More

    VIDEO: ಮಕ್ಕಳನ್ನು ಬೆಳೆಸುವಲ್ಲಿ ತಾಯಿಯ ಪಾತ್ರವೇ ಮಹತ್ವದ್ದು- ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಂದ ಕರೊನಾ ಸಾಂತ್ವನ

    ಕರೊನಾ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ತಾಯಿಯನ್ನು ಸ್ಮರಿಸುತ್ತ ಕರೊನಾ ವಿರುದ್ಧ ಹೋರಾಟ ಮುಂದುವರಿಸುವುದು ಎಷ್ಟು ಅಗತ್ಯ ಎಂಬುದನ್ನು ಇಂದಿನ ಶ್ರೀಗುರುವಾಣಿಯಲ್ಲಿ ವಿವರಿಸಿದ್ದಾರೆ.

    ಇದನ್ನೂ ಓದಿ: ವ್ಯಕ್ತಿಗತ ಶುಚಿತ್ವ ಪಾಲನೆ ಹೇಗೆ ಮತ್ತು ಎಷ್ಟು ಅನಿವಾರ್ಯ- ಕರೊನಾ ಸಾಂತ್ವನದ ನುಡಿ ಶ್ರೀಗುರುವಾಣಿಯಲ್ಲಿ ಇಂದು..

    ಯಾವುದೇ ವಸ್ತು ಕೈಗೆಟಕುವ ಹಾಗಿದ್ದಾಗ ಅದರ ಬೆಲೆ ಗೊತ್ತಾಗುವುದಿಲ್ಲ. ಅಲಭ್ಯತೆಯೇ ಹೆಚ್ಚು ಮೌಲ್ಯಯುತವಾದುದು. ಲಭ್ಯವಿದ್ದರೆ ಅದು ಅಗ್ಗ. ಕಣ್ಣೆದುರು ಇದ್ದಾಗ ಅದರ ಬೆಲೆ ಗೊತ್ತಾಗುವುದಿಲ್ಲ. ಕಾಣದೇ ಇದ್ದಾಗಲೇ ಮಹತ್ವ ಹೆಚ್ಚು. ತಾಯಿ ಜನ್ಮ ನೀಡಿದಾಕೆ ಮಾತ್ರವಲ್ಲ, ಭೂತಾಯಿ, ಗೋಮಾತೆ, ಗಂಗಾ ಮಾತೆ, ವೇದಮಾತೆ ಹೀಗೆ ಐದು ತಾಯಂದಿರು. ಜಕಾರಗಳ ಪೈಕಿ ಮೂರು ತಾಯಿಯನ್ನು ಸ್ಮರಿಸಿದರೆ, ಇನ್ನೆರಡರಲ್ಲಿ ಒಂದು ಜನಕನನ್ನು ಸ್ಮರಿಸುತ್ತದೆ. ಇನ್ನೊಂದು ಜನಾರ್ಧನನ್ನು ಸ್ಮರಿಸುತ್ತದೆ.

    ಇದನ್ನೂ ಓದಿ: VIDEO: ಕರೊನಾ ಸಂಕಷ್ಟಕಾಲದಲ್ಲಿ ದೇಶದ್ರೋಹಿಗಳು ಯಾರು?: ಶ್ರೀಗುರುವಾಣಿಯಲ್ಲಿದೆ ವಿವರಣೆ ವೀಕ್ಷಿಸಿ..

    ಮಕ್ಕಳನ್ನು ಬೆಳೆಸುವಲ್ಲಿ ತಾಯಿಯ ಪಾತ್ರವೇ ಮಹತ್ವದ್ದು. ಅದೃಷ್ಟವಂತರಿಗಷ್ಟೇ ಈ ಪುಣ್ಯಲಭಿಸುತ್ತದೆ. ಸತ್​ ಸಂಕಲ್ಪದಿಂದ ವಿಜಯ ಸಾಧ್ಯವಿದೆ. ತಾಯಿಯ ಆಶೀರ್ವಾದ ಒಂದಿದ್ದರೆ ಜಯ ಶತಸಿದ್ಧ. ದೇಶದ ದೊಡ್ಡ ಶತ್ರುವಾಗಿರುವ ಕರೊನಾವನ್ನು ಹೊಡೆದೋಡಿಸಿ ನಮ್ಮನ್ನು ನಾವು ಕಾಪಾಡಲು ಒಟ್ಟಾಗಿ ಹೋರಾಡಬೇಕಾದ ಸಂದರ್ಭ ಇದು ಎಂದು ಎಚ್ಚರಿಸಿದ ಸ್ವಾಮೀಜಿಯವರ ಗುರುವಾಣಿಯ ಪೂರ್ಣಪಾಠಕ್ಕೆ ಕೆಳಗಿನ ವಿಡಿಯೋ ವೀಕ್ಷಿಸಿ..

    ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಂದ ಕರೊನಾ ಸಾಂತ್ವನ

    ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ತಾಯಿಯನ್ನು ಸ್ಮರಿಸುತ್ತ ಕರೊನಾ ವಿರುದ್ಧ ಹೋರಾಟ ಮುಂದುವರಿಸುವುದು ಎಷ್ಟು ಅಗತ್ಯ ಎಂಬುದನ್ನು ಇಂದಿನ ಶ್ರೀಗುರುವಾಣಿಯಲ್ಲಿ ವಿವರಿಸಿದ್ದಾರೆ.

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಮೇ 12, 2020

    VIDEO| ಕರೊನಾದಿಂದ ಮನೆಯಲ್ಲೇ ಲಾಕ್​ ಆಗಿದ್ದೇವೆಂಬ ಬೇಸರ ಕಾಡದಿರಲು ಗುರುಗಳು ಹೇಳಿದ ಹಾಗೆ ಮಾಡಿ: ಇದು ಶ್ರೀಗುರುವಾಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts