More

    ಎಸ್‌ಎಸ್‌ಎಲ್‌ಸಿ ಗುರಿ ನಿಗದಿ ಮಾಡಿದ ಡಿಸಿ

    ಶಿವಮೊಗ್ಗ: ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 26ನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ಬಾರಿ ಅತ್ಯುತ್ತಮ ಫಲಿತಾಂಶ ಪಡೆಯುವ ಐದು ಅಗ್ರ ಜಿಲ್ಲೆಗಳಲ್ಲಿ ಒಂದಾಗಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗುರಿ ನಿಗದಿಪಡಿಸಿದ್ದಾರೆ.
    ಪರೀಕ್ಷೆ ಜತೆಯಲ್ಲೇ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ಶಿಕ್ಷಕರು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಈಗಿನಿಂದಲೇ ಶಿಕ್ಷಕರು ಪರೀಕ್ಷೆ ದೃಷ್ಟಿಯಿಂದ ಮಕ್ಕಳನ್ನು ಸರಿಯಾಗಿ ಸಜ್ಜುಗೊಳಿಸಬೇಕು. ಅದಕ್ಕಾಗಿ ಸೂಕ್ತ ಯೋಜನೆ ರೂಪಿಸಬೇಕೆಂದು ತಿಳಿಸಿದರು.
    ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತು ಗುರುವಾರ ಏರ್ಪಡಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಳ ಅಭ್ಯಾಸ ಹೆಚ್ಚಿಸಬೇಕು. ಬೋಧನೆಯಲ್ಲಿ ನೂತನ ಪದ್ದತಿ ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕೆಂದರು.
    ಮುಖ್ಯ ಶಿಕ್ಷಕರು ಉಳಿದ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರೊಂದಿಗೆ ಸಮಾಲೋಚನೆ ನಡೆಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಉತ್ಸಾಹ ಹೆಚ್ಚಿಸಬೇಕು. ಕಾರ್ಯಸೂಚಿಗಳನ್ನು ಸಿದ್ಧಪಡಿಸಿಕೊಂಡು ಅದನ್ನು ಅನುಸರಿಸಬೇಕು. ಪ್ರತಿ ವಿದ್ಯಾರ್ಥಿಗಳ ಕಲಿಕೆಯ ಕುರಿತು ಶಿಕ್ಷಕರು ಮಾಹಿತಿ ಹೊಂದಿರಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡು ಕಲಿಕೆಯಲ್ಲಿನ ಸುಧಾರಣೆಯನ್ನು ಗಮನಿಸಬೇಕು. ಪಾಲಕರೊಂದಿಗೂ ಚರ್ಚಿಸಬೇಕೆಂದು ಹೇಳಿದರು.
    ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಡಯಟ್ ಪ್ರಾಚಾರ್ಯ ಬಸವರಾಜಪ್ಪ, ಚಿತ್ರದುರ್ಗ ಸಿಟಿಇ ಪ್ರಾಚಾರ್ಯ ಮಂಜುನಾಥ್, ಪ್ರಮುಖರಾದ ಲೋಕೇಶಪ್ಪ, ಉಮೇಶ್, ರಾಮಪ್ಪ ಗೌಡ ಮುಂತಾದವರು ಉಪಸ್ಥಿತರಿದ್ದರು. ಉಡುಪಿ ಡಯಟ್‌ನ ಹಿರಿಯ ಉಪನ್ಯಾಸಕ ಅಶೋಕ ಕಾಮತ್ ಶಾಲಾ ನಾಯಕತ್ವ ಮತ್ತು ಫಲಿತಾಂಶ ಸುಧಾರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts