More

    ದಕ್ಷಿಣ ಆಫ್ರಿಕಾ ಎದುರು ಉತ್ತಮ ಸ್ಥಿತಿಯಲ್ಲಿ ಪ್ರವಾಸಿ ಶ್ರೀಲಂಕಾ ತಂಡ

    ಸೆಂಚುರಿಯನ್: ದಿನೇಶ್ ಚಾಂಡಿಮಾಲ್ (85ರನ್, 161 ಎಸೆತ, 11 ಬೌಂಡರಿ) ಹಾಗೂ ಧನಂಜಯ್ ಡಿ ಸಿಲ್ವಾ (79ರನ್, 105 ಎಸೆತ, 11 ಬೌಂಡರಿ, 1 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಶ್ರೀಲಂಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು ಬೃಹತ್ ಮೊತ್ತದತ್ತ ಮುಖಮಾಡಿದೆ. ಸೂಪರ್‌ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ, ಆರಂಭಿಕ ವೈಫಲ್ಯದ ನಡುವೆಯೂ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 338 ರನ್‌ಗಳಿಸಿದೆ.

    ಇದನ್ನೂ ಓದಿ: ಗೌತಮ್ ಗಂಭೀರ್ ಕ್ಯಾಂಟೀನ್‌ನಲ್ಲಿ 1 ರೂಪಾಯಿಗೆ ಊಟ!

    ನಾಯಕ ದಿಮುತ್ ಕರುಣರತ್ನೆ (22) ಹಾಗೂ ಕುಸಾಲ್ ಪೆರೇರಾ (16) ಜೋಡಿ ಉತ್ತಮ ಆರಂಭ ನೀಡಲು ವಿಲವಾಯಿತು. ಕುಸಾಲ್ ಮೆಂಡಿಸ್ (12) ನಿರಾಸೆ ಅನುಭವಿಸಿದರು. ಬಳಿಕ ಜತೆಯಾದ ದಿನೇಶ್ ಚಾಂಡಿಮಾಲ್ ಹಾಗೂ ಧನಂಜಯರ್ ಜೋಡಿ 4ನೇ ವಿಕೆಟ್‌ಗೆ 131 ರನ್ ಪೇರಿಸಿತು. ಈ ವೇಳೆ ಧನಂಜಯ್ ಡಿ ಸಿಲ್ವಾ ಗಾಯದ ಸಮಸ್ಯೆಯಿಂದ ಕಣದಿಂದ ನಿವೃತ್ತರಾದರು. ಬಳಿಕ ಚಾಂಡಿಮಾಲ್ ಜತೆಯಾದ ನಿರೋಶಾನ್ ಡಿಕ್‌ವೆಲ್ಲಾ (49) ಜೋಡಿ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿತು. ಈ ಜೋಡಿ 4ನೇ ವಿಕೆಟ್‌ಗೆ 99 ರನ್ ಪೇರಿಸಿ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಿತು. ಈ ಜೋಡಿಗೆ ವಿಯಾನ್ ಮುಲ್ಡೆರ್ ಆಘಾತ ನೀಡಿದರು. ಡಾಸುನ್ ಶನಕ (25*) ಹಾಗೂ ಕುಸಾನ್ ರಜಿತಾ (7) ಜೋಡಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

    ಇದನ್ನೂ ಓದಿ: ವಿರಾಟ್ ಕೊಹ್ಲಿ ಬಳಿ ಅಜಿಂಕ್ಯ ರಹಾನೆ ಕ್ಷಮೆಯಾಚಿಸಿದ್ದೇಕೆ..?

    ಶ್ರೀಲಂಕಾ: 6 ವಿಕೆಟ್‌ಗೆ 338 (ದಿನೇಶ್ ಚಾಂಡಿಮಾಲ್ 85, ಧನಂಜಯ್ ಡಿ ಸಿಲ್ವಾ 79, ನಿರೊಶಾನ್ ಡಿಕ್‌ವೆಲ್ಲಾ 49, ವಿಯಾನ್ ಮುಲ್ಡೆರ್ 68ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts