More

    ಟೀಮ್ ಸೌಥಿಗೆ 300 ವಿಕೆಟ್, ಸೋಲಿನ ಭೀತಿಯಲ್ಲಿ ಪ್ರವಾಸಿ ಪಾಕಿಸ್ತಾನ ತಂಡ

    ಮೌಂಟ್ ಮೌಂಗನುಯಿ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಪ್ರಭುತ್ವ ಸಾಧಿಸಲು ಯಶಸ್ವಿಯಾಗಿರುವ ಆತಿಥೇಯ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿನ ಹಾದಿಯಲ್ಲಿದೆ. ಬೇ ಓವೆಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 373 ರನ್ ಗೆಲುವಿನ ಗುರಿ ಬೆನ್ನಟ್ಟಿರುವ ಪಾಕಿಸ್ತಾನ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 71 ರನ್ ಪೇರಿಸಿದ್ದು, ಜಯ ದಾಖಲಿಸಲು ಇನ್ನೂ 302 ರನ್‌ಗಳಿಸಬೇಕಿದೆ. ಅನುಭವಿ ವೇಗಿ ಟೀಮ್ ಸೌಥಿ (15ಕ್ಕೆ 2) ಪಾಕಿಸ್ತಾನ ತಂಡಕ್ಕೆ ಆರಂಭಿಕ ಶಾಕ್ ನೀಡಿದರು. ಅಜರ್ ಅಲಿ (34*ರನ್, 117 ಎಸೆತ, 3 ಬೌಂಡರಿ) ಹಾಗೂ ಫವಾದ್ ಅಲಂ (21*ರನ್, 55 ಎಸೆತ, 4 ಬೌಂಡರಿ) ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. 2 ವಿಕೆಟ್ ಕಬಳಿಸಿದ ಟೀಮ್ ಸೌಥಿ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.

    ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟ್ ಪ್ರಶಸ್ತಿ, ಧೋನಿಗೂ ಐಸಿಸಿ ಗೌರವ

    ಇದಕ್ಕೂ ಮೊದಲು ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಟಾಮ್ ಲಾಥಮ್ (53 ರನ್, 112 ಎಸೆತ, 3 ಬೌಂಡರಿ) ಹಾಗೂ ಟಾಮ್ ಬ್ಲೆಂಡೆಲ್ (64 ರನ್, 107 ಎಸೆತ, 7 ಬೌಂಡರಿ) ಜೋಡಿ ಉತ್ತಮ ಆರಂಭ ನೀಡಿತು. ನಾಸೀಮ್ ಶಾ (55ಕ್ಕೆ 3) ಬಿಗಿ ಬೌಲಿಂಗ್ ದಾಳಿಯಿಂದ ಕಿವೀಸ್ ದಿಢೀರ್ ಕುಸಿತ ಕಂಡಿತು. ಅಂತಿಮವಾಗಿ ನ್ಯೂಜಿಲೆಂಡ್ ತಂಡ 45.3 ಓವರ್‌ಗಳಲ್ಲಿ 5 ವಿಕೆಟ್‌ಗೆ 180 ರನ್‌ಗಳಿಸಿ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್ 431 ರನ್‌ಗಳಿಸಿದರೆ, ಪಾಕಿಸ್ತಾನ 239 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದರಿಂದ ಆತಿಥೇಯ ತಂಡ 192 ರನ್ ಮುನ್ನಡೆ ಸಾಧಿಸಿತ್ತು.

    ಇದನ್ನೂ ಓದಿ: ಆಸೀಸ್ ಗೆ ತಿರುಗೇಟು, ಬಾಕ್ಸಿಂಗ್ ಡೇ ಟೆಸ್ಟ್ ಜಯಿಸಿದ ಭಾರತ ತಂಡ 

    ನ್ಯೂಜಿಲೆಂಡ್: 431 ಮತ್ತು 5 ವಿಕೆಟ್‌ಗೆ 180 ಡಿಕ್ಲೇರ್ (ಟಾಮ್ ಲಾಥಮ್ 53, ಟಾಮ್ ಬ್ಲೆಂಡೆಲ್ 64, ಕೇನ್ ವಿಲಿಯಮ್ಸನ್ 21, ನಾಸೀಮ್ ಶಾ 55ಕ್ಕೆ 3, ಮೊಹಮದ್ ಅಬ್ಬಾಸ್ 33ಕ್ಕೆ 1), ಪಾಕಿಸ್ತಾನ: 239 ಮತ್ತು 3 ವಿಕೆಟ್‌ಗೆ 71 (ಅಜರ್ ಅಲಿ 34*, ಟೀಮ್ ಸೌಥಿ 15ಕ್ಕೆ 2, ಟ್ರೆಂಟ್ ಬೌಲ್ಟ್ 24ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts