More

    ಶಾರುಖ್​ ಖಾನ್​ ಚಿತ್ರವೊಂದು ಹಿಟ್​ ಆಗಿ ಎಷ್ಟು ಸಮಯ ಆಯ್ತು ಗೊತ್ತಾ?

    ಮುಂಬೈ: ಬಾಲಿವುಡ್​ನ ಸ್ಟಾರ್​ನಟರ ಪೈಕಿ ಶಾರುಖ್​ ಖಾನ್ ಒಂದು ಕಾಲದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತು. ಅವರು ಅಭಿನಯಿಸುತ್ತಿದ್ದ ಚಿತ್ರಗಳೆಲ್ಲವೂ ಹಿಟ್​ ಆಗುತ್ತಿತ್ತು. ಆದರೆ, ಸಮಯ ಒಂದೇ ತರಹ ಇರಲ್ಲ ನೋಡಿ. ಗೆಲುವಿನ ಜತೆಗೆ ಸೋಲನ್ನು ಸಹ ನೋಡಬೇಕು. ಹೀಗೆ ಸಾಕಷ್ಟು ಸೋಲನ್ನು ಕಂಡಿರುವ ಶಾರುಖ್​ ಒಂದು ಯಶಸ್ಸನ್ನು ನೋಡಿ ಎಷ್ಟು ದಿನವಾಯಿತು ಗೊತ್ತಾ?

    ಇದನ್ನೂ ಓದಿ: ಪತ್ತೇದಾರಿಯಾದ ವಿಜಯ್​ ದೇವರಕೊಂಡ; ವಿ12 ಚಿತ್ರದ ಪೋಸ್ಟರ್​ ಬಿಡುಗಡೆ

    ಶಾರುಖ್​ ಖಾನ್​ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿರುವ ಚಿತ್ರವೊಂದು ಬಿಡುಗಡೆಯಾಗಿಯೇ 1700 ದಿನಗಳು ಕಳೆದಿವೆಯಂತೆ. ಅಂದರೆ, ನಾಲ್ಕೂವರೆ ವರ್ಷಗಳ ಹಿಂದೆ ಅವರ ಅಭಿನಯದ ‘ಜೀರೋ’ ಬಿಡುಗಡೆಯಾಗಿತ್ತು. ಬಾಕ್ಸ್​ ಆಫೀಸ್​ ಕಲೆಕ್ಷನ್​ ವಿಚಾರದಲ್ಲೂ ಜೀರೋ ಆಯಿತು. ಅದಾದ ಮೇಲೆಯೇ ಶಾರುಖ್​ ತಮ್ಮ ವೃತ್ತಿಯ ಬಗ್ಗೆ ಗಂಭೀರವಾಗಿ ಯೋಚಿಸುವುದಕ್ಕೆ ಶುರು ಮಾಡಿದ್ದು. ಒಂದು ಗ್ಯಾಪ್​ ತೆಗೆದುಕೊಂಡು ತಮ್ಮ ವೃತ್ತಿಜೀವನದ ಬಗ್ಗೆ ಅವಲೋಕನ ಮಾಡಿಕೊಂಡು ಪುನಃ ಬಣ್ಣ ಹಚ್ಚುವುದಕ್ಕೆ ಮುಂದಾಗಿದ್ದು.

    ಹಾಗೆ ನೋಡಿದರೆ, ‘ಜೀರೋ’ ಚಿತ್ರ ಒಂದು ನೆಪ ಅಷ್ಟೇ. ಶಾರುಖ್​ ಗೆಲುವೊಂದನ್ನು ನೋಡದೆ 3015 ದಿನಗಳಾವಿಯಂತೆ. ವರ್ಷಗಳ ಲೆಕ್ಕ ಹಾಕುವುದಾದರೆ, ಎಂಟು ವರ್ಷಗಳಾಗುತ್ತವೆ. ಶಾರುಖ್​ ಎಂಟು ವರ್ಷಗಳಿಂದ ಒಂದೇ ಒಂದು ಯಶಸ್ಸನ್ನೂ ನೋಡಿಲ್ಲ. ಅವರ ಕೊನೆಯ ಹಿಟ್​ ಚಿತ್ರ ಎಂದರೆ, ಅದು ಫರ್ಹಾ ಖಾನ್​ ಅಭಿನಯದ ‘ಹ್ಯಾಪಿ ನ್ಯೂ ಇಯರ್​’. ಶಾರುಖ್​, ಅಭಿಷೇಕ್​ ಬಚ್ಚನ್​, ಸೋನು ಸೂದ್​ ಅಭಿನಯದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ದುಡ್ಡು ಮಾಡಿತ್ತು. ಆ ನಂತರ ಶಾರುಖ್​​ ನಟಿಸಿದ ಯಾವ ಚಿತ್ರವೂ ಗೆದ್ದಿಲ್ಲ.

    ಇದನ್ನೂ ಓದಿ: ತುಳುವಿಗೂ ಎಂಟ್ರಿ ಕೊಟ್ಟ ಮಂಗ್ಲಿ … ‘ಬಿರ್ದ್‌ದ ಕಂಬಳ’ ಚಿತ್ರಕ್ಕೆ ಗಾಯನ

    ಈಗ ಶಾರುಖ್​ ಅಭಿನಯದ ‘ಪಠಾಣ್​’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವು ತನ್ನ ವೃತ್ತಿಜೀವನವನ್ನು ರಿವೈವ್​ ಮಾಡುತ್ತಾರೆ ಎಂಬ ನಂಬಿಕೆಯಲ್ಲಿ ಕಿಂಗ್​ ಖಾನ್​ ಇದ್ದಾರೆ. ಇದೊಂದು ಔಟ್​​ ಅಂಡ್​ ಔಟ್​ ಕಮರ್ಷಿಯಲ್​ ಚಿತ್ರವಾಗಿದ್ದು, ಶಾರುಖ್​ ಇದರಲ್ಲಿ ಸ್ಪೈ ಆಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ, ಡಿಂಪಲ್​ ಕಪಾಡಿಯಾ ಮುಂತಾದವರು ಅಭಿನಯಿಸಿರುವ ಈ ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶಿಸಿದ್ದಾರೆ.

    ರಾಖಿ ಸಾವಂತ್ ಜತೆಗಿನ ಮದುವೆ ಫೇಕಾ..? ನಿಜವಾ..?; ಆದಿಲ್ ಹೇಳೋದೇನು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts