More

    ವ್ಯಕ್ತಿಗತ ಶುಚಿತ್ವ ಪಾಲನೆ ಹೇಗೆ ಮತ್ತು ಎಷ್ಟು ಅನಿವಾರ್ಯ- ಕರೊನಾ ಸಾಂತ್ವನದ ನುಡಿ ಶ್ರೀಗುರುವಾಣಿಯಲ್ಲಿ ಇಂದು..

    ಕರೊನಾ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ವ್ಯಕ್ತಿಗತ ಶುಚಿತ್ವ ಪಾಲನೆ ಎಷ್ಟು ಅನಿವಾರ್ಯ ಎಂಬುದನ್ನು ಇಂದಿನ ಶ್ರೀಗುರುವಾಣಿಯಲ್ಲಿ ವಿವರಿಸಿದ್ದಾರೆ.

    ಕರೊನಾ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಎಲ್ಲರೂ ಹೇಳುತ್ತಿದ್ದಾರೆ. ನಾವು ಧರಿಸುವ ವಸ್ತ್ರ ಶುಭ್ರವಾಗಿರಬೇಕು. ಒಂದು ಸಲ ಮೈ ಮೇಲೆ ಧರಿಸಿದ ಉಡುಪನ್ನು ತೊಳೆಯದೇ ಮತ್ತೆ ಉಪಯೋಗಿಸಬಾರದು ಎನ್ನುತ್ತಾರೆ. ಈಗ ಇವರೆಲ್ಲ ಏನು ಹೇಳುತ್ತಾರೋ ಅದೆಲ್ಲವೂ ಮಹಾಭಾರತದಲ್ಲಿದೆ. ಮಹಾಭಾರತದಲ್ಲಿ ಇಲ್ಲದ ವಿಷಯಗಳೇ ಇಲ್ಲ ಎಂಬುದನ್ನು ವ್ಯಾಸ ಮಹರ್ಷಿಗಳು ಸಾರಿ ಹೇಳಿದ್ದಾರೆ. ಹದಿನೆಂಟು ಪರ್ವಗಳ ಮಹಾಭಾರತದಲ್ಲಿ ಯುದ್ಧವೊಂದೇ ಅಲ್ಲ. ಯುದ್ಧದ ವಿವರಣೆ ಇರುವುದು ಕೇವಲ 5 ಪರ್ವಗಳಲ್ಲಿ ಮಾತ್ರ. ಉಳಿದ 13 ಪರ್ವಗಳಲ್ಲಿ ಬೇರೆ ಬೇರೆ ವಿಷಯಗಳಿವೆ. ಅವುಗಳ ಪೈಕಿ ವ್ಯಕ್ತಿಗತ ಶುಚಿತ್ವದ ಬಗ್ಗೆ ನಮ್ಮಲ್ಲಿ ಅರಿವು ಮೂಡಿಸುವುದು ಅನುಶಾಸನ ಪರ್ವ.

    ಇದರಲ್ಲಿ ವ್ಯಕ್ತಿಗತ ಶುಚಿತ್ವ ಹೇಗಿರಬೇಕು ಎಂಬ ವಿವರಣೆ ಇದೆ. ಎಷ್ಟರ ಮಟ್ಟಿಗೆ ಇರಬೇಕು ಎಂಬುದನ್ನೂ ಇಲ್ಲಿ ವಿವರಿಸಲಾಗಿದೆ. ಆ ವಿವರಗಳನ್ನು ಸ್ವಾಮೀಜಿಯವರು ಇಂದಿನ ಗುರುವಾಣಿಯಲ್ಲಿ ವಿವರಿಸಿದ್ದು ಪೂರ್ಣಪಾಠಕ್ಕಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಬಹುದು.

    ಶ್ರೀಗುರುವಾಣಿ- ಕರೊನಾ ಸಾಂತ್ವನದಲ್ಲಿ ನಿಯಮಪಾಲನೆ ಜಾಗೃತಿ

    ಕರೊನಾ ಲಾಕ್​ಡೌನ ಸಂದರ್ಭದಲ್ಲಿ ಪ್ರಜೆಗಳಾಗಿ ನಾವು ನಿಯಮ ಪಾಲನೆ ಮಾಡಬೇಕಾದ ಅಗತ್ಯವೇನು ಎಂಬ ವಿವರಣೆ ಶ್ರೀಗುರುವಾಣಿಯಲ್ಲಿದೆ. ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಈ ಪ್ರವಚನ ನೀಡುತ್ತಿದ್ದು, ಇದರ ಸಾರಾಮೃತವೇ ಈ ಕರೊನಾ ಸಾಂತ್ವನ.#SriGanapathiSachidanandaSwamiji #DattaShodashaKshetra #DattaDigambaraTemple #Coronavirus #Lockdown #DighvijayNews

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಏಪ್ರಿಲ್ 28, 2020

    VIDEO: ಕರೊನಾ ಸಂಕಷ್ಟಕಾಲದಲ್ಲಿ ದೇಶದ್ರೋಹಿಗಳು ಯಾರು?: ಶ್ರೀಗುರುವಾಣಿಯಲ್ಲಿದೆ ವಿವರಣೆ ವೀಕ್ಷಿಸಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts