More

    ಬೆಂಗಳೂರಿನಲ್ಲಿ ಮೇ 5ರಿಂದ ಉಚ್ಛಿಷ್ಠ ಮಹಾಗಣಪತಿ ಯಜ್ಞ

    ಬೆಂಗಳೂರು: ಜಲಕ್ಷಾಮ ನಿವಾರಣೆ ಮತ್ತು ಲೋಕಕಲ್ಯಾಣಕ್ಕಾಗಿ ಮೇ 5ರಿಂದ 14ರವರೆಗೆ ಹತ್ತು ದಿನಗಳ ಕಾಲ ಗಂಗಾನಗರದ ಹೆಚ್‌ಎಂಟಿ ಬಡಾವಣೆಯಲ್ಲಿರುವ ಶ್ರೀ ಗಂಗಾಧರೇಶ್ವರ ಮತ್ತು ಶ್ರೀಸಾಯಿ ಮಂದಿರದಲ್ಲಿ ಶ್ರೀ ಉಚ್ಛಿಷ್ಠ ಮಹಾಗಣಪತಿ ಯಜ್ಞ ಹಮ್ಮಿಕೊಳ್ಳಲಾಗಿದೆ.

    ಮಹಾಗಣಪತಿಯನ್ನು 16 ರೂಪಗಳಲ್ಲಿ ಪೂಜಿಸಲಾಗುತ್ತದೆ. ಅವುಗಳಲ್ಲಿ ಉಚ್ಛಿಷ್ಠ ಗಣಪತಿ ರೂಪವು ಅತ್ಯಂತ ಶ್ರೇಷ್ಠ ಮತ್ತು ಶಕ್ತಿಯುತ ಎಂದು ಹೇಳಲಾಗುತ್ತದೆ. ಗಣಪತಿಯ ಪರಬ್ರಹ್ಮ ಸ್ವರೂಪವನ್ನು ಉಪಾಸನೆ ಮಾಡುವುದರಿಂದ ಬರಗಾಲ ನಿವಾರಣೆ, ಎಲ್ಲೆಡೆ ಶಾಂತಿ-ಸ್ಥಿರತೆ ನೆಲೆಗೊಳ್ಳುತ್ತದೆ. ತಮಿಳುನಾಡಿನ ತಾಂಜಾವೂರಿನಲ್ಲಿ ಶ್ರೀರಮಾನಂದೇಂದ್ರ ಸರಸ್ವತಿ ಸ್ವಾಮಿಗಳು ಉಚ್ಛಿಷ್ಠ ಗಣಪತಿ ದೇವಾಲಯವನ್ನು ನಿರ್ಮಿಸಿದ್ದು ಅವರ ಶಿಷ್ಯರಾದ ಶ್ರೀ ರಾಂಭವು ಸ್ವಾಮೀಜಿ ನೇತೃತ್ವದಲ್ಲಿ ಯಜ್ಞ ನಡೆಯಲಿದೆ ಎಂದು ಶ್ರೀಉಚ್ಛಿಷ್ಠ ಮಹಾಗಣಪತಿ ಯಜ್ಞ ಸಮಿತಿಯ ಕಾರ್ಯದರ್ಶಿ ಎಂ.ಜಿ.ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts