More

    ಲೈಂಗಿಕ ದೌರ್ಜನ್ಯ ತಡೆಗೆ ನಿಯಮಾವಳಿ, ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚೆ

    ನವದೆಹಲಿ: ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ ಸೆಪ್ಟೆಂಬರ್ 20ರಂದು ನಿಗದಿಯಾಗಿದ್ದು, ಮಂಡಳಿಯ ಲೈಂಗಿಕ ದೌರ್ಜನ್ಯ ತಡೆ ನಿಯಮಾವಳಿ ಬದಲಾವಣೆ ಮತ್ತು ಕರೊನಾ ಹಾವಳಿಯಿಂದ ಸಂಕಷ್ಟದಲ್ಲಿರುವ ದೇಶೀಯ ಕ್ರಿಕೆಟಿಗರಿಗೆ ಪರಿಹಾರ ನೀಡುವ ಕುರಿತು ಮಹತ್ವದ ಚರ್ಚೆ ನಡೆಯಲಿದೆ.

    ಲೈಂಗಿಕ ದೌರ್ಜನ್ಯ ದೂರುಗಳನ್ನು ನಿರ್ವಹಿಸುವ ಬಗ್ಗೆ ಬಿಸಿಸಿಐ ಇದುವರೆಗೆ ಯಾವುದೇ ನಿರ್ದಿಷ್ಟ ನಿಯಮಾವಳಿಯನ್ನು ಹೊಂದಿಲ್ಲ. ಈ ಮುನ್ನ ಮಂಡಳಿಯ ಸಿಇಒ ರಾಹುಲ್ ಜೋಹ್ರಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಾಗ ಆಂತರಿಕ ಸಮಿತಿಯೊಂದನ್ನು ರಚಿಸಲಾಗಿತ್ತು. ಹೀಗಾಗಿ ಈ ಬಗ್ಗೆ ನಿಖರವಾದ ನಿಯಮಾವಳಿಯನ್ನು ಹೊಂದುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

    ಜೂನ್ 20ರಂದು ನಡೆದ ಕೊನೆಯ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲೂ ದೇಶೀಯ ಕ್ರಿಕೆಟಿಗರಿಗೆ ಪರಿಹಾರ ನೀಡುವ ಕುರಿತು ಚರ್ಚೆ ನಡೆದಿದ್ದರೂ, ಸ್ಪಷ್ಟ ನಿರ್ಧಾರ ಹೊರಬಿದ್ದಿರಲಿಲ್ಲ. 2020-21ರ ಸಅಲಿನಲ್ಲಿ ರಣಜಿ ಟ್ರೋಫಿ ನಡೆಯದ ಕಾರಣ ದೇಶೀಯ ಕ್ರಿಕೆಟಿಗರು ಆರ್ಥಿಕ ತೊಂದರೆ ಎದುರಿಸಿದ್ದರು.

    ದೇಶೀಯ ಕ್ರಿಕೆಟಿಗರಿಗೆ ಪರಿಹಾರ ನೀಡುವ ಕುರಿತು ನಿಖರ ರೂಪುರೇಷೆ ರೂಪಿಸಲು ಮಂಡಳಿ ಸಮಿತಿಯೊಂದನ್ನು ರಚಿಸಿದೆ. ಆದರೆ ಆ ಸಮಿತಿ ಇನ್ನೂ ಸಭೆ ಸೇರಿಲ್ಲ. ಅಪೆಕ್ಸ್ ಕೌನ್ಸಿಲ್ ಸಭೆಗೆ ಮುನ್ನವಾದರೂ ಈ ಸಮಿತಿ ಸಭೆ ಸೇರಿ ಮಂಡಳಿಗೆ ಶಿಾರಸು ಸಲ್ಲಿಸುವ ಸಾಧ್ಯತೆ ಇದೆ. ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಪೂರ್ಣ ಪ್ರಮಾಣದಲ್ಲಿ ಪಂದ್ಯಗಳು ನಡೆಯದ ಕಾರಣ, ಮಹಿಳಾ ಕ್ರಿಕೆಟಿಗರಿಗೂ ಪರಿಹಾರ ನೀಡುವ ಬಗ್ಗೆ ಪರಿಶೀಲನೆ ನಡೆಯುವ ನಿರೀಕ್ಷೆ ಇದೆ.

    ಅಪೆಕ್ಸ್ ಕೌನ್ಸಿಲ್ ಸಭೆ ಈ ಬಾರಿಯೂ ವರ್ಚುವಲ್ ಮೂಲಕವೇ ನಡೆಯಲಿದೆ. ಸೆಪ್ಟೆಂಬರ್ 19ರಂದು ಪುನರಾರಂಭಗೊಳ್ಳಲಿರುವ ಐಪಿಎಲ್ 14ನೇ ಆವೃತ್ತಿಯ ಹಿನ್ನೆಲೆಯಲ್ಲಿ ಬಿಸಿಸಿಐನ ಹೆಚ್ಚಿನ ಅಧಿಕಾರಿಗಳು ಆ ಸಮಯದಲ್ಲಿ ಯುಎಇಯಲ್ಲೇ ಇರಲಿದ್ದಾರೆ.

    ಬಿಸಿಸಿಐ ಆತಿಥ್ಯದಲ್ಲೇ ಯುಎಇ-ಓಮನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸಿದ್ಧತೆ ಮತ್ತು 2021-22ರ ದೇಶೀಯ ಕ್ರಿಕೆಟ್ ಋತುವಿನ ಬಗ್ಗೆಯೂ ಚರ್ಚೆ ನಡೆಯಲಿದೆ. ಅಕ್ಟೋಬರ್ 27ರಿಂದ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯೊಂದಿಗೆ ದೇಶೀಯ ಕ್ರಿಕೆಟ್ ಋತು ಆರಂಭಗೊಳ್ಳಲಿದೆ.

    ಕ್ರಿಕೆಟಿಗ ಶಿಖರ್ ಧವನ್ ದಾಂಪತ್ಯದಲ್ಲಿ ಬಿರುಕು, ಪತ್ನಿ ಆಯೇಷಾಗೆ ವಿಚ್ಛೇದನ

    ಕಹಳೆ ಊದುತ್ತ ಓವಲ್ ಗೆಲುವನ್ನು ಸಂಭ್ರಮಿಸಿದ ಕೊಹ್ಲಿ! ಇದರ ಅರ್ಥವೇನೆಂದು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts