More

    ಸ್ಟಾರ್​ ನಟರು ವರ್ಷಕ್ಕೆ 2-3 ಸಿನಿಮಾಗಳು ಮಾಡಿದರೆ ಒಳ್ಳೆಯದು: ಬಾ.ಮ. ಹರೀಶ್​

    ಬೆಂಗಳೂರು: ಕನ್ನಡ ಸಿನಿಮಾಗಳಲ್ಲಿ ಉತ್ತಮ ಒಟಿಟಿ ಕಂಟೆಂಟ್​ಗಳಿದ್ದರೂ ಕೂಡ OTT ಪ್ಲ್ಯಾಟ್​​ಫಾರಂಗಳು ನಮ್ಮ ಚಿತ್ರಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ​​ ಅಧ್ಯಕ್ಷ ಬಾ.ಮ. ಹರೀಶ್ ಹೇಳಿದ್ದಾರೆ.

    ಇದನ್ನೂ ಓದಿ: Kousalya Supraja Rama Trailer Launch | Darling Krishna About Sudeep | ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಕಥೆ ಬಹಳ ವಿಭಿನ್ನವಾಗಿದೆ | BENGALURU

    ಈ ಬಗ್ಗೆ ಮಾತನಾಡಿದ ಬಾ.ಮ. ಹರೀಶ್, “ನಾವು ಇದರ ಕುರಿತು ಸಾಕಷ್ಟು ಚರ್ಚೆ ಮಾಡಿದ್ದೇವೆ. ರಾಕ್​ಲೈನ್​ ವೆಂಕಟೇಶ್ ಸೇರಿದಂತೆ ಹಲವರು ಒಟಿಟಿಯಲ್ಲಿ ಹೆಚ್ಚಿನ ಕನ್ನಡ ಸಿನಿಮಾಗಳು ಯಾಕೆ ಇಲ್ಲ? ಎಂಬುದನ್ನು ಪ್ರಶ್ನಿಸಿದ್ದೇವೆ. ಕನ್ನಡದಲ್ಲಿ ಒಟಿಟಿ ಕಂಟೆಟ್​ ಸಿನಿಮಾಗಳಿದ್ದರೂ ಕಡಗಣನೆ ಮಾಡುತ್ತಿರುವುದು ನಮಗೆ ತೀವ್ರ ಬೇಸರ ತಂದಿದೆ” ಎಂದು ಹೇಳಿದರು.

    “ಇದನ್ನು ಗಮನಿಸಿದ ಬಳಿಕ ನಾವೇ ಒಂದು ಒಟಿಟಿ ಪ್ಲ್ಯಾಟ್​​ಫಾರಂ ತೆರೆಯಲು ಯೋಜನೆ ಮಾಡಿದ್ದೀವಿ. ಆದ್ರೆ, ಕಾರಣಾಂತರಗಳಿಂದ ಅದು ಈವರೆಗೂ ಸಾಧ್ಯವಾಗಿಲ್ಲ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಆಗಮಿಸದೆ ಇರುವುದು ನಮಗೆ ಸಂಕಷ್ಟ ತಂದಿದೆ. ಈಗ ಇದೇ ಪರಿಸ್ಥಿತಿ ಒಟಿಟಿಯಲ್ಲೂ ಎದುರಾಗಿದೆ. ಸ್ಟಾರ್​ ಹೀರೋಗಳು ವರ್ಷಕ್ಕೆ 2-3 ಸಿನಿಮಾಗಳು ಮಾಡಿದರೆ ಒಳ್ಳೆಯದು. ಈ ರೀತಿ ಮಾಡಿದರೇ ಮಾತ್ರ ಕನ್ನಡ ಚಿತ್ರರಂಗ ಉಳಿಯಲು ಸಾಧ್ಯ” ಎಂದು ಹೇಳಿದರು.

    ಇದನ್ನೂ ಓದಿ: Kousalya Supraja Rama | Milana Nagaraj Thanks Director Shashank | ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಮಿಲನಾ ಪಾತ್ರದ ತುಂಬಾ ಸ್ಪೆಷಲ್​ | BENGALURU

    “ಸ್ಟಾರ್​ ನಟರ ಸಿನಿಮಾಗಳು ಸಾಲು ಸಾಲಾಗಿ ತೆರೆಯ ಮೇಲೆ ಬರಬೇಕು. ಹಾಗೆ ಮಾಡಿದರೆ ಮಾತ್ರ ನಾವು ಒಟಿಟಿಗಳಿಗೆ ಟಕ್ಕರ್​ ಕೊಡಲು ಸಾಧ್ಯ” ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ. ಹರೀಶ್ ಹೇಳಿದ್ದಾರೆ.

    ಥೇಟ್ ಪುಷ್ಪ ಸಿನಿಮಾ ಸ್ಟೈಲಲ್ಲೇ ಗಾಂಜಾ ಸರಬರಾಜು ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts