More

    ಶ್ರೀಲಂಕಾ ಎದುರು ಇನಿಂಗ್ಸ್ ಹಾಗೂ 45 ರನ್ ಗಳಿಂದ ಜಯ ದಾಖಲಿಸಿದ ದಕ್ಷಿಣ ಆಫ್ರಿಕಾ ತಂಡ

    ಸೆಂಚುರಿಯನ್: ಸಂಘಟಿತ ಬೌಲಿಂಗ್ ನಿರ್ವಹಣೆ ತೋರಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಇನಿಂಗ್ಸ್ ಹಾಗೂ 45 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1-0 ಯಿಂದ ಮುನ್ನಡೆ ಸಾಧಿಸಿತು. ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ 2 ವಿಕೆಟ್‌ಗೆ 65 ರನ್‌ಗಳಿಂದ ದಿನದಾಟ ಆರಂಭಿಸಿದ ಶ್ರೀಲಂಕಾ ತಂಡ 46.1 ಓವರ್‌ಗಳಲ್ಲಿ 180ರನ್‌ಗಳಿಗೆ ಸರ್ವಪತನ ಕಂಡಿತು. 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 3 ರಿಂದ ಜೋಹಾನ್ಸ್‌ಬರ್ಗ್‌ನಲ್ಲಿ ಆರಂಭಗೊಳ್ಳಲಿದೆ.

    ಇದನ್ನೂ ಓದಿ: ಟೀಮ್ ಸೌಥಿಗೆ 300 ವಿಕೆಟ್, ಸೋಲಿನ ಭೀತಿಯಲ್ಲಿ ಪ್ರವಾಸಿ ಪಾಕಿಸ್ತಾನ ತಂಡ,

    ಶ್ರೀಲಂಕಾ ತಂಡ ಪರ ಕುಸಾಲ್ ಪೆರೇರಾ (64) ಹಾಗೂ ವನಿಂದು ಹಸರಂಗ (59) ಜೋಡಿ ಕೆಲಕಾಲ ಪ್ರತಿಹೋರಾಟ ನೀಡಿದರೂ ದಕ್ಷಿಣ ಆಫ್ರಿಕಾ ಬೌಲರ್‌ಗಳು ಅವಕಾಶ ನೀಡಿಲಿಲ್ಲ. ಭೋಜನ ವಿರಾಮದ ಬಳಿಕ ಕೆಲಹೊತ್ತಿನಲ್ಲೇ ದಕ್ಷಿಣ ಆಫ್ರಿಕಾ ಜಯದ ನಗೆ ಬೀರಿತು. ಲುಂಗಿ ಎನ್‌ಗಿಡಿ, ಅನ್ರಿಚ್ ನೋರ್ಜೆ, ವಿಯಾನ್ ಮುಲ್ಡೆರ್ ಹಾಗೂ ಲುಥೋ ಸಿಪಾಂಮ್ಲ ತಲಾ ಎರಡು ವಿಕೆಟ್ ಕಬಳಿಸಿದರು.

    ಶ್ರೀಲಂಕಾ: 396 ಮತ್ತು 46.1 ಓವರ್‌ಗಳಲ್ಲಿ 180 (ಕುಸಾಲ್ ಪೆರೇರಾ 64, ದಿನೇಶ್ ಚಾಂಡಿಮಾಲ್ 25, ವನಿಂದು ಹಸರಂಗ 59, ಲುಂಗಿ ಎನ್‌ಗಿಡಿ 38ಕ್ಕೆ 2, ಅನ್ರಿಚ್ ನೋರ್ಜೆ 47ಕ್ಕೆ 2, ವಿಯಾನ್ ಮುಲ್ಡೆರ್ 39ಕ್ಕೆ 2, ಲುಥೋ ಸಿಪಾಂಮ್ಲ 24ಕ್ಕೆ 2), ದಕ್ಷಿಣ ಆಫ್ರಿಕಾ: 621

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts