More

    ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್‌ನ ತುಳು ಟ್ವೀಟ್ ವೈರಲ್

    ಮಂಗಳೂರು: ‘ಶೇ… ಎಂಚಿನ ಫೀಲ್ಡಿಂಗ್ ಮಾರ‌್ರೆ…’ – ಶಾರ್ಜಾದಲ್ಲಿ ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಮಧ್ಯೆ ನಡೆದ ಐಪಿಎಲ್ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ನಿಕೋಲಸ್ ಪೂರನ್ ಸಿಕ್ಸರ್ ಒಂದನ್ನು ಅದ್ಭುತವಾಗಿ ತಡೆದ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್ ಹೀಗೆ ಟ್ವೀಟ್ ಮಾಡಿದೆ.

    ಶಾರ್ಜಾದ ಅಂಗಳದಲ್ಲಿ ಸಿಕ್ಸರ್, ಬೌಂಡರಿಗಳ ಮೇಲಾಟದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಬಾರಿಸಿದ ಚೆಂಡನ್ನು ಮೇಲಕ್ಕೆ ನೆಗೆದು ಸಿಕ್ಸರ್ ತಡೆದ ನಿಕೋಲಸ್ ಪೂರನ್‌ರ ಸಾಹಸಿಕ ಫೀಲ್ಡಿಂಗ್‌ಗೆ ಎಲ್ಲ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಕ್ರಿಕೆಟ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ, ‘ಇದು ನನ್ನ ಜೀವನದಲ್ಲಿ ಕಂಡ ಅತ್ಯುತ್ತಮ ಸೇವ್’ ಎಂದು ಟ್ವೀಟ್ ಮಾಡಿದ್ದರು. ಇದನ್ನು ರೀಟ್ವೀಟ್ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್, ‘ಶೇ… ಎಂಚಿನ ಫೀಲ್ಡಿಂಗ್ ಮಾರ‌್ರೆ’ (ಎಂಥಾ ಫೀಲ್ಡಿಂಗ್ ಮಾರಾಯರೇ) ಎಂದು ಬರೆದುಕೊಂಡಿದೆ. ಇದು ಎಲ್ಲ ಕಡೆ ವೈರಲ್ ಆಗಿದ್ದು, ಚಾನಲ್‌ನ ತುಳು ಭಾಷೆಯ ಅಭಿಮಾನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

    ಪೂರನ್ ಫೀಲ್ಡಿಂಗ್ ನೋಡಿ ನಮ್ಮ ಮನಸ್ಸಿನಲ್ಲಿ ಆ ಕ್ಷಣಕ್ಕೆ ಬಂದ ಯೋಚನೆಯನ್ನೇ ಟ್ವೀಟ್ ಮಾಡಿದ್ದು, ಕರ್ನಾಟಕದ ಸ್ಥಳೀಯ ಭಾಷೆಗಳನ್ನು ಪ್ರಚುರಪಡಿಸುವ ಉದ್ದೇಶ ಇದಾಗಿದೆ ಎಂದು ಟ್ವೀಟ್ ಮಾಡಿರುವ ಸ್ಟಾರ್​ ಸ್ಪೋರ್ಟ್ಸ್​​ ಪಿಆರ್​ ಟೀಮ್​ ತಿಳಿಸಿದೆ.

    ಇದನ್ನೂ ಓದಿ: ವಿಲನ್‌ನಿಂದ ಹೀರೋ ಆದ ತೆವಾಟಿಯಾ, ಟ್ವಿಟರ್‌ನಲ್ಲಿ ನಗುವಿನ ಸಿಕ್ಸರ್​ ಸಿಡಿಸಿದ ಮೀಮ್ಸ್​!

    ‘ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುತ್ತದೆ. ಕರಾವಳಿ ಭಾಗದ ಭಾಷೆಯನ್ನೂ ಬಳಸಿ ಅಭಿಮಾನಿಗಳನ್ನು ತಲುಪುವ ಉದ್ದೇಶ ನಮ್ಮದು. ಆ ಕ್ಷಣದಲ್ಲಿ ಮನಸ್ಸಿಗೆ ಬಂದ ವಾಕ್ಯವನ್ನು ಅಲ್ಲಿ ಹಾಕಿದ್ದು ಎಲ್ಲ ಕಡೆ ವೈರಲ್ ಆಗಿರುವ ಬಗ್ಗೆ ಅಭಿಮಾನವಿದೆ’ ಎಂದು ಸ್ಟಾರ್ ಸ್ಪೋರ್ಟ್ಸ್ ಪಿಆರ್ ಟೀಮ್‌ನ ರೋಹನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts