More

    ‘ಅಸ್ಸಾಂ ಮೂಲತಃ ಮ್ಯಾನ್ಮಾರ್‌ನ ಭಾಗವಾಗಿತ್ತು’: ಸುಪ್ರೀಂ ಕೋರ್ಟ್‌ನಲ್ಲಿ ಕಪಿಲ್ ಸಿಬಲ್ ಅಭಿಮತ

    ssam was originally part of Myanmar: Kapil Sibal in Supreme Court
    ನವದೆಹಲಿ: ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ 1971 ಮಾರ್ಚ್ 25ರ ನಂತರ ವಲಸಿಗರ ಅಕ್ರಮ ಪ್ರವೇಶದ ಬಗ್ಗೆ ವಿವರವಾದ ದತ್ತಾಂಶವನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ನಿರ್ದೇಶನವು ವಿವಾದಾತ್ಮಕ ಸೆಕ್ಷನ್ 6ಎ ಗೆ ಸಂಬಂಧಿಸಿದ ಸಮಗ್ರ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿದೆ.

    ಇದನ್ನೂ ಓದಿ: ಜಪಾನ್‌ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ವರವಾಯ್ತು ‘ಸಗಣಿ’?: ಇದೇ ಮೊದಲಬಾರಿಗೆ ರಾಕೆಟ್ ಇಂಜಿನ್​ಗೆ ‘ಬಯೋಗ್ಯಾಸ್’ ಬಳಕೆ!
    ಡಿ.5 ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠವು 1955 ರ ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಯ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳನ್ನು ಪರಿಹರಿಸಲು ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.

    ಅಸ್ಸಾಂ ಒಪ್ಪಂದವು 1966 ಜ.1 ಮತ್ತು 1971 ಮಾ.25ರ ನಡುವೆ ವಲಸೆ ಬಂದಿರುವ ವಿದೇಶೀಯರಿಗೆ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತದೆ. ವಿಚಾರಣೆ ವೇಳೆ ವಕೀಲ ಕಪಿಲ್ ಸಿಬಲ್ ಪ್ರತಿವಾದಿಗಳ ಪರ ವಾದ ಮಂಡಿಸಿ, “ವಲಸೆಯು ಜನಸಂಖ್ಯೆ ಮತ್ತು ಇತಿಹಾಸದಲ್ಲಿ ಹುದುಗಿದೆ. ಇದನ್ನು ಮ್ಯಾಪ್ ಮಾಡಲು ಸಾಧ್ಯವಿಲ್ಲ. ಈ ರಾಜ್ಯಕ್ಕೆ ಯಾರು ಯಾವಾಗ ಬಂದರು ಎಂದು ಕಂಡುಹಿಡಿಯುವುದು ಕಷ್ಟ” ಎಂದು ಹೇಳಿದರು.

    ಬ್ರಿಟಿಷರ ಆಳ್ವಿಕೆಯಲ್ಲಿ ಅಸ್ಸಾಂ ಮ್ಯಾನ್ಮಾರ್‌ನ ಭಾಗವಾಗಿತ್ತು. ನಂತರ ಪೂರ್ವ ಬಂಗಾಳದೊಂದಿಗೆ ಒಡನಾಟ ಹೊಂದಿತ್ತು. 1824 ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು. ನೀವು ಯಾವ ರೀತಿಯ ವಲಸೆಯನ್ನು ಊಹಿಸುತ್ತೀರಿ? ಆಗಿನ ಬ್ರಿಟಿಷ್ ಸಾಮ್ರಾಜ್ಯದ ಸಂದರ್ಭದಲ್ಲಿ ಇದೆಲ್ಲ ನಡೆದಿದೆ ಎಂದು ಅವರು ಹೇಳಿದರು.

    ಸಂವಿಧಾನ ಪೀಠವು ಸೆಕ್ಷನ್ 6 ಎ ಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿದೆ. ಪರಿಶೀಲನೆಯು ಅಸ್ಸಾಂನ ಸಾಮಾಜಿಕ, ರಾಜಕೀಯ ಭೂದೃಶ್ಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದಾಗಿದೆ.

    ತನ್ನ ನಿಲುವನ್ನು ಮತ್ತಷ್ಟು ರುಜುವಾತುಪಡಿಸಲು, ವಿಭಜನೆಯ ಸಮಯದಲ್ಲಿ ತನ್ನ ಕುಟುಂಬದ ಸ್ಥಳಾಂತರದ ಕುರಿತಾದ ವೈಯಕ್ತಿಕ ಅನುಭವವನ್ನು ಸಿಬಲ್ ಹಚಿಕೊಂಡರು. ಬಂಗಾಳಿ ಜನರು ಸೇರಿ ಎಲ್ಲ ಸಮುದಾಯದವರ ಹಕ್ಕುಗಳನ್ನು ಕಾಪಾಡಬೇಕು. ಕೆಲವು ಚಳುವಳಿಗಳು ಅಸ್ಸಾಂನ ಸಾಂಸ್ಕೃತಿಕ ಸಾರಕ್ಕೆ ಅಡ್ಡಿಪಡಿಸಿವೆ ಎಂದು ಪ್ರತಿಪಾದಿಸಿದರು.

    ಬೆಲೆ ನಿಯಂತ್ರಣಕ್ಕೆ ಕೇಂದ್ರ ಮಹತ್ವದ ನಿರ್ಧಾರ:ಈರುಳ್ಳಿ ರಪ್ತು ಮೇಲಿನ ನಿರ್ಬಂಧ ವಿಸ್ತರಣೆ – ಬೇಳೆಕಾಳು ಆಮದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts