More

    ದೇವಸ್ಥಾನದ ಎದುರು ನಿಂತಿದ್ದೇನೆ, ನಾನು ಒಂದು ರೂಪಾಯಿಯನ್ನು ಮುಟ್ಟಿಲ್ಲ: ಬಿ.ವೈ. ವಿಜಯೇಂದ್ರ ಪ್ರಮಾಣ

    ಮಂಡ್ಯ: ದೇವಸ್ಥಾನದ ಎದುರು ನಿಂತು ಸುಳ್ಳು ಹೇಳಬಾರದು. ನಾನು ಒಂದು ರೂಪಾಯಿಯನ್ನು ಮುಟ್ಟಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಆಣೆ ಪ್ರಮಾಣ ಮಾಡಿದ ಪ್ರಸಂಗ ಮಂಡ್ಯದಲ್ಲಿ ಜರುಗಿತು.

    ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಗಣಿಗಾರಿಕೆ ವಿಚಾರದಲ್ಲಿ ಗ್ರಾಮಸ್ಥರಿಗೆ ವಿಜಯೇಂದ್ರ ಸ್ಪಷ್ಟನೆ ನೀಡಿದರು. ಕೆಆರ್​ಎಸ್​ಗೆ ಅಪಾಯ ಹಿನ್ನೆಲೆಯಲ್ಲಿ ಗಣಿಗಾರಿಕೆ ನಿಲ್ಲಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಆದೇಶ ನೀಡಿದ್ದು, ನಿಷೇಧಾಜ್ಞೆ ತೆರವುಗೊಳಿಸಲು 8 ರಿಂದ 10 ಕೋಟಿ ಲಂಚ ನೀಡಿರುವ ಬಗ್ಗೆ ಗಣಿ ಮಾಲೀಕರು ವಿಜಯೇಂದ್ರ ವಿರುದ್ಧ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸಾಸಲು ಗ್ರಾಮದಲ್ಲಿ ವಿಜಯೇಂದ್ರರನ್ನು ತಡೆದು ಗ್ರಾಮಸ್ಥರು ಆರೋಪದ ಬಗ್ಗೆ ಕೇಳಿದರು. ಇದನ್ನೂ ಓದಿ: ಆನ್​ಲೈನ್​ನಲ್ಲಿ ಬಿಕಿನಿ ಫೋಟೋ ಪೋಸ್ಟ್​ ಮಾಡಿದ ಬೆನ್ನಲ್ಲೇ ಹೆಣವಾದ ಸಲಿಂಗಿ ಜೋಡಿ…!

    ಇದಕ್ಕೆ ಸ್ಪಷ್ಟನೆ ನೀಡಿದ ಅವರು ನಾನು ಒಂದು ರೂಪಾಯಿಯನ್ನು ಮುಟ್ಟಿಲ್ಲ. ದೇವಸ್ಥಾನದ ಎದುರು ನಿಂತು ಸುಳ್ಳು ಹೇಳಬಾರದು ಎಂದು ಸಾಸಲು ಸೋಮೇಶ್ವರ ದೇವಾಲಯದ ಎದುರು ಪ್ರಮಾಣ ಮಾಡಿದರು.

    ಇದೇ ವೇಳೆ ಗ್ರಾಮಸ್ಥರು ನಿಷೇಧಾಜ್ಞೆ ನಡುವೆಯೂ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ದಯವಿಟ್ಟು ಅದನ್ನು ತಡೆಯಿರಿ. ಲಂಚ ಆರೋಪ ಮಾಡುವ ಮೂಲಕ ನಿಮ್ಮ ಹೆಸರಿಗೆ ಕಪ್ಪು ಚುಕ್ಕೆ ತರುತ್ತಿದ್ದಾರೆ. ನಿಮ್ಮ ಡಾಲರ್ಸ್ ಕಾಲೋನಿ ನಿವಾಸಕ್ಕೂ ಭೇಟಿ ನೀಡಿ ಅಪ್ಪಾಜಿ (ಸಿಎಂ ಬಿಎಸ್​ವೈ) ಅವರಿಗೂ ಮನವಿ ಕೊಟ್ಟಿದ್ದೆವು. ನಿಮ್ಮ ತಂದೆ ಗಣಿಗಾರಿಕೆ ನಿಲ್ಲಿಸಿದ್ದಾರೆ. ಆದರೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಮಮನವರಿಕೆ ಮಾಡಿದರು. ಇದನ್ನೂ ಓದಿ: ಮರ್ಯಾದೆ ಹತ್ಯೆ ಆಧಾರಿತ ಚಿತ್ರವನ್ನು ಬೇರೆ ರೀತಿ ಬಿಂಬಿಸಲು ಹೊರಟ ಆರ್​ಜಿವಿ ವಿರುದ್ಧ ಆಕ್ರೋಶ!

    ಪಾಂಡವಪುರ ಎಸಿ ಹಾಗೂ ಸಿಪಿಐ ಜೆಡಿಎಸ್ ಏಜೆಂಟ್ ರೀತಿ ವರ್ತನೆ ಮಾಡ್ತಿದ್ದಾರೆ ಎಂದು ಉಪ ವಿಭಾಗಾಧಿಕಾರಿ ವಿ.ಆರ್.ಶೈಲಜಾ ಹಾಗೂ ಸಿಪಿಐ ರವೀಂದ್ರ ವಿರುದ್ಧ ವಿಜಯೇಂದ್ರಗೆ ಗ್ರಾಮಸ್ಥರು ದೂರು ನೀಡಿ, ಗಣಿಗಾರಿಕೆ ತಡೆಯಲು ಮನವಿ ಮಾಡಿದರು. (ದಿಗ್ವಿಜಯ ನ್ಯೂಸ್​)

    ಯೋಗ ಮಾಡಿದ ಮಾಜಿ ಕ್ರಿಕೆಟರ್​ ಮೊಹಮ್ಮದ್​ ಕೈಫ್​ ವಿರುದ್ಧ ಕೆಟ್ಟ ಟೀಕೆ, ವ್ಯಂಗ್ಯದ ಮಾತುಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts