More

    ವೃಷಭ ವಾಹನಾಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದೆ

    ಶೃಂಗೇರಿ: ಶೃಂಗೇರಿ ಶ್ರೀ ಶಾರದೆ ಸೋಮವಾರ ವೃಷಭ ವಾಹನಾಲಂಕಾರದಲ್ಲಿ ಕಂಗೊಳಿಸಿದಳು. ಆದಿಶಕ್ತಿಯು ಮಹೇಶ್ವರನ ಅರ್ಧಾಂಗಿಯಾಗಿ, ಕೈಯಲ್ಲಿ ತ್ರಿಶೂಲಧರಿಸಿ, ಚಂದ್ರಲೇಖಾ ವಿಭೂಷಿತಳಾಗಿ, ವೃಷಭ ವಾಹನಾರೂಢಳಾಗಿ ಭಕ್ತರನ್ನು ಅನುಗ್ರಹಿಸಿದಳು.

    ಉಭಯ ಶ್ರೀಗಳು ದೇವಿಗೆ ಪೂಜೆ ಸಲ್ಲಿಸಿದರು. ಸರಳವಾಗಿ ನಡೆದ ದರ್ಬಾರು ಕಾರ್ಯಕ್ರಮದಲ್ಲಿ ದೇವಾಲಯದ ಒಳಪ್ರಾಂಗಣದಲ್ಲಿ ಮೂರು ಸುತ್ತು ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಮಹಾ ಮಂಗಳಾರತಿ, ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸರ್ವವಾದ್ಯ ಸೇವೆ ನೆರವೇರಿತು.

    ನವರಾತ್ರಿ ವೇಳೆ ಶ್ರೀಮಠದಲ್ಲಿ ಋಗ್ವೇದ, ಯಜುರ್ವೆದ, ಸಾಮವೇದ, ಅಥರ್ವಣವೇದ ಪಾರಾಯಣ, ವಾಲ್ಮೀಕಿ ರಾಮಾಯಣ, ದೇವಿ ಭಾಗವತ, ಶ್ರೀಮದ್ಭಾಗವತ, ಮಾಧವೀಯ ಶಂಕರದಿಗ್ವಿಜಯ, ಸೂತಸಂಹಿತೆ ಮುಂತಾದ ಪಾರಯಣಗಳು ಪ್ರತಿನಿತ್ಯ ಋತ್ವಿಜರು ಪಠಿಸುತ್ತಾರೆ.

    ಜಗದ್ಗುರುಗಳಿಂದ ವಿಶೇಷ ಪೂಜೆ :ನವರಾತ್ರಿ ಸಂದರ್ಭ ಉಭಯ ಶ್ರೀಗಳು ಗುರು ಪಾದುಕೆಗಳಿಗೆ ಹಾಗೂ ಶ್ರೀ ಚಕ್ರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಶ್ರೀಮಠದ ಎಲ್ಲ ದೇವಾಲಯಗಳಿಗೂ ಭೇಟಿ ನೀಡಿದ ನಂತರ ಶ್ರೀ ಶಾರದೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಗುರುನಿವಾಸದಲ್ಲಿ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಿಸಿದ ಬಳಿಕ ದರ್ಬಾರ್ ನಡೆಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts