More

    ಲಂಚ ಪಡೆಯುತ್ತಿದ್ದ ವೇಳೆ ರೆಡ್​ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್​​ಐ, ಕಾನ್​ಸ್ಟೇಬಲ್

    ಹಾವೇರಿ: ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಸ್ಪೀಟ್ ಆಡಿಸಲು 2 ಲಕ್ಷ ರೂ. ಲಂಚ ಪಡೆಯುತ್ತಿದ್ದ ಪಿಎಸ್​ಐ ಹಾಗೂ ಕಾನ್​ಸ್ಟೇಬಲ್ ಲೊಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಇದನ್ನೂ ಓದಿ: ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್: ಹೊಸ ಬಾಂಬ್‌ ಸಿಡಿಸಿದ ದೇವರಾಜೇಗೌಡ

    ತಡಸ ಠಾಣೆ ಪಿಎಸ್ಐ ಶರಣಬಸಪ್ಪ ಕಾಂದೆ ಹಾಗೂ ಕಾನ್ ಸ್ಟೇಬಲ್ ಸುರೇಶ ಮಾನೋಜಿ ಲಂಚ ಪಡೆಯಲು ಹೋಗಿ‌ ಲೋಕಾ ಬಲೆಗೆ ಬಿದ್ದವರು.
    ಇಸ್ಪೀಟ್ ಆಡಿಸಲು ಐದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶುಕ್ರವಾರ ಮಧ್ಯವರ್ತಿ ಕಿರಣ‌ ವನಹಳ್ಳಿ ಎಂಬುವರ ಮೂಲಕ ಮುಂಗಡವಾಗಿ ಎರಡು ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

    ತಡಸ ಗ್ರಾಮದ ಪ್ರಭಾಕರ ಬೆಟದೂರ ಎಂಬುವರ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್ ಪಿ ಬಿ.ಪಿ.ಚಂದ್ರಶೇಖರ ನೇತೃತ್ವದಲ್ಲಿ ದಾಳಿ ನಡೆದಿದೆ. ತನಿಖಾಧಿಕಾರಿಗಳಾದ ಮಂಜುನಾಥ ಪಂಡಿತ ಹಾಗೂ ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ತಂಡದಲ್ಲಿದ್ದರು. ಆರೋಪಿತರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

    ದೇಶದ ಮಹಿಳೆಯರು ಯಾಕೆ ಉಚಿತ ಬಸ್‌ ಪ್ರಯಾಣ ಮಾಡಬಾರದು: ಮೋದಿಗೆ ಕೇಜ್ರಿವಾಲ್‌ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts