ಒಂದೊಪ್ಪತ್ತಲ್ಲೇ ಭಾರಿ ವಿರೋಧಕ್ಕೆ ಮಣಿದ ಶ್ರೀಲಂಕಾ ಸರ್ಕಾರ; ಆಗಿದ್ದೇನು?

blank
blank

ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಶ್ರೀಲಂಕಾ, ಮತ್ತಷ್ಟು ಮುಜುಗರ ಹಾಗೂ ಸಮಸ್ಯೆಗಳಿಂದ ಬಚಾವಾಗುವ ಉದ್ದೇಶದಿಂದ ಕೈಗೊಂಡಿದ್ದ ನಿರ್ಧಾರವೊಂದನ್ನು ಒಂದೊಪ್ಪತ್ತಲ್ಲೇ ವಾಪಸ್ ಪಡೆದಿದೆ. ಆ ಮೂಲಕ ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಣಿದಿದೆ.

ದೇಶದಲ್ಲಿ ಎಲ್ಲ ಪ್ರಮುಖ ಸೋಷಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಆ್ಯಪ್​ಗಳ ಮೇಲೆ ನಿಷೇಧ ಹೇರಬೇಕು ಎಂದು ಭಾನುವಾರ ಬೆಳಗ್ಗೆಯಷ್ಟೇ ಆದೇಶ ಹೊರಡಿಸಿದ್ದ ಅದು ಮಧ್ಯಾಹ್ನದಷ್ಟರಲ್ಲಿ ಆ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ ಮತ್ತು ನಿಷೇಧದ ಆದೇಶವನ್ನು ವಾಪಸ್ ಪಡೆದಿದೆ.

ಟ್ವಿಟರ್, ಫೇಸ್​ಬುಕ್​, ಮೆಸೆಂಜರ್, ಟೆಲಿಗ್ರಾಂ, ಯೂಟ್ಯೂಬ್​, ವಾಟ್ಸ್​ಆ್ಯಪ್, ವೈಬರ್​, ಐಎಂಒ, ಇನ್​ಸ್ಟಾಗ್ರಾಂ, ಟಿಕ್​ಟಾಕ್​, ಸ್ನ್ಯಾಪ್​ಚಾಟ್​ಗಳ ಮೇಲೆ ನಿಷೇಧ ಹೇರಬೇಕು ಎಂದು ಅಲ್ಲಿನ ರಕ್ಷಣಾ ಸಚಿವಾಲಯವು ಟೆಲಿಕಮ್ಯುನಿಕೇಷನ್​ ರೆಗ್ಯುಲೇಟರಿ ಕಮಿಷನ್​ಗೆ ಸೂಚಿಸಿತ್ತು.

ಆದರೆ ಈ ಬಗ್ಗೆ ಕೂಡಲೇ ಭಾರಿ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ಈ ನಿರ್ಧಾರ ಸಾರ್ವಜನಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಅಲ್ಲಿನ ಬಾರ್​ ಅಸೋಸಿಯೇಷನ್​ ತೀವ್ರವಾಗಿ ಖಂಡಿಸಿತ್ತು. ರಕ್ಷಣಾ ಸಚಿವಾಯಲದ ಸೂಚನೆ ಮೇರೆಗೆ ಟೆಲಿಕಮ್ಯುನಿಕೇಷನ್​ ರೆಗ್ಯುಲೇಟರಿ ಕಮಿಷನ್​ ಆಫ್ ಶ್ರೀಲಂಕಾ (ಟಿಆರ್​​ಸಿಎಸ್​ಎಲ್​) ಸೋಷಿಯಲ್ ಮೀಡಿಯಾ ಪ್ರೊವೈಡರ್ಸ್​ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಶ್ರೀಲಂಕಾದ ಮಾನವ ಹಕ್ಕುಗಳ ಆಯೋಗ ಖಂಡಿಸಿತ್ತು. ಜೊತೆಗೆ ಸಾರ್ವಜನಿಕರಿಂದಲೂ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಸೋಷಿಯಲ್ ಮೀಡಿಯಾ ಮೇಲಿನ ನಿರ್ಬಂಧದಿಂದ ಹಿಂದೆ ಸರಿದಿದೆ.

ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸಿರಿ, ಇಲ್ಲದಿದ್ದರೆ..; ಸರ್ಕಾರಕ್ಕೆ ಸವಾಲೆಸೆದ ರಾಜ್​ ಠಾಕ್ರೆ

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…