More

    ಐತಿಹಾಸಿಕ ಪಾರಂಪರಿಕ ದಸರಾ ಆಚರಣೆಯಲ್ಲಿ ಲೋಪವಾಗದಿರಲಿ: ಡಿಸಿ ಎಸ್.ಅಶ್ವಥಿ ಸೂಚನೆ

    ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀರಂಗಪಟ್ಟಣದ ಪಾರಂಪರಿಕ ದಸರಾ ಆಚರಣೆಗೆ ಯಾವುದೇ ಲೋಪ ಉಂಟಾಗದಂತೆ ಸಿದ್ದತೆಯನ್ನು ಕೈಗೊಳ್ಳಬೇಕಿದ್ದು, ಸಣ್ಣ ಸಮಸ್ಯೆಗಳನ್ನು ಗುರುತಿಸಿ ಮುಂಜಾಗ್ರತೆ ವಹಿಸಿ ವೈಭವದಿಂದ ಯಶಸ್ವಿಗೊಳಿಸಲು ಎಲ್ಲರು ಸಹಕರಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ತಿಳಿಸಿದರು.
    ತಾಲೂಕಿನ ಮೈಸೂರು-ಬೆಂಗಳೂರು ಹೆದ್ದಾರಿಯ ಕಿರಂಗೂರು ವೃತ್ತದಲ್ಲಿನ ದಸರಾ ಬನ್ನಿಮಂಟಪದ ಸ್ಥಳಕ್ಕೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರೊಂದಿಗೆ ಪರಿಶೀಲಿಸಿ ಮಾತನಾಡಿದರು.
    ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಆಚರಣೆಗೆ ಮೂರು ಆನೆಗಳು ಆಗಮಿಸುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಜಾಗರೂಕತೆ ವಹಿಸಬೇಕಿದೆ. ನಾಡದೇವತೆಯನ್ನು ಪ್ರತಿಷ್ಠಾಪಿಸುವ ಸ್ಥಳ ಹಾಗೂ ವೈಭಯುತ ದಸರೆಗೆ ಗಣ್ಯರಿಂದ ಪುಷ್ಟಾರ್ಚನೆ ಮೂಲಕ ಚಾಲನೆ ಸಿಗುವ ಪ್ರಮುಖ ಘಟ್ಟಕ್ಕೆ ಅಗತ್ಯ ವೇದಿಕೆಯ ನಿರ್ಮಾಣ, ಧಾರ್ಮಿಕ ಆಚರಣೆಯೊಂದಿಗೆ ಪರಂಪರಾಗತ ವೈಭವದ ಈ ಎಲ್ಲ ಕಾರ್ಯಕ್ರಮಗಳನ್ನು ಸಾರ್ವಜನಿಕರು ವೀಕ್ಷಿಸಲು ಗ್ಯಾಲರಿಯನ್ನು ಹೆದ್ದಾರಿ ಸಂಚಾರಕ್ಕೆ ಸಮಸ್ಯೆಯಾಗದಂತೆ ನಿರ್ಮಾಣವಾಗಬೇಕಿದೆ. ಸ್ಥಳದಲ್ಲಿ ವೈದ್ಯಕೀಯ ಸೇರಿದಂತೆ ಮೂಲ ಸೌಕರ್ಯ ಇರಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts