More

    ಸುಗ್ಗಿಕಲ್ ಬಡಾವಣೆಯಲ್ಲಿ ಶ್ರೀ ನಿವಾಸ ಕಲ್ಯಾಣೋತ್ಸವ ಸಂಪನ್ನ

    ಚಿಕ್ಕಮಗಳೂರು: ನಗರದ ಸುಗ್ಗಿಕಲ್ ಬಡಾವಣೆಯ ಶ್ರೀ ಗುರು ರಾಘವೇಂದ್ರ ಯಜ್ಞಮಂಟಪದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಹೋಮ, ಹವನ, ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಸಂಪನ್ನಗೊಂಡವು.
    ಅಧಿಕಮಾಸದ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಕಳೆದ ಎರಡು ದಿನ ಸಾಮೂಹಿಕ ಭಜನೆ, ನಾಮ ಸಂಕೀರ್ತನೆ, ದಾಸ ಕೀರ್ತನೆಗಳ ಗಾಯನದ ನಡುವೆ ಬೆಂಗಳೂರಿನ ಶ್ರೀನಿವಾಸ ಉತ್ಸವ ಬಳಗದ ವಾದಿರಾಜಾಚಾರ್ ತಂಡದಿಂದ ಜರುಗಿದ ಶ್ರೀನಿವಾಸ ಹಾಗೂ ಪದ್ಮಾವತಿ ದೇವಿ ವಿವಾಹದ ವಿಧಿ ವಿಧಾನಗಳ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.
    ಕಾರ್ಯಕ್ರಮದ ಆಯೋಜಕ ಅಶ್ವತ್ಥನಾರಾಯಣಾಚಾರ್ಯ ವಸಂತಚಾರ್ಯ ಜೋಶಿ ದಂಪತಿ ಭಕ್ತರ ಪರವಾಗಿ ಕಲ್ಯಾಣೋತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಅಧಿಕಮಾಸದ ಪ್ರಯುಕ್ತ ವಿಶೇಷ ಧನ್ವಂತರಿ ಹೋಮ, 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸದ ಸಂಕೇತವಾಗಿ 33 ದಂಪತಿಗೆ ಪೂಜೆ, 33 ಬಾಗಿನ ಹಾಗೂ 33 ದಾನಗಳನ್ನು ನೀಡಲಾಯಿತು. ವಿದ್ವಾಂಸರಿಂದ ಪ್ರವಚನ ನಡೆಯಿತು. ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಕಲ್ಯಾಣೋತ್ಸವ ಪ್ರಯುಕ್ತ ತಿರುಪತಿಯ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲಿ ಗುಡಿಯನ್ನು ನಿರ್ಮಿಸಿ ಬಾಲಾಜಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಗರ ಮತ್ತು ಹೊರ ಊರುಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts