More

    ರೋಹಿತ್ ಶರ್ಮ​ ಪಡೆ ವಿಶ್ವಕಪ್​ ಟ್ರೋಫಿ ಗೆಲ್ಲುತ್ತಾ? ಎಂ.ಎಸ್​. ಧೋನಿ ಪ್ರತಿಕ್ರಿಯೆ ವೈರಲ್​

    ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲೂ ಅತ್ಯುತ್ತಮ ನಿರ್ವಹಣೆ ತೋರುತ್ತಿದೆ. ಇದುವರೆಗೂ ಭಾರತ ಎದುರಿಸಿರುವ ಐದೂ ಪಂದ್ಯಗಳಲ್ಲೂ ಅಮೋಘ ಜಯ ದಾಖಲಿಸಿದ್ದು, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಂಬರ್​ 1 ಸ್ಥಾನದಲ್ಲಿದೆ. ಸೆಮಿಫೈನಲ್​ ಪ್ರವೇಶ ಮಾಡಲು ಭಾರತಕ್ಕೆ ಇನ್ನೂ ಒಂದು ಅಥವಾ ಎರಡು ಪಂದ್ಯ ಗೆದ್ದರೆ ಸಾಕು.

    ಈ ಬಾರಿ ವಿಶ್ವಕಪ್​ ಟ್ರೋಫಿ ಎತ್ತಿಹಿಡಿಯುವ ಫೇವರಿಟ್​ ತಂಡಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಹೀಗಾಗಿ ರೋಹಿತ್​ ಶರ್ಮ ನೇತೃತ್ವದ ಟೀಂ ಇಂಡಿಯಾ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಎಂ.ಎಸ್​. ಧೋನಿ ನೇತೃತ್ವದ ತಂಡ ಕೊನೆಯ ಬಾರಿಗೆ ಟ್ರೋಫಿ ಜಯಿಸಿತು. 2011ರಲ್ಲಿ ತವರು ನೆಲದಲ್ಲೇ ಧೋನಿ ನಾಯಕತ್ವದಲ್ಲಿ ಭಾರತ ಟ್ರೋಫಿ ಜಯಿಸಿತು. ಹೀಗಾಗಿ ವಿಶ್ವಕಪ್​ ಬಗ್ಗೆ ಧೋನಿ ಹೇಳಿಕೆ ಪ್ರಸ್ತುತ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತದೆ. ಈ ಬಾರಿ ಟೀಂ ಇಂಡಿಯಾ ಟ್ರೋಫಿ ಗೆಲ್ಲುವ ಬಗ್ಗೆ ಧೋನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಿಜವಾಗಿಯೂ ಇಂದೊಂದು ಒಳ್ಳೆಯ ತಂಡ. ತಂಡದ ಸಮತೋಲನ ಮಾತ್ರ ಅತ್ಯುತ್ತಮವಾಗಿದೆ. ಎಲ್ಲ ಆಟಗಾರು ಉತ್ತಮವಾಗಿ ಆಡುತ್ತಿದ್ದಾರೆ. ಆದ್ದರಿಂದ ಎಲ್ಲವೂ ತುಂಬಾ ಚೆನ್ನಾಗಿ ಕಾಣುತ್ತಿದೆ. ಇದಕ್ಕಿಂತ ಹೆಚ್ಚಿಗೆ ನಾನು ಏನನ್ನೂ ಹೇಳುವುದಿಲ್ಲ. ಬುದ್ಧಿವಂತರಿಗೆ ಕೇವಲ ಸಿಗ್ನಲ್ ಸಾಕು ಎನ್ನುವ ಮೂಲಕ ಧೋನಿ ಟೀಮ್​ ಇಂಡಿಯಾ ಗೆಲುವಿನ ಸುಳಿವನ್ನು ನೀಡಿದ್ದಾರೆ. ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಧೋನಿ ಈ ಮಾತುಗಳನ್ನಾಡಿದ್ದಾರೆ.

    2011ರ ಭಾರತ ತಂಡವು ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್​ಗಾಗಿ ವಿಶ್ವಕಪ್ ಗೆಲ್ಲಲು ಬಯಸಿತ್ತು ಎಂದು ಆಗಾಗ ಹೇಳಲಾಗುತ್ತದೆ. ಈ ಬಾರಿ ವಿರಾಟ್ ಕೊಹ್ಲಿಗಾಗಿ ಗೆಲ್ಲಬೇಕೆಂದು ಹೇಳುವವರಿದ್ದಾರೆ. ಈ ಬಗ್ಗೆ ಹರ್ಭಜನ್ ಸಿಂಗ್ ಅವರನ್ನು ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ಕೇಳಿದಾಗ, ಅವರು ಕೊಟ್ಟ ಉತ್ತರ ಎಲ್ಲರ ಗಮನ ಸೆಳೆದಿದೆ.

    ಎರಡು ತಂಡಗಳ ನಡುವೆ ಬಹಳ ದೊಡ್ಡ ವ್ಯತ್ಯಾಸವಿದೆ. ಅಂದಿನ ತಂಡ (2011ರ ವಿಶ್ವಕಪ್ ವಿಜೇತ ಭಾರತ ತಂಡ) ಹೆಚ್ಚು ಒಗ್ಗಟ್ಟಾಗಿತ್ತು. ಆ ತಂಡದ ಸಚಿನ್​ಗಾಗಿ ವಿಶ್ವಕಪ್​ ಗೆಲ್ಲಲು ಬಯಸಿತ್ತು. ಸಚಿನ್​ ಅವರು ಇತರರಿಂದ ಸಾಕಷ್ಟು ಗೌರವವನ್ನು ಪಡೆದರು. ಆದರೆ, ಈ ತಂಡದ ಬಗ್ಗೆ ನನಗೆ ಖಚಿತವಾಗಿ ಗೊತ್ತಿಲ್ಲ. ವಿರಾಟ್ ಕೊಹ್ಲಿಗೆ ವಿಶ್ವಕಪ್ ಗೆಲ್ಲುವ ಆಸೆ ಯಾರಿಗೆ ಇದೆಯೋ ಗೊತ್ತಿಲ್ಲ. ಆದರೆ, ಅವರು ಭಾರತವನ್ನು ಗೆಲ್ಲಲು ಬಯಸುತ್ತಾರೆ. ಇದೇ ಎರಡು ತಂಡಗಳ ನಡುವೆ ಇರುವ ದೊಡ್ಡ ವ್ಯತ್ಯಾಸವಾಗಿದೆ ಎಂದು ಹರ್ಭಜನ್​ ಹೇಳಿದ್ದರು.

    ಎಲ್ಲ ಆಟಗಾರರು ತೆಂಡೂಲ್ಕರ್ ಅವರಿಗೆ ವಿಶ್ವಕಪ್ ಗೆಲ್ಲಲು ಬಯಸುತ್ತಾರೆ ಎಂಬಷ್ಟರ ಮಟ್ಟಿಗೆ ಇಡೀ ತಂಡವು ಸಚಿನ್ ಅವರನ್ನು ಗೌರವಿಸುತ್ತಿತ್ತು. ಆದರೆ, ಪ್ರಸ್ತುತ ತಂಡದಲ್ಲಿ ಕೊಹ್ಲಿ ಬಗ್ಗೆ ಎಲ್ಲ ಆಟಗಾರರು ಒಗ್ಗಟ್ಟಾಗಿದ್ದಾರೆಯೇ ಎಂಬುದು ನನಗೆ ಖಚಿತವಾಗಿಲ್ಲ ಎಂದು ಹರ್ಭಜನ್​ ಮಾತು ಜಾಲತಾಣದಲ್ಲಿ ಬಹಳ ಗಮನ ಸೆಳೆದಿದೆ. (ಏಜೆನ್ಸೀಸ್​)

    ದೇಶದಲ್ಲಿ ನಾಯಿಗಳಿಗಿಂತಲೂ ಹೆಚ್ಚಾಗಿ ಜಾರಿ ನಿರ್ದೇಶನಾಲಯ…: ಸಿಎಂ ಅಶೋಕ್ ಗೆಹ್ಲೋಟ್

    ಹುಲಿ ಉಗುರು ಲಾಕೆಟ್​​​ ಪ್ರಕರಣ; ಜೈಲು ಸೇರಿದ್ದ ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​​​​ಗೆ ಜಾಮೀನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts