ಸಿನಿಮಾ

ಎಸ್ಸೆಸ್ಸೆಲ್ಸಿಯಲ್ಲಿ ಅರಕೇರಾದ ಎರಡು ಶಾಲೆಗಳಿಗೆ ಶೇ.100 ರಿಸಲ್ಟ್

ಅರಕೇರಾ: ಪಟ್ಟಣದ ಆದರ್ಶ ವಿದ್ಯಾಲಯ ಹಾಗೂ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶೇ.100 ಹಾಗೂ ಶ್ರೀ ಸಿದ್ದಯ್ಯ ಹವಾಲ್ದಾರ್ ಸರ್ಕಾರಿ ಪ್ರೌಢಶಾಲೆಗೆ ಶೇ.92 ಫಲಿತಾಂಶ ದೊರೆತಿದೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಬೆನ್ನಲ್ಲೇ ಪೂರಕ ಪರೀಕ್ಷೆ ದಿನಾಂಕವೂ ಬಂತು: ಯಾರೆಲ್ಲಾ ಪರೀಕ್ಷೆ ಬರೆಯಬಹುದು? ಇಲ್ಲಿದೆ ಡಿಟೇಲ್ಸ್‌

ಸರ್ಕಾರಿ ಆದರ್ಶ ವಿದ್ಯಾಲಯದಿಂದ ಪರೀಕ್ಷೆಗೆ ಹಾಜರಾದ 54 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ. ಮಲ್ಲಿಕಾರ್ಜುನ ಬಸವರಾಜ ಶೇ.93.92 (587) ಅಂಕ ಗಳಿಸುವ ಮೂಲಕ ಅರಕೇರಾ ವಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಆದಿತ್ಯ ಅರ್ಜುನ ಬಿರಾದಾರ್ ಶೇ.92.96 (581), ಸೃಷ್ಟಿ ಸೂಗೂರೇಶ ಶೇ.92.16 (576) ಅಂಕಗಳನ್ನು ಗಳಿಸಿದ್ದಾರೆ. 54 ವಿದ್ಯಾರ್ಥಿಗಳ ಪೈಕಿ 7 ಡಿಸ್ಟಿಂಕ್ಷನ್, 42 ಪ್ರಥಮ, ಐವರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆಂದು ಮುಖ್ಯಶಿಕ್ಷಕ ಕುಮಾರಸ್ವಾಮಿ ಹಿರೇಮಠ ತಿಳಿಸಿದ್ದಾರೆ.

ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10 ಡಿಸ್ಟಿಂಕ್ಷನ್, 77 ಪ್ರಥಮ, 10 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪದ್ಮಾವತಿ ಶಿವರಾಜು ಶೇ.91.36 (571), ಅಲ್ಫಿಯಾ ಮೈನುದ್ದೀನ್, ಶೇ.91.36 (571), ಬೀಬಿ ಅಮೀನಾ ಅಬ್ದುಲ್ ಅಜೀಜ್ ಶೇ.89.44 (559), ಚನ್ನಬಸಮ್ಮ ರಂಗಪ್ಪ ಶೇ.88.48 (553) ಅಂಕಗಳನ್ನು ಗಳಿಸಿದ್ದಾರೆಂದು ಮುಖ್ಯ ಶಿಕ್ಷಕ ಹನುಮಂತ್ರಾಯ ಶಾಖೆ ತಿಳಿಸಿದ್ದಾರೆ.

ಶ್ರೀ ಸಿದ್ದಯ್ಯ ಹವಾಲ್ದಾರ್ ಸರ್ಕಾರಿ ಬಾಲಕರ ಪ್ರೌಢಶಾಲೆಯ 82 ವಿದ್ಯಾರ್ಥಿಗಳ ಪೈಕಿ 76 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.92.62 ಫಲಿತಾಂಶ ದೊರೆತಿದೆ. ಪ್ರಭುದೇವ ಜಗದೀಶ ನಾಗೋಲಿ ಶೇ.92.32 (577), ಶಿವಶಂಕರ ಗಂಗಪ್ಪ ಶೇ.88.8 (555), ಮಹಾಂತೇಶ ಹುಲಿಗೆಪ್ಪ ಶೇ.88.8 (555) ಅಂಕಗಳನ್ನು ಪಡೆದಿದ್ದಾರೆಂದು ಮುಖ್ಯ ಶಿಕ್ಷಕ ಜಗದೀಶ ಬಿ.ಗಣೇಕಲ್ ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್