ನೂತನ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಯಶಸ್ಸು ಸಾಧಿಸಬಹುದು. ಇಲ್ಲವಾದರೆ ಕಷ್ಟಕರವಾಗಲಿದೆ.

    ಶಾಲಾ, ಕಾಲೇಜುಗಳಿಗೆ ಹೆಚ್ಚಿನ ಮೂಲಸೌಲಭ್ಯ ಕಲ್ಪಿಸಿಕೊಡಬೇಕಾಗಿದೆ. ಇದರೊಂದಿಗೆ ಎಲ್ಲ ಹಂತದಲ್ಲೂ ಪರಿಣಾಮಕಾರಿಯಾಗಿ ಶಿಕ್ಷಣ ನೀತಿಯನ್ನು ಜಾರಿ ತರಲು ಅನುವು ಆಗಲಿದೆ. ಇಂಜಿನಿಯರ್, ಡಾಕ್ಟರ್ ಸೃಷ್ಟಿ ಮಾಡಿದರೆ ಸಾಲದು, ಸಂಶೋಧಕರನ್ನು ಸೃಷ್ಟಿಸಬೇಕು. ಸಂಶೋಧನಾ ಚಟುವಟಿಕೆಗೆ ಅನುದಾನ ಅಭಾವ ತೀವ್ರವಾಗಿ ಕಾಡುತ್ತಿದೆ. ಕೇಂದ್ರ ಸರ್ಕಾರದಿಂದ ಅನುದಾನವೂ ಇಲ್ಲ. ಪ್ರೊಜೆಕ್ಟ್​ಗಳೂ ಬರುತ್ತಿಲ್ಲ. ಇದರಿಂದ ಸಂಶೋಧನಾ ಚಟುವಟಿಕೆಗಳು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ.

    ಅನುದಾನ ನೀಡದೆ ಕೇಂದ್ರ ಸರ್ಕಾರ ಕೈ ಬಿಟ್ಟಿದೆ. ರಾಜ್ಯ ಸರ್ಕಾರ ಸಹ ಅದೇ ರೀತಿ ಮಾಡದೇ ಕೈಹಿಡಿಯಬೇಕು. ಸಂಶೋಧನೆಗೆ ಹೆಚ್ಚಿನ ಅನುದಾನ ನೀಡಬೇಕು. 50 ವರ್ಷ, 100 ವರ್ಷ ಹಳೆಯ ವಿವಿಗಳಿಗೆ ಪ್ರತ್ಯೇಕ ಅನುದಾನವನ್ನು ಅವುಗಳ ಪ್ರಗತಿ ಆಧಾರದ ಮೇಲೆ ನೀಡಲಿ. ಉತ್ತೇಜನ ಕೊರತೆಯಿಂದ ಮೂಲ ವಿಜ್ಞಾನ ಹಿಂದೆ ಬಿದ್ದಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಸೇರಿದಂತೆ ಇನ್ನಿತರ ಮೂಲ ವಿಜ್ಞಾನ ವಿಷಯ ಕಲಿಯಲು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ಇದು ಸರಿಯಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನ, ಪ್ರೋತ್ಸಾಹ ನೀಡಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ.

    ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

    ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಅಪ್ರಾಪ್ತ ವಯಸ್ಕಳ ಮುಖಕ್ಕೇ ಆ್ಯಸಿಡ್ ಎರಚಿದ!; ಆರೋಪಿ ಪರಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts