More

    ಶತಮಾನ ದಾಟಿದರೂ ಮುಕ್ಕಾಗದ ಸಾಹಿತ್ಯ ಪರಿಷತ್ ಪ್ರಸ್ತುತತೆ

    ಕಡೂರು: ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಪ್ರಾತಿನಿಧಿಕ ಸಂಘಟನೆ. ಶತಮಾನ ದಾಟಿದರೂ ಇನ್ನೂ ಅದರ ಪ್ರಸ್ತುತತೆ ಮುಕ್ಕಾಗದೆ ಉಳಿದಿದೆ. ಅದರ ವಿಸ್ತಾರ ಮತ್ತು ಅದರ ಸ್ವರೂಪ ಅತಿ ಎತ್ತರಕ್ಕೆ ಬೆಳೆದು ನಿಂತಿದೆ ಎಂದು ಸಾಹಿತಿ ಎಸ್.ಎನ್.ಚಂದ್ರಕಲಾ ತಿಳಿಸಿದರು.
    ಪಟ್ಟಣದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪದಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಇಷ್ಟು ಎತ್ತರಕ್ಕೆ ಸಾಗಿದ ಮತ್ತೊಂದು ಸಂಸ್ಥೆ ಇಡೀ ವಿಶ್ವದಲ್ಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆ ಸುಮಾರು ನಾಲ್ಕು ಲಕ್ಷವಿದೆ. ಜಗತ್ತಿನ 54 ರಾಷ್ಟ್ರಗಳ ಜನಸಂಖ್ಯೆ ಇಷ್ಟಿಲ್ಲವೆಂಬುದನ್ನು ಗಮನಿಸಿದರೆ ಇದರ ಪ್ರಾಮುಖ್ಯತೆ ಮನದಟ್ಟಾಗುತ್ತದೆ ಎಂದರು.
    1915ರ ಮೇ 5ರಂದು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೊಂಡಿತು. ಶತಮಾನ ದಾಟಿ ಸಂಘಟನಾತ್ಮವಾಗಿ ಸಾಗುತ್ತಿದೆ. ಪ್ರಸ್ತುತ 110ನೇ ವರ್ಷದ ದಿನಾಚರಣೆ ನಡೆಯುತ್ತಿದೆ. ಕೇಂದ್ರ ಕಚೇರಿಯ ಜತೆಗೆ ಕರ್ನಾಟಕದ ಎಲ್ಲ ಜಿಲ್ಲೆ, ತಾಲೂಕು, ದೆಹಲಿ ಮತ್ತು ಐದು ನೆರೆಯ ರಾಜ್ಯಗಳಲ್ಲಿ ಅಧಿಕೃತ ಘಟಕಗಳನ್ನು ಹೊಂದಿದೆ. ಕಸಾಪ ಎಂಬುದು ಕನ್ನಡಿಗರ ಪಾಲಿನ ಮೂರಕ್ಷರದ ಶಕ್ತಿ ಮಂತ್ರ ಎಂದು ತಿಳಿಸಿದರು.
    ಕಾರ್ಯಕ್ರಮವನ್ನು ಕಸಾಪ ಘಟಕದ ಹಿರಿಯ ಸದಸ್ಯ ಎಚ್.ವಿ.ಗಿರೀಶ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ಜತೆಗೆ ಕನ್ನಡದ ಸಂಘಟನೆಯನ್ನು ಬೆಳೆಸುವ ಮೂಲಕ ಹೆಮ್ಮರವಾಗಿ ಬೆಳೆದಿದೆ. ಈ ಹಿಂದೆ ಸಂಸ್ಥಾಪನಾ ಆಚರಣೆಯ ಮಾಹಿತಿ ಕೊರತೆ ಕಾಣುತ್ತಿತ್ತು. ಗೊರುಚ ಅವರು ಅಧ್ಯಕ್ಷರಾದ ಬಳಿಕ 1995ರಲ್ಲಿ 80ನೇ ಸಂಸ್ಥಾಪನ ದಿನಾವನ್ನಾಗಿ ಮೊದಲ ಬಾರಿಗೆ ಆಚರಣೆಗೆ ತರಲಾಯಿತು. ಈ ಸಂಭ್ರಮಾಚರಣೆಯು ಪ್ರತಿವರ್ಷ ಜಿಲ್ಲೆ ಮತ್ತು ತಾಲೂಕು ಘಟಕದ ವ್ಯಾಪ್ತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts