More

    ಗಾರೆ ಕೆಲಸ ಮಾಡುತ್ತ ಗುಡಿಸಲಿನಲ್ಲೇ ಓದಿ ಶೇ.98.5 ಫಲಿತಾಂಶ ಪಡೆದ ಮಹೇಶ!

    ಬೆಂಗಳೂರು: ಗಾರೆ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮಾಡುತ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.5 ಫಲಿತಾಂಶ ಪಡೆದ ಮಹೇಶನ ಮನೆಗೆ ಖುದ್ದು ಶಿಕ್ಷಣ ಸಚಿವರೇ ಭೇಟಿ ನೀಡಿ ಅಭಿನಂದಿಸಿದರು.

    ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಮಹೇಶನಿಗೆ ತಾಯಿಯೇ ಸರ್ವಸ್ವ. ಆತನ ತಾಯಿ ಬದುಕಿನ ಬಂಡಿ ಸಾಗಿಸಲು ಪುಟ್ಟ ಕಂದ(ಮಹೇಶ)ನನ್ನು ಎತ್ತಿಕೊಂಡು ಯಾದಗಿರಿಯಿಂದ ಬೆಂಗಳೂರಿಗೆ ಸುಮಾರು 10 ವರ್ಷಗಳ ಹಿಂದೆಯೇ ಗುಳೆ ಬಂದರು. ಜೀವನಭೀಮಾನಗರದ ಗುಡಿಸಲಿನಲ್ಲಿ ವಾಸವಿದ್ದಾರೆ. ಇಲ್ಲಿನ ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ಓದುತ್ತಿದ್ದ ಮಹೇಶ್​, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 616 ಅಂಕ ಪಡೆಯುವ ಮೂಲಕ ಓದಿಗೆ ಛಲ ಇದ್ದರೆ ಬಡತನ ಅಡ್ಡಿ ಅಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ. ಮಹೇಶನ ತಾಯಿ ಮಲ್ಲವ್ವ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅಮ್ಮನಿಗೆ ನೆರವಾಗಲು ಮಹೇಶ ಗಾರೆ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮುಂದುವರಿಸಿದ್ದಾನೆ.

    ಇದನ್ನೂ ಓದಿರಿ ಕೋಚಿಂಗ್​ ಕ್ಲಾಸ್​ಗೆ ಹೋಗಿಲ್ಲ, ನಿದ್ರೆಗೆಟ್ಟು ಓದಿಲ್ಲ… ಇದು ಎಸ್ಸೆಸ್ಸೆಲ್ಸಿ ಟಾಪರ್​ ಅನುಷ್​ರ ಯಶಸ್ಸಿನ ಗುಟ್ಟು

    ಕಡುಬಡತನದಲ್ಲೂ ಕೂಲಿ ಕೆಲಸ ಮಾಡಿಕೊಂಡೇ ಓದುತ್ತಿರುವ ಮಹೇಶನನ್ನು ಭೇಟಿ ಮಾಡಲು ಅವರ ಗುಡಿಸಲಿಗೆ ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ಬಂದಿದ್ದರು. ಅವನ ಮನೆಯೆಂದು ಕರೆಯಬಹುದಾದ ಪುಟ್ಟ ಗುಡಿಸಲಿನ ಒಳಗೆ ಕೆಲ ಸಮಯ ಕುಳಿತ ಸಚಿವರು, ಮಹೇಶ ಮತ್ತು ಆತನ ತಾಯಿ ಜತೆ ಚರ್ಚಿಸಿದರು. ಅವನ ಮನೆ, ಕುಟುಂಬ, ತಾಯಿಯ ಮುಗ್ಧತೆ, ಮಹೇಶನ ಸಾಧನೆ ಎಲ್ಲವನ್ನೂ ಕಂಡ ಸಚಿವರು ಭಾವುಕರಾದರು. ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿದರು.

    ಗಾರೆ ಕೆಲಸ ಮಾಡುತ್ತ ಗುಡಿಸಲಿನಲ್ಲೇ ಓದಿ ಶೇ.98.5 ಫಲಿತಾಂಶ ಪಡೆದ ಮಹೇಶ!ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಹೇಶ ಗುಡಿಸಲಿನಲ್ಲೇ ಓದಿ ಹೆಚ್ಚಿನ ಅಂಕಗಳಿಸಿದ್ದಾನೆ. ಮಹೇಶನಿಗೆ ಶಿಕ್ಷಣ ಇಲಾಖೆ ಪರವಾಗಿ ಅಭಿನಂದಿಸಿದ್ದೇನೆ. ಇವನಿಗೆ ಪಿಯುನಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳಬೇಕೆಂಬ ಮಹಾದಾಸೆ ಇದೆ. ಪಿಯುನಲ್ಲೂ ಹೆಚ್ಚಿನ ಅಂಕಗಳಿಸಲಿ ಎಂದು ಹಾರೈಸಿದ್ದೇನೆ ಎಂದರು.

    ಸಚಿವರ ಭೇಟಿ ಕುರಿತು ಮಾತನಾಡಿದ ಮಹೇಶ, ‘ಮಿನಿಸ್ಟರ್​ ಬಂದು ಸನ್ಮಾನ ಮಾಡುತ್ತಾರೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಬಹಳ ಖುಷಿ ಆಗುತ್ತಿದೆ. ನಾನು 5 ವರ್ಷದ ಮಗು ಆಗಿದ್ದಾಗಲೇ ನನ್ನ ತಂದೆ ಮೃತಪಟ್ಟರು. ಜೀವನ ಸಾಗಿಸುವುದಕ್ಕಾಗಿ ನನ್ನ ತಾಯಿ ಬೆಂಗಳೂರಿಗೆ ಬಂದರು. ನಾನು 4ನೇ ತರಗತಿಯಿಂದ ಇದೇ ಕೆಪಿಎಸ್​ ಶಾಲೆಯಲ್ಲೇ ವ್ಯಾಸಂಗ ಮಾಡುತ್ತಿದ್ದೇನೆ. ಶಿಕ್ಷಕರು ಉತ್ತಮವಾಗಿ ಬೋಧನೆ ಮಾಡುತ್ತಾರೆ. ಮುಂದೆ ಪಿಯು ವಿಜ್ಞಾನ ಓದು ಆಸೆ ಇದೆ. ಆನಂತರ ಏನು ಮಾಡಬೇಕೆಂದು ಇನ್ನೂ ಆಲೋಚಿಸಿಲ್ಲ’ ಎಂದು ಹೇಳಿದ.

    ಇವರೇ ಎಸ್​ಎಸ್​ಎಲ್​ಸಿ ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts