More

    ಶ್ರೀ ಶಂಕರಾಚಾರ್ಯರ ಸಂದೇಶ ಶ್ರೇಷ್ಠ

    ಶೃಂಗೇರಿ: ಜನಸಾಮಾನ್ಯರಲ್ಲಿ ಐಕಮತ್ಯ ಉಂಟುಮಾಡಿ ಜನ್ಮ ಸಾರ್ಥಕ ಹಾದಿಯಲ್ಲಿ ಮುನ್ನಡೆಯಲು ಶ್ರೀ ಶಂಕರಾಚಾರ್ಯರು ಜಗತ್ತಿಗೆ ನೀಡಿದ ಉಪದೇಶ ಅತ್ಯಂತ ಮಹತ್ವವಾದುದು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.

    ಮಠದ ಪ್ರವಚನ ಮಂದಿರದಲ್ಲಿ ಶ್ರೀ ಶಂಕರ ಅದ್ವೈತ್ವ ವಿಜಯ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
    ಶ್ರೀ ಭಗವತ್ಪಾದರು ಲೋಕದ ಉದ್ಧಾರಕ್ಕಾಗಿ ಹಲವಾರು ಉನ್ನತ ಕಾರ್ಯಗಳನ್ನು ಮಾಡಿದ್ದಾರೆ. ಅವರು ರಚಿಸಿರುವ ಪ್ರಸ್ಥಾನತ್ರಯ ಭಾಷ್ಯಗಳು, ಸ್ತೋತ್ರಗಳು, ಪ್ರಕರಣ ಗ್ರಂಥಗಳಲ್ಲಿ ಇರುವ ಸಂದೇಶಗಳನ್ನು ಸರ್ವಶ್ರೇಷ್ಠರು ಹಾಗೂ ಜನಸಾಮಾನ್ಯರೂ ಅರ್ಥೈಸಿಕೊಳ್ಳಬಹುದು. ದೇಶದ ಉದ್ದಗಲಕ್ಕೂ ಸಂಚರಿಸಿ ಮನುಜನ ತಾಮಸ ಗುಣಗಳನ್ನು ಹೋಗಲಾಡಿಸಿ ಸಾತ್ವಿಕ ಗುಣಗಳನ್ನು ಬೆಳೆಸಲು ಅವರು ಮಾಡಿರುವ ಸತ್ಕಾರ್ಯ ಚಿರನೂತನ. ಅವರು ಹೋದ ಕಡೆ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಸನಾತನ ಮೌಲ್ಯದ ಆದ್ಯತೆಯನ್ನು ಜಗತ್ತಿಗೆ ನೀಡಿದ್ದಾರೆ ಎಂದರು.
    ವ್ಯವಹಾರದಲ್ಲಿ ದೈತ್ವ ದೃಷ್ಟಿ ಇರುವುದು ಸಹಜ ಪ್ರಕ್ರಿಯೆ. ಅಲ್ಲಿಯೇ ಇದ್ದರೂ ಅದ್ವೈತದತ್ತ ಪಯಣಿಸುವುದು ಎಲ್ಲರ ಕರ್ತವ್ಯವಾಗಬೇಕು. ಎಲ್ಲ ಜೀವಿಗಳಲ್ಲಿ ಇರುವ ಚೈತನ್ಯ ಸ್ವರೂಪ ಒಂದೇ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ ಹೆಚ್ಚಾಗಬೇಕು. ಭಕ್ತಿ, ಕರ್ಮ, ಜ್ಞಾನ ಮಾರ್ಗಗಳ ಮೂಲಕ ಸನಾತನ ಧರ್ಮದ ಶ್ರೇಯೋಭಿವೃದ್ಧಿಗಾಗಿ ಅನುಸರಿಸುವ ಜ್ಞಾನದ ಅರಿವು ಉಂಟಾದರೆ ಮಾತ್ರ ಮಾನವನು ಶ್ರೇಷ್ಠ ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts