More

    ಅಂಧರ ಟಿ-20 ವಿಶ್ವಕಪ್​ಗೆ ಚಾಲನೆ; ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವಿ, ಹರ್ಷಿಕಾ ಪೂಣಚ್ಚ ಭಾಗಿ

    ನವದೆಹಲಿ: ಅಂಧರ ಕ್ರಿಕೆಟ್ ಫೆಢರೇಷನ್ ಆಫ್ ಇಂಡಿಯಾ ಆಯೋಜಿಸಿರುವ ಅಂಧರ ಟಿ-20 ವಿಶ್ವಕಪ್​ಗೆ ಇಂದು(ಡಿ.6) ಹರ್ಯಾಣದ ಫರಿದಾಬಾದ್​​ ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ಆಲ್​ರೌಂಡರ್ ಯುವರಾಜ್​ ಸಿಂಗ್, ಹರ್ಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್, ಕನ್ನಡ ಚಿತ್ರರಂಗದ ನಟಿ ಹರ್ಷಿಕಾ ಪೂಣಚ್ಚ, ವಿಕಲಚೇತನ ಸಂಸ್ಥೆ ಸಮರ್ಥನಮ್ ಟ್ರಸ್ಟ್​​ನ ಸಂಸ್ಥಾಪಕ ಡಾ.ಮಹಾಂತೇಶ್ ಭಾಗವಹಿಸಿದ್ದರು.

    ಅಂಧರ ಟಿ-20 ವಿಶ್ವಕಪ್​ಗೆ ಚಾಲನೆ; ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವಿ, ಹರ್ಷಿಕಾ ಪೂಣಚ್ಚ ಭಾಗಿ

    ಮಾಜಿ ಆಲ್​ರೌಂಡರ್ ಯುವರಾಜ್​ ಸಿಂಗ್ ಈ ಬಾರಿಯ ಅಂಧರ ಟಿ-20 ವಿಶ್ವಕಪ್​ನ ರಾಯಭಾರಿಯಾಗಿದ್ದಾರೆ. ಡಿ.6 ರಿಂದ ಡಿ. 17ರ ವರೆಗೆ ಭಾರತದಲ್ಲೇ ನಡೆಯಲಿರುವ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವನ್ನು ಅಜಯ್ ಕುಮಾರ್ ರೆಡ್ಡಿ ಮುನ್ನಡೆಸಲಿದ್ದಾರೆ.

    ಅಂಧರ ಟಿ-20 ವಿಶ್ವಕಪ್​ಗೆ ಚಾಲನೆ; ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವಿ, ಹರ್ಷಿಕಾ ಪೂಣಚ್ಚ ಭಾಗಿ

    ಅಂಧರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಬಾಂಗ್ಲಾದೇಶ, ನೇಪಾಳ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ ದೇಶದ ತಂಡಗಳು ಪಾಲ್ಗೊಳ್ಳಲಿವೆ. ಮೊದಲು ಪಂದ್ಯದಲ್ಲಿ ಕಳೆದ ಸೀಸನ್​ನ ಚಾಂಪಿಯನ್ ತಂಡ ಭಾರತ ಹಾಗೂ ನೇಪಾಳ ತಂಡ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 382 ರನ್ ಕಲೆ ಹಾಕಿತ್ತು. ಇದನ್ನು ಬೆನ್ನು ಹತ್ತಿದ ನೇಪಾಳ ತಂಡ ನಿಗದಿ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 108 ರನ್ ಕಲೆ ಹಾಕಲು ಶಕ್ತವಾಯಿತು. ನೇಪಾಳ ವಿರುದ್ಧ 274 ರನ್ ಅಂತರದಿಂದ ಗೆದ್ದುಕೊಂಡಿರುವ ಭಾರತ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

    ಅಂಧರ ಟಿ-20 ವಿಶ್ವಕಪ್​ಗೆ ಚಾಲನೆ; ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವಿ, ಹರ್ಷಿಕಾ ಪೂಣಚ್ಚ ಭಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts