More

    ದೊಡ್ಡಬಳ್ಳಾಪುರ ಸಂಪೂರ್ಣ ಕೇಸರಿಮಯ ; ದಾಖಲೆ ಬರೆದ ಶ್ರೀರಾಮ ಶೋಭಾಯಾತ್ರೆ, 15ರಿಂದ 20 ಸಾವಿರ ಮಂದಿ ಭಾಗಿ

    ದೊಡ್ಡಬಳ್ಳಾಪುರ: ನಗರದಲ್ಲಿ 8 ವರ್ಷಗಳಿಂದ ಏರ್ಪಡಿಸುತ್ತಿರುವ ಶ್ರೀ ರಾಮ ಶೋಭಾಯಾತ್ರೆಯಲ್ಲಿ ಈ ಬಾರಿ 15ರಿಂದ 20 ಸಾವಿರ ಮಂದಿ ಪಾಲ್ಗೊಳ್ಳುವ ಮೂಲಕ ಹೊಸ ದಾಖಲೆಗೆ ಸಾಕ್ಷಿಯಾಯಿತು.

    ತಾಲೂಕು ಕಚೇರಿ ವೃತ್ತದಿಂದ ಆರಂಭವಾದ ಶೊಭಾಯಾತ್ರೆಯಲ್ಲಿ ಶ್ರೀ ರಾಮ, ಆಂಜನೇಯ, ಗೋ ಮಾತೆ, ಈಶ್ವರನ ಸ್ತಬ್ಧ ಚಿತ್ರಗಳು ಗಮನ ಸೆಳೆದವು. ಮೆರವಣಿಗೆ ಸಾಗಿದ ಬೀದಿಗಳಲ್ಲಿ ಜನರು ಸ್ತಬ್ಧಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.

    ಎಲ್ಲೆಲ್ಲೂ ಕೇಸರಿ ಧ್ವಜ: ದೊಡ್ಡಬಳ್ಳಾಪುರದ ಪ್ರತಿ ಬೀದಿಗಳೂ ಕೇಸರಿಮಯವಾಗಿದ್ದವು. ತಾಲೂಕು ಕಚೇರಿ ವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಶ್ರೀ ರಾಮ ಮತ್ತು ಹಿಂದೂ ಧರ್ಮದಪರ ೋಷಣೆ ಕೂಗಿದರು. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಹರ್ಷದಿಂದ ಕುಣಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಹಿಳೆಯರು, ಯುವತಿಯರು ಕೇಸರಿ ಪೇಟ ಧರಿಸಿ ಪಾಲ್ಗೊಂಡಿದ್ದರು.

    ಪೊಲೀಸ್ ಹದ್ದಿನ ಕಣ್ಣು: ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದೊಡ್ಡಬಳ್ಳಾಪುರ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಅಲ್ಲದೆ, ಅರೆಮಿಲಿಟರಿ ಪಡೆ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಗೆ ಹೆಚ್ಚಿನ ಜನರು ಬಂದ ಹಿನ್ನೆಲೆಯಲ್ಲಿ ಶೋಭಾಯಾತ್ರೆಯನ್ನು ಐದು ಭಾಗಗಳಾಗಿ ವಿಂಗಡಿಸಿ, ಪ್ರತಿಯೊಂದು ಭಾಗದ ನಡುವೆ ಅಂತರ ಇರುವಂತೆ ಎಚ್ಚರವಹಿಸಿದ್ದರು.

    ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು: ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದ ಪೊಲೀಸರು, ಕಿಡಿಗೇಡಿಗಳ ದುಸ್ಸಾಹಸಕ್ಕೆ ಬ್ರೇಕ್ ಹಾಕಿದ್ದರು. ಹೆಚ್ಚುವರಿ ಎಸ್‌ಪಿ ಲಕ್ಷ್ಮೀಗಣೇಶ್ ಯಾತ್ರೆಯ ಬಂದೋಬಸ್ತ್ ನೇತೃತ್ವ ವಹಿಸಿದ್ದರು. ಎಸ್‌ಪಿ ಡಾ. ಕೋನ ವಂಶಿಕೃಷ್ಣ ಶನಿವಾರವೇ ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿನ ಭದ್ರತಾ ಏರ್ಪಾಟುಗಳನ್ನು ಪರಿಶೀಲಿಸಿದ್ದರು. ಡಿಜೆಗೆ ಪರವಾನಗಿ ಕೊಡದಿದ್ದರೂ, ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಡಿಜೆ ಬಳಸಿ ಮೆರವಣಿಗೆ ನಡೆಸಿದರು.

    ಸಂಜೆ ನಂತರ ಹೆಚ್ಚಾದ ಜನರು: ಶೋಭಾಯಾತ್ರೆ ಸಂಜೆ 4 ಗಂಟೆಗೆ ಆರಂಭವಾಯಿತು. ಆಗ ಮೆರವಣಿಗೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜನರಿದ್ದರು. ಆದರೆ ಸಂಜೆ 7 ಗಂಟೆಯಾಗುತ್ತಲೇ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವರ ಸಂಖ್ಯೆ ಹಿಗ್ಗುತ್ತಾ ಸಾಗಿ, 20 ಸಾವಿರ ದಾಟಿತ್ತು.

    ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ಜಿಜೆಪಿ ಜಿಲ್ಲಾ ಫಲಾನುಭವಿಗಳ ಪ್ರಕೋಷ್ಠಕದ ಸಂಚಾಲಕ ಧೀರಜ್ ಮುನಿರಾಜು ಶೋಭಾಯಾತ್ರೆಯ ಮುಂಚೂಣಿಯಲ್ಲಿದ್ದರು. ಹಿಂದು ಪರ ಸಂಘಟನೆಗಳು, ಬಿಜೆಪಿ ಎಲ್ಲ ಘಟಕಗಳ ಮುಖಂಡರು, ನಗರಸಭೆ ಅಧ್ಯಕ್ಷೆ ಸುಧಾರಾಣಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts