More

    VIDEO: ಕರೊನಾ ಸಂಕಷ್ಟಕಾಲದಲ್ಲಿ ದೇಶದ್ರೋಹಿಗಳು ಯಾರು?: ಶ್ರೀಗುರುವಾಣಿಯಲ್ಲಿದೆ ವಿವರಣೆ ವೀಕ್ಷಿಸಿ..

    ಕರೊನಾ ಸೋಂಕು ಹರಡದಂತೆ ತಡೆಯಲು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ಮೊಂಡುವರ್ತನೆ ಬಿಟ್ಟು ನಮ್ಮ ಜೀವ ನಾವೇ ಕಾಪಾಡಿಕೊಳ್ಳಬೇಕು. ಯಾಕೆ ಎಂಬುದನ್ನು ಇಂದಿನ ಗುರುವಾಣಿಯಲ್ಲಿ ವಿವರಿಸಿದ್ದಾರೆ ಅವರು.

    ಇದು ಕರೊನಾ ಸಂಕಷ್ಟ ಕಾಲ. ಸಾಂಕ್ರಾಮಿಕ ರೋಗ ಹರಡವುದನ್ನು ತಡೆಯಲು ಲಾಕ್​ಡೌನ್ ಚಾಲ್ತಿಯಲ್ಲಿದೆ. ನಾವು ಪಾಲಿಸಬೇಕಾದ ನಿಯಮಗಳ ಕುರಿತ ಮಾರ್ಗಸೂಚಿಯನ್ನೂ ಸರ್ಕಾರ ಪ್ರಕಟಿಸಿದೆ. ನಾಡಿನ ಶೇಕಡ 99 ಜನ ಇದನ್ನು ಪಾಲಿಸುತ್ತಿದ್ದಾರೆ. ಇನ್ನು ಕೆಲವರು ನನಗೇನೂ ಆಗಲ್ಲ. ಸದ್ಯ ನನಗೇನೂ ಅಂತಹ ಗುಣಲಕ್ಷಣಗಳಿಲ್ಲ. ನಾನೇಕೆ ಮನೆಯಲ್ಲಿ ಇರಬೇಕು ಎಂದು ಪ್ರಶ್ನಿಸುತ್ತ ಬೀದಿಗೆ ಇಳಿದು ಎಲ್ಲರ ಜತೆಗೂ ಖ್ಯಾತೆ ತೆಗೆಯುತ್ತಿರುತ್ತಾರೆ. ಇಂತಹ ವ್ಯಕ್ತಿಗಳ ಕುರಿತ ಸುದ್ದಿಗಳನ್ನು ನಿತ್ಯವೂ ನಾವು ನೋಡುತ್ತಿದ್ದೇವೆ.

    ಇಂತಹ ವರ್ತನೆಯನ್ನು ಮೊಂಡುವರ್ತನೆ ಎನ್ನುತ್ತಾರೆ. ಇದು ಸರಿಯಲ್ಲ. ಕರೊನಾ ಸಂಕಷ್ಟ ಕಾಲದಲ್ಲಿ ಮೊಂಡುತನ ಪ್ರದರ್ಶಿಸಬಾರದು. ಸರ್ಕಾರ ನಮ್ಮ ಒಳಿತಿಗಾಗಿಯೇ ನಿಯಮಗಳನ್ನು ಜಾರಿಗೊಳಿಸಿರುವಂಥದ್ದು. ಅದನ್ನು ಗೌರವಿಸಬೇಕು. ನಮ್ಮ ಜೀವವನ್ನು ನಾವೇ ಕಾಪಾಡಿಕೊಳ್ಳಬೇಕು. ನಮ್ಮ ಮನೆಯವರ ಜೀವವನ್ನೂ ನಾವೇ ಕಾಪಾಡಬೇಕು. ಸ್ವಯಂ ನಿಯಂತ್ರಣ ನಮಗೆ ಇರಬೇಕು ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ ಸ್ವಾಮೀಜಿ. ಅವರ ಪ್ರವಚನದ ಪೂರ್ಣಪಾಠಕ್ಕೆ ಕೆಳಗಿನ ವಿಡಿಯೋ ಲಿಂಕ್​ಗಳಲ್ಲಿ ವೀಕ್ಷಿಸಬಹುದು.

    ಮೊಂಡುತನದ ವರ್ತನೆ ಬಿಟ್ಟು ನಮ್ಮ ಜೀವ ನಾವೇ ಉಳಿಸಬೇಕಷ್ಟೆ- ಶ್ರೀಗುರುವಾಣಿ

    ಕರೊನಾ ಸಂಕಷ್ಟ ಕಾಲ ಇದು. ಇಲ್ಲಿ ಮೊಂಡುತನದ ವರ್ತನೆ ಸರಿಯಲ್ಲ. ನಮ್ಮ ಜೀವ ನಾವೇ ಉಳಿಸಬೇಕಷ್ಟೆ ಎಂಬುದನ್ನು ವಿವರಿಸಿದ್ದಾರೆ ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ. ಅವರ ಶ್ರೀ ಗುರುವಾಣಿ ಪ್ರವಚನ ಸಾರಾಮೃತ ಈ ಕರೊನಾ ಸಾಂತ್ವನ#SriGanapathiSachidanandaSwamiji #DattaShodashaKshetra #DattaDigambaraTemple #Coronavirus #Lockdown #DighvijayNews

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಏಪ್ರಿಲ್ 27, 2020

    VIDEO| ಕರೊನಾದಿಂದ ಮನೆಯಲ್ಲೇ ಲಾಕ್​ ಆಗಿದ್ದೇವೆಂಬ ಬೇಸರ ಕಾಡದಿರಲು ಗುರುಗಳು ಹೇಳಿದ ಹಾಗೆ ಮಾಡಿ: ಇದು ಶ್ರೀಗುರುವಾಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts