More

    ಶ್ರೀಲಂಕಾ ತಂಡಕ್ಕೆ ಏಂಜಲೋ ಮ್ಯಾಥ್ಯೂಸ್ ಶತಕದಾಸರೆ

    ಗಾಲೆ: ಅನುಭವಿ ಬ್ಯಾಟ್ಸ್‌ಮನ್ ಏಂಜಲೋ ಮ್ಯಾಥ್ಯೂಸ್ (107*ರನ್, 228 ಎಸೆತ, 11 ಬೌಂಡರಿ) ಶತಕದಾಟದ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮೊದಲ ದಿನದ ಗೌರವ ಸಂಪಾದಿಸಿದೆ. ಗಾಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 229 ರನ್ ಪೇರಿಸಿದೆ. ಮೊದಲ ಟೆಸ್ಟ್‌ನಲ್ಲಿ ಜಯ ದಾಖಲಿಸಿರುವ ಇಂಗ್ಲೆಂಡ್ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ.

    ಇದನ್ನೂ ಓದಿ: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಮುಗ್ಗರಿಸಿದ ಪಿವಿ ಸಿಂಧು, ಸಮೀರ್ ವರ್ಮ, ಉಪಾಂತ್ಯಕ್ಕೇರಿದ ಅಶ್ವಿನಿ ಪೊನ್ನಪ್ಪ- ಸಾತ್ವಿಕ್ ಜೋಡಿ,

    ಸರಣಿಯಲ್ಲಿ ಸಮಬಲ ಸಾಧಿಸುವ ಛಲದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ (24ಕ್ಕೆ 3) ಆರಂಭಿಕ ಆಘಾತ ನೀಡಿದರು. ಆರಂಭಿಕ ಕುಸಾಲ್ ಪೆರೇರಾ (6), ಓಶಾದ ೆರ್ನಾಂಡೊ (0) ಜೋಡಿಗೆ ಪೆವಿಲಿಯನ್ ದಾರಿ ತೋರಿಸಿದರು. ಬಳಿಕ ಆರಂಭಿಕ ಬ್ಯಾಟ್ಸ್‌ಮನ್ ಲಹಿರು ತಿರಿಮನ್ನೆ (43) ಹಾಗೂ ಏಂಜಲೋ ಮ್ಯಾಥ್ಯೂಸ್ ಜೋಡಿ 3ನೇ ವಿಕೆಟ್‌ಗೆ 69 ರನ್ ತೆಯಾಟವಾಡಿತು. ತಿರಿಮನ್ನೆ ವಿಕೆಟ್ ಕಬಳಿಸುವ ಮೂಲಕ ಈ ಜೋಡಿಗೂ ಆಂಡರ್‌ಸನ್ ಶಾಕ್ ನೀಡಿದರು. ಮ್ಯಾಥ್ಯೂಸ್ ಜತೆಯಾದ ನಾಯಕ ದಿನೇಶ್ ಚಾಂಡಿಮಾಲ್ (52) 4ನೇ ವಿಕೆಟ್‌ಗೆ 117 ರನ್ ಇನಿಂಗ್ಸ್‌ಗೆ ಚೇತರಿಕೆ ನೀಡಿದರು.

    ಇದನ್ನೂ ಓದಿ: ವೆಸ್ಟ್ ಇಂಡೀಸ್ ತಂಡ ಮಣಿಸಿ ಏಕದಿನ ಸರಣಿ ಗೆದ್ದ ಬಾಂಗ್ಲಾದೇಶ,

    ಶ್ರೀಲಂಕಾ : 87 ಓವರ್‌ಗಳಲ್ಲಿ 4 ವಿಕೆಟ್‌ಗೆ 229 (ಏಂಜಲೋ ಮ್ಯಾಥ್ಯೂಸ್ 107*, ದಿನೇಶ್ ಚಾಂಡಿಮಾಲ್ 52, ಲಹಿರು ತಿರಿಮನ್ನೆ 43, ಜೇಮ್ಸ್ ಆಂಡರ್‌ಸನ್ 24ಕ್ಕೆ 3, ಮಾರ್ಕ್‌ವುಡ್ 47ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts