More

    ರಣಜಿಗೆ ಶ್ರೀಶಾಂತ್ ವಾಪಸ್?: 7 ವರ್ಷಗಳ ನಿಷೇಧ ಸೆಪ್ಟೆಂಬರ್​ನಲ್ಲಿ ಅಂತ್ಯ

    ಚೆನ್ನೈ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷ ನಿಷೇಧಕ್ಕೊಳಗಾಗಿರುವ ವೇಗಿ ಎಸ್. ಶ್ರೀಶಾಂತ್ ಇನ್ನೆರಡು ತಿಂಗಳಲ್ಲಿ ನಿಷೇಧದಿಂದ ಮುಕ್ತರಾಗಲಿದ್ದು, ಮರಳಿ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಪ್ರಕರಣದಲ್ಲಿ ಮೊದಲಿಗೆ ಶ್ರೀಶಾಂತ್​ಗೆ ಆಜೀವ ನಿಷೇಧ ಹೇರಲಾಗಿತ್ತು. ಬಳಿಕ ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಶಿಕ್ಷೆಯ ಪ್ರಮಾಣವನ್ನು 7 ವರ್ಷಗಳಿಗೆ ಇಳಿಸಿಕೊಂಡಿದ್ದರು. ಈ ನಿಷೇಧ ಮುಂದಿನ ಸೆಪ್ಟೆಂಬರ್​ನಲ್ಲಿ ಅಂತ್ಯಗೊಳ್ಳಲಿದೆ. ಹೀಗಾಗಿ ಅವರು ಮುಂಬರುವ ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡಲು ಬಯಸಿದ್ದಾರೆ.

    ‘ಅಭ್ಯಾಸ ಮುಂದುವರಿಸಿದ್ದೇನೆ. ಕೇರಳ ಕ್ರಿಕೆಟ್ ವಲಯ ನಾನು ವಾಪಸ್ ಬರುವುದನ್ನೇ ಕಾಯುತ್ತಿದೆ. ಸೆಪ್ಟೆಂಬರ್​ನಲ್ಲಿ ಬಿಸಿಸಿಐನಿಂದ ಅಧಿಕೃತ ಆದೇಶ ಬರಲಿದೆ. 7 ವರ್ಷ ಕ್ರಿಕೆಟ್ ತಪ್ಪಿಸಿಕೊಂಡಿದ್ದೇನೆ. ಕ್ರಿಕೆಟ್ ನನ್ನನ್ನು ಸಾಕಷ್ಟು ಬದಲಾಯಿಸಿದೆ. ದೇಶ ಪ್ರತಿನಿಧಿಸಿದ್ದ ದಿನಗಳು ಸೇರಿದಂತೆ ಕ್ರಿಕೆಟ್ ಆಡಿದ ದಿನಗಳು ನನ್ನಲ್ಲಿ ಇನ್ನು ಹಚ್ಚ ಹಸಿರಾಗಿವೆ’ ಎಂದು 37 ವರ್ಷದ ಶ್ರೀಶಾಂತ್ ಹೇಳಿದ್ದಾರೆ.

    ಇದನ್ನೂ ಓದಿ: ಡ್ರ್ಯಾಗನ್​ ಮೇಲೆ ಶ್ರೀರಾಮಚಂದ್ರ ದಾಳಿ ನಡೆಸಿದ ಚಿತ್ರ ಹಾಂಕಾಂಗ್​​ನಲ್ಲಿ ವೈರಲ್​, ತೈವಾನ್​ ನ್ಯೂಸ್​ ಪೋರ್ಟಲ್​ನಲ್ಲಿ ಫೋಟೋ ಆಫ್​ ದ ಡೇ!

    ಫಿಟ್ನೆಸ್ ಸಾಬೀತು ಪಡಿಸಿದರೆ ಶ್ರೀಶಾಂತ್​ಗೆ ಖಂಡಿತವಾಗಿಯೂ ಅವಕಾಶವಿದೆ ಎಂದು ಕೇರಳ ತಂಡದ ಕೋಚ್ ಟಿನು ಯೊಹಾನನ್ ತಿಳಿಸಿದ್ದಾರೆ.

    ವಿಷ ಕನ್ಯೆ| ಆಕೆಯ ತುಟಿಗೆ ಕಿಸ್​ ಕೊಟ್ಟ ವ್ಯಕ್ತಿಯ ಬದುಕೇ ಬದಲಾಗಿಬಿಟ್ಟಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts