More

    VIDEO| ಕರೊನಾದಿಂದ ಮನೆಯಲ್ಲೇ ಲಾಕ್​ ಆಗಿದ್ದೇವೆಂಬ ಬೇಸರ ಕಾಡದಿರಲು ಗುರುಗಳು ಹೇಳಿದ ಹಾಗೆ ಮಾಡಿ: ಇದು ಶ್ರೀಗುರುವಾಣಿ

    ಕರೊನಾ ಸೋಂಕು ಹರಡದಂತೆ ತಡೆಯಲು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ಕರೊನಾದಿಂದ ಮನೆಯಲ್ಲೇ ಲಾಕ್​ ಆಗಿದ್ದೇವೆಂಬ ಬೇಸರ ಕಾಡದಿರಲು ಏನು ಮಾಡಬೇಕೆಂದು ಇಂದಿನ ಪ್ರವಚನದಲ್ಲಿ ಹೇಳಿದರು.

    ಕರೊನಾದಿಂದ ಮನೆಯಲ್ಲೇ ಕೂತು ಬೇಜಾರಾಗುತ್ತಿದೆ ಎಂದು ಯಾರು ಬೇಸರ ಮಾಡಿಕೊಳ್ಳಬೇಡಿ. ಕರೊನಾ ವಿರುದ್ಧ ಗೆಲುವಿಗೆ ಮನೆಯಲ್ಲೇ ಇರುವುದು ಅನಿವಾರ್ಯವಾಗಿದೆ. ಕೂತಲ್ಲೇ ಸಾಧಿಸುವ ಸಾಮರ್ಥ್ಯ ಭಾರತೀಯರಿಗೆ ಇದೆ. ಉದಾಹರಣೆಗೆ ದೇಶದ ಹಲವೆಡೆ ನಮ್ಮ ಭಾರತೀಯರು ಇದ್ದಾರೆ ಎಂಬುದನ್ನು ನೆನಪಿನಲ್ಲಿಡಿ. ಅಂಥಾ ನೆನಪಿನ ಶಕ್ತಿ ನಮ್ಮ ಭಾರತೀಯರಿಗೆ ಇದೆ. ಹೀಗಾಗಿ ಲಾಕ್​ಡೌನ್​ ಸಮಯದಲ್ಲಿ ಹೇಗೆ ದಿನಗಳನ್ನು ಕಳೆಯಬಹುದು ಎಂದು ಚಿಂತೆ ಮಾಡಬೇಡಿ. ಯಾವ ರೀತಿ ವಿನಿಯೋ ಮಾಡಿಕೊಳ್ಳಬೇಕೆಂಬುದನ್ನು ಚಿಂತಿಸಿ, ಸದ್ಬಳಕೆ ಮಾಡಿಕೊಳ್ಳಿ ಎಂದು ಗುರುಗಳು ಕರೆ ನೀಡಿದರು.

    ಈ ಕರೊನಾ ಕರಾಳ ದಿನಗಳಿಂದಾಗಿ ಮನೆಯಲ್ಲೇ ಇರಬೇಕಾಗಿದೆಯಲ್ಲಪ್ಪ ಎಂಬ ಬೇಸರ ಕಾಡಬಾರದೆಂದರೆ ನಿಮಗೆ ನೀವೆ ಒಂದು ಒಳ್ಳೆ ಕಾರ್ಯಯೋಜನೆ ಹಾಕಿಕೊಳ್ಳಿ. ಎಷ್ಟೋ ಮಂದಿ ಕಾಲೇಜು ಹುಡುಗರು ಸಂಶೋಧನೆ ಮಾಡಿ ಬಹುಮಾನ ತೆಗೆದುಕೊಂಡಿದ್ದಾರೆ. ಇದೀಗ ಒಂದು ಸುವರ್ಣಾವಕಾಶ ಸಿಕ್ಕಿದೆ ಏನಾದರೂ ಸಂಶೋಧನೆ ಮಾಡಿ. ಯಾವುದೇ ದುರಾಭ್ಯಾಸಗಳಿಗೆ ದಾಸರಾಗಬೇಡಿ. ಕೆಲವರು ಅತಿಯಾದ ನಿದ್ದೆ ಮಾಡುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಒಳ್ಳೆಯ ಅಭ್ಯಾಸ ಬೆಳೆಸಿಕೊಳ್ಳಿ ಎಂದರು. ಹಾಗೇ ಗುರುಗುಳು ಹಾಡಿನ ಮೂಲಕ ಕರೊನಾ ಸುರಕ್ಷತೆ ವಿವರಿಸಿದ್ದು, ಅದನ್ನು ಈ ಕೆಳಗಿನ ವಿಡಿಯೋದಲ್ಲಿ ಕೇಳಬಹುದಾಗಿದೆ.

    ಕರೊನಾದಿಂದ ಮನೆಯಲ್ಲೇ ಲಾಕ್​ ಆಗಿದ್ದೇವೆಂಬ ಬೇಸರ ಕಾಡದಿರಲು ಗುರುಗಳು ಹೇಳಿದ ಹಾಗೆ ಮಾಡಿ: ಇದು ಶ್ರೀಗುರುವಾಣಿ

    ಕರೊನಾದಿಂದ ಮನೆಯಲ್ಲೇ ಕೂತು ಬೇಜಾರಾಗುತ್ತಿದೆ ಎಂದು ಯಾರು ಬೇಸರ ಮಾಡಿಕೊಳ್ಳಬೇಡಿ. ಕರೊನಾ ವಿರುದ್ಧ ಗೆಲುವಿಗೆ ಮನೆಯಲ್ಲೇ ಇರುವುದು ಅನಿವಾರ್ಯವಾಗಿದೆ. ಕೂತಲ್ಲೇ ಸಾಧಿಸುವ ಸಾಮರ್ಥ್ಯ ಭಾರತೀಯರಿಗೆ ಇದೆ. ಶ್ರೀಗುರುವಾಣಿಯಲ್ಲಿದೆ ಯಾವ ರೀತಿ ಎಂಬುದರ ವಿವರಣೆ. ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಪ್ರವಚನ ಸಾರಾಮೃತ ಈ ಕರೊನಾ ಸಾಂತ್ವನ#SriGanapathiSachidanandaSwamiji #DattaShodashaKshetra #DattaDigambaraTemple #Coronavirus #Lockdown #DighvijayNews

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಏಪ್ರಿಲ್ 26, 2020

    VIDEO| ಮೊದಲು ವಿಷ ಸೃಷ್ಟಿಯಾದರೂ, ನಂತರದಲ್ಲಿ ಅಮೃತವು ಹುಟ್ಟಿಕೊಂಡಿತು; ತಾಳ್ಮೆ ವಹಿಸಿ ಕರೊನಾ ಗೆಲ್ಲೋಣ: ಇದು ಶ್ರೀಗುರುವಾಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts