More

    VIDEO: ದೇಶ ಸೇವೆ ಮಾಡೋಕೆ ಇದು ಸಕಾಲ, ಆದರೆ ಬೀದಿಗೆ ಇಳಿಯಬೇಡಿ, ಸದ್ಯ ಮನೆಯಲ್ಲಿರೋದೇ ದೇಶ ಸೇವೆ- ಇದು ಶ್ರೀಗುರುವಾಣಿ !

    ಕರೊನಾ ಸೋಂಕು ಹರಡದಂತೆ ತಡೆಯಲು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ಈ ದಿನ ಅವರು ಈ ಕರೊನಾ ಸಂಕಷ್ಟ ಕಾಲದಲ್ಲಿ ದೇಶ ಸೇವೆ ಹೇಗೆ ಮಾಡಬಹುದು, ಹೇಗೆ ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ.

    ದೇಶ ಸೇವೆ ಮಾಡಬೇಕು ಎನ್ನುವ ಬಯಕೆ ನಮ್ಮೆಲ್ಲರಿಗೂ ಇದೆ. ಉತ್ಸಾಹ ಸಾಕಷ್ಟಿದೆ. ಅದಕ್ಕೆ ಇದು ಸಕಾಲ. ಮನೆಯಲ್ಲಿದ್ದುಕೊಂಡೇ ಮಾಡಬಹುದು ದೇಶ ಸೇವೆ. ಕರೊನಾ ಸೋಂಕು ಹರಡುವ ಕಾರಣ, ಮನೆಯಲ್ಲಿದ್ದುಕೊಂಡೇ ಕರೊನಾ ವಾರಿಯರ್ಸ್​ ಗೆ ಬೆಂಬಲ ನೀಡಿದರೆ ಸಾಕು. ಅದುವೇ ದೇಶ ಸೇವೆ. ಇಲ್ಲ ಅದಾಗದು ಎಂದು ಬೀದಿಗೆ ಇಳಿದರೆ ಅದು ದೇಶ ಸೇವೆ ಎಂದೆನಿಸದು.

    ನಿಮಗೆ ಗೊತ್ತಿರಲಿ. ಒಬ್ಬನಿಗೆ ಕರೊನಾ ಸೋಂಕು ತಗುಲಿದರೆ ಎಲ್ಲರೂ ಓಡಾಡುತ್ತಿದ್ದರೆ ಆತನಿಂದ ಅದು 400 ಜನಕ್ಕೆ ಹರಡಬಹುದು. ಈ ರೀತಿ ಹರಡುತ್ತ ಹೋದರೆ ಪರಿಸ್ಥಿತಿ ಏನಾದೀತು ಊಹಿಸಿ ನೋಡಿ. ಅದಕ್ಕೆ ನಾವು ಅವಕಾಶ ಕೊಡಬಾರದು ಅಲ್ಲವೇ? ಹೀಗಾಗಿ ದೇಶ ಸೇವೆ ಮಾಡಬೇಕು ಎಂಬ ಇಚ್ಛೆ ನಿಮಗಿದ್ದರೆ ಮನೆಯಲ್ಲೇ ಇರಿ. ಈ ಪ್ರವಚನದ ಪೂರ್ಣಪಾಠಕ್ಕಾಗಿ ಕೆಳಗಿರುವ ಇನ್​ಸ್ಟಾಗ್ರಾಂ ಅಥವಾ ಫೇಸ್​ಬುಕ್​ ವಿಡಿಯೋವನ್ನು ವೀಕ್ಷಿಸಬಹುದು.

    ಶ್ರೀಗುರುವಾಣಿ – ಕರೊನಾ ಸಾಂತ್ವನ

    ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಪ್ರವಚನ ಸಾರಾಮೃತದಲ್ಲಿದೆ ಕರೊನಾ ಸಾಂತ್ವನ

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಏಪ್ರಿಲ್ 21, 2020

    VIDEO: ಕರೊನಾ ಕಾಲದಲ್ಲಿ ಧೈರ್ಯಗೆಡದವರೇ ಧೀರರು – ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಕೊಟ್ಟ ವಿವರಣೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts